ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಿಧಾನ್ಯ ಮೇಳಕ್ಕೆ ಕೃಷಿಕರ ದಂಡು

Published 7 ಜನವರಿ 2024, 13:58 IST
Last Updated 7 ಜನವರಿ 2024, 13:58 IST
ಅಕ್ಷರ ಗಾತ್ರ

ಯಳಂದೂರು: ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಹಮ್ಮಿಕೊಂಡಿರುವ ಸಿರಿಧಾನ್ಯ ಮತ್ತು ಸಾವಯವ ಅಂತರಾಷ್ಟ್ರೀಯ ವಾಣಿಜ್ಯ ಮೇಳಕ್ಕೆ ತಾಲ್ಲೂಕಿನ 50ಕ್ಕೂ ಹೆಚ್ಚಿನ ರೈತರು ಭಾನುವಾರ ಮುಂಜಾನೆ ತೆರಳಿದರು.

ಕೃಷಿ ಅಧಿಕಾರಿ ಎ.ವೆಂಕಟರಂಗಶೆಟ್ಟಿ ಮಾತನಾಡಿ, ‘ಕೃಷಿ ಇಲಾಖೆ ಸಿರಿಧಾನ್ಯ ಬೆಳೆಗಾರರನ್ನು ಪ್ರೋತ್ಸಾಹಿಸಲು ಹಾಗೂ ಅವುಗಳ ಮಹತ್ವ ತಿಳಿಸುವ ದೆಸೆಯಲ್ಲಿ ಕೃಷಿಕರನ್ನು ಮೇಳಕ್ಕೆ ಕಳುಹಿಸಲಾಗಿದೆ. ಸರ್ಕಾರ ನೀಡುವ ಧನಸಹಾಯ ಪಡೆದು ಅನ್ನದಾತರು ಮುಂದಿನ ದಿನಗಳಲ್ಲಿ ಸಿರಿಧಾನ್ಯ ಕೃಷಿಯಲ್ಲಿ ತೊಡಗಲು ಸಹಾಯ ಆಗಲಿದೆ. ಹೊಸ ತಳಿಯ ಹಸುಗಳ ಪರಿಚಯ, ಆಡಿನ ಹಾಲಿನ ಮಹತ್ವ, ಕಪ್ಪು ಬೆಲ್ಲ ಹಾಗೂ ಸವಿರುಚಿ ಆಹಾರಗಳ ಸಮಗ್ರ ವಿಷಯಗಳ ಬಗ್ಗೆ ಬೇಸಾಯಗಾರರು ತಿಳಿಯುವರು’ ಎಂದರು.

ಕೃಷಿ ಇಲಾಖೆಯ ನಾಗೇಂದ್ರ ಹಾಗೂ ರೈತರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT