ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೀಜೋಪಚಾರದಿಂದ ಉತ್ತಮ ಇಳುವರಿ ಸಾಧ್ಯ: ನಿಶಾಂಕ್‍ ಕಿಲಾರ

Published 4 ಜುಲೈ 2024, 14:35 IST
Last Updated 4 ಜುಲೈ 2024, 14:35 IST
ಅಕ್ಷರ ಗಾತ್ರ

ಸಂತೇಮರಹಳ್ಳಿ: ‘ರೈತರು ಬೆಳೆಯುವ ದ್ವಿದಳ ಧಾನ್ಯ ಬೆಳೆಗಳನ್ನು ಬೀಜೋಪಚಾರ ಮೂಲಕ ಬಿತ್ತನೆ ಮಾಡಿದರೆ ಹೆಚ್ಚು ಇಳುವರಿ ಪಡೆಯಲು ಸಾಧ್ಯವಾಗುತ್ತದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ವಿಷಯ ತಜ್ಞ ನಿಶಾಂಕ್‍ ಕಿಲಾರ ತಿಳಿಸಿದರು.

ಸಮೀಪದ ಕೆ.ಮೂಕಹಳ್ಳಿಯಲ್ಲಿ ರೈತರು ಬೆಳೆದಿರುವ ಹೆಸರು ಬೆಳೆ ಪರಿಶೀಲಿಸಿ ಮಾತನಾಡಿದ ಅವರು, ‘ಇತ್ತೀಚಿನ ದಿನಗಳಲ್ಲಿ ರೈತರು ಬೆಳೆಯುವ ಬೆಳೆಗಳನ್ನು ಬೀಜೋಪಚಾರ ಅನುಸರಣೆ ಮಾಡುವ ಮೂಲಕ ಬಿತ್ತನೆ ಮಾಡದೇ ಇರುವ ಹಿನ್ನೆಲೆಯಲ್ಲಿ ಇಳುವರಿ ಪ್ರಮಾಣ ಕುಂಠಿತವಾಗುತ್ತಿದೆ. ಆದ್ದರಿಂದ ರೈತರು ಬೆಳೆಯುವ ದ್ವಿದಳಧಾನ್ಯ ಬೆಳೆಗಳನ್ನು ಬೀಜೋಪಚಾರ ಮೂಲಕ ಬಿತ್ತನೆ ಮಾಡಿದರೇ ಉತ್ತಮ ಇಳುವರಿ ಪಡೆದುಕೊಳ್ಳಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

‘ರೈತರು ಗುಣಮಟ್ಟದ ಬಿತ್ತನೆ ಬೀಜ ತಳಿಗಳ ಆಯ್ಕೆ ಮಾಡಿಕೊಳ್ಳಬೇಕು. ಬೆಳೆಗಳಿಗೆ ಪ್ರಾಥಮಿಕ ಹಂತದಲ್ಲಿ ಕಾಣಿಸಿಕೊಳ್ಳುವ ರೋಗ ನಿಯಂತ್ರಣ ಮಾಡಲು ರೈತ ಸಂಪರ್ಕ ಕೇಂದ್ರದಲ್ಲಿ ದೊರಕುವ ಔಷಧಿಗಳನ್ನು ನೀರಿನ ಮೂಲಕ ಸಿಂಪಡಿಸಿದರೇ ರೋಗ ನಿಯಂತ್ರಣಕ್ಕೆ ತರಲು ಸಾಧ್ಯವಾಗುತ್ತದೆ’ ಎಂದರು.

‘ಈ ಹಿನ್ನೆಲೆಯಲ್ಲಿ ರೈತರು ಜಮೀನಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದ್ವಿದಳ ಧಾನ್ಯ ಬೆಳೆಗಳನ್ನು ಬೆಳೆದಷ್ಟು ಸಾರಜನಿಕ ಅಂಶ ಹೆಚ್ಚಾಗಿ ಫಲವತ್ತತೆ ಪ್ರಮಾಣವೂ ಹೆಚ್ಚಾಗುತ್ತದೆ’ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ನಂಜುಂಡೇಗೌಡ, ಮಹದೇವಗೌಡ, ಹರದನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ರೋಗಶಾಸ್ತ್ರ ತಜ್ಞ ರಜತ್, ಸಂತೇಮರಹಳ್ಳಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಪಾಪಣ್ಣ, ಜಿಲ್ಲಾ ಆತ್ಮ ಯೋಜನೆ ಸಂಯೋಜಕಿ ರಂಜಿತಾ, ಆತ್ಮ ಯೋಜನೆ ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕ ಜಗದೀಶ್, ಎಟಿಎಂ ನಂದಿನಿ ಹಾಗೂ ಹಲವು ರೈತರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT