ಬುಧವಾರ, ಏಪ್ರಿಲ್ 1, 2020
19 °C

ಹನೂರು: ವಿದ್ಯುತ್‌ ತಂತಿ ತುಳಿದು ಆನೆ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹನೂರು: ಮಲೆಮಹದೇಶ್ವರ ವನ್ಯಧಾಮ ಹಾಗೂ ಕಾವೇರಿ ವನ್ಯಧಾಮದ ಗಡಿಯಂಚಿನ ಜಮೀನಿಗೆ ಅಳವಡಿಸಿದ್ದ ವಿದ್ಯುತ್ ತಂತಿ ತುಳಿದು 25 ವರ್ಷದ ಗಂಡಾನೆಯೊಂದು ಮೃತಪಟ್ಟಿದೆ.

ತಾಲ್ಲೂಕಿನ ಗುಳ್ಯ ಗ್ರಾಮದ ಚಿಕ್ಕಮಲ್ಲಯ್ಯ ಅವರು ಜಮೀನಿನಲ್ಲಿ ಬೆಳೆದಿದ್ದ ಜೋಳದ ಫಸಲಿನ ರಕ್ಷಣೆಗಾಗಿ  ಜಮೀನಿನ ಸುತ್ತಲು ತಂತಿ ಅಳವಡಿಸಿ ಅದಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದರು. ಸೋಮವಾರ ರಾತ್ರಿ ಜಮೀನಿಗೆ ಬಂದ ಒಂಟಿ ಕಾಡಾನೆ ವಿದ್ಯುತ್ ಸಂಪರ್ಕದಿಂದ ಮೃತಪಟ್ಟಿದೆ.

ಸೋಮವಾರ ರಾತ್ರಿ ಸುಮಾರು 10ಗಂಟೆ  ಘಟನೆ ಸಂಭವಿಸಿರಬಹುದು. ಆನೆ ಸತ್ತಿರುವ ವಿಷಯವನ್ನು ಗುಟ್ಟಾಗಿಡುವ ಸಲುವಾಗಿ ಆನೆ ಮೃತ ದೇಹದ ಮೇಲೆ ಜೋಳದ ಕಡ್ಡಿ ಮುಚ್ಚಿಡಲಾಗಿತ್ತು. ಖಚಿತ ಮಾಹಿತಿ ಆಧರಿಸಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಆನೆ ಸತ್ತಿರುವ ವಿಚಾರ ಗೊತ್ತಾಗಿದೆ. ಆನೆಯ ಸೊಂಡಿಲು ಹಾಗೂ ಮುಂದಿನ ಕಾಲುಗಳಲ್ಲಿ ತಂತಿ ಸುತ್ತಿಕೊಂಡಿದ್ದು ವಿದ್ಯುತ್ ಸಂಪರ್ಕದಿಂದಲೇ ಆನೆ ಮೃತಪಟ್ಟಿದೆ ಎಂಬುದನ್ನು ಅರಣ್ಯಾಧಿಕಾರಿಗಳು ದೃಢಪಡಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು