ಚಾಮರಾಜನಗರ: ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ಅರಣ್ಯದೊಳಗೆ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಆನೆಯ ಫೋಟೊ ತೆಗೆಯಲು ಹೋಗಿ ದಾಳಿಗೆ ಸಿಲುಕಿ ಪ್ರಾಣಾಪಾಯದಿಂದ ಪಾರಾಗಿದ್ದ ವ್ಯಕ್ತಿ, ಅರಣ್ಯ ನಿಯಮಗಳ ಕುರಿತು ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

ಬಂಡೀಪುರ ಹೆದ್ದಾರಿಯಲ್ಲಿ ಸಾಗುವ ವಾಹನಗಳ ಸವಾರರು ರಸ್ತೆಯಲ್ಲಿ ಸಾಗುವಾಗ ಅನುಸರಿಸಬೇಕಾದ ನಿಯಮಗಳು ಹಾಗೂ ಸುರಕ್ಷತಾ ಕ್ರಮಗಳ ಕುರಿತು ಅರಿವು ಮೂಡಿಸಲಿದ್ದಾರೆ. ಅರಣ್ಯ ಪ್ರವೇಶ ದ್ವಾರದ ಬಳಿ ನಿಂತು ಜಾಗೃತಿ ಫಲಕಗಳನ್ನು ಪ್ರದರ್ಶಿಸಲಿದ್ದಾರೆ.

‘ಅರಣ್ಯ ಕಾನೂನುಗಳ ಉಲ್ಲಂಘನೆಗಾಗಿ ಬಸವರಾಜು ಅವರಿಗೆ ಜಾಗೃತಿ ಮೂಡಿಸುವ ಶಿಕ್ಷೆ ನೀಡಿಲ್ಲ. ನಾಗರಿಕರ ಸುರಕ್ಷತೆಗಾಗಿ ಸ್ವಯಂಪ್ರೇರಿತರಾಗಿ ಜಾಗೃತಿ ಮೂಡಿಸುತ್ತಿದ್ದು, ಇಲಾಖೆ ಸಹಕಾರ ನೀಡುತ್ತಿದೆ’ ಎಂದು ಬಂಡೀಪುರ ಡಿಸಿಎಫ್ ಪ್ರಭಾಕರನ್ ಸ್ಪಷ್ಟಪಡಿಸಿದರು.
.ಬಂಡೀಪುರ ಅರಣ್ಯದ ವನ್ಯಜೀವಿಗಳ ಜೊತೆ ಹುಚ್ಚು ಸಾಹಸ: ಪ್ರಾಣಕ್ಕೆ ಸಂಚಕಾರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.