ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂವುಗಳ ಧಾರಣೆ ಕುಸಿತ; ಈರುಳ್ಳಿ ಮತ್ತೆ ₹10 ಅಗ್ಗ

ಶುಂಠಿ, ಚಿಕನ್‌ ಬೆಲೆ ಹೆಚ್ಚಳ
Last Updated 21 ಜನವರಿ 2020, 10:38 IST
ಅಕ್ಷರ ಗಾತ್ರ

ಚಾಮರಾಜನಗರ: ಸಂಕ್ರಾಂತಿ ಹಬ್ಬದ ಬಳಿಕ ಮಾರುಕಟ್ಟೆಯಲ್ಲಿ ಹೂವುಗಳ ಧಾರಣೆಯಲ್ಲಿ ಭಾರಿ ಕುಸಿತವಾಗಿದೆ.

ಹೂವುಗಳು ಅಗ್ಗ: ಬಿಡಿ ಹೂವುಗಳಮಾರುಕಟ್ಟೆಯಲ್ಲಿ ಕಳೆದವಾರ ಕೆಜಿಗೆ ₹600 ಇದ್ದ ಕನಕಾಂಬರ, ಈ ವಾರ ₹400ಕ್ಕೆ ಇಳಿದಿದೆ. ಚೆಂಡು ಹೂ₹30, ಸುಗಂಧರಾಜ₹80, ಸುಗಂಧ ರಾಜ ಹಾರ₹100, ಕಾಕಡ₹ 400, ಗುಲಾಬಿ (100ಕ್ಕೆ)₹200, ಸೇವಂತಿ₹ 60 ಕಡಿಮೆಯಾಗಿದೆ.

‘ಕಳೆದ ವಾರದ ವರೆಗೂ ಹೂವುಗಳಿಗೆ ಬೇಡಿಕೆ ಇತ್ತು.ಎರಡು ದಿನಗಳಿಂದ ಬೇಡಿಕೆ ಕುಸಿದಿದೆ. ಮುಂದಿನ ವಾರದವರೆಗೂ ಬೆಲೆಯಲ್ಲಿ ವ್ಯತ್ಯಾಸವಾಗುವುದಿಲ್ಲ. ಸೋಮವಾರ, ಶುಕ್ರವಾರದ ಹಿಂದಿನ ದಿನ ಮಾತ್ರ ಬೆಲೆ ಕೊಂಚ ಏರಿಕೆ ಇರಲಿದೆ’ ಎಂದು ಬಿಡಿ ಹೂವುಗಳ ವ್ಯಾಪಾರಿ ರವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಶುಂಠಿ, ಬೀಟ್‌ರೂಟ್‌ ಏರಿಕೆ: ತರಕಾರಿಗಳ ಪೈಕಿ ಈರುಳ್ಳಿ ಬೆಲೆ ಮತ್ತೆ ₹10 ಇಳಿದಿದೆ.ಬೂದು ಕುಂಬಳಕಾಯಿ, ಹಸಿಮೆಣಸಿನ ಕಾಯಿಯ ಬೆಲೆ ₹5 ಕಡಿಮೆಯಾಗಿದೆ. ಆಲೂಗೆಡ್ಡೆ,ಬದನೆಕಾಯಿ₹5, ಬೀಟ್‌ರೂಟ್‌₹15, ಶುಂಠಿ₹20 ಏರಿಕೆ ಕಂಡುಬಂದಿದೆ.

ಹಣ್ಣುಗಳಲ್ಲಿ ಮೂಸಂಬಿ₹20, ದ್ರಾಕ್ಷಿ,ಏಲಕ್ಕಿ ಬಾಳೆ ₹10 ಏರಿಕೆ ಕಂಡಿದೆ. ಸಪೋಟಾ₹ 10 ಇಳಿಕೆ ಕಂಡಿದೆ. ಉಳಿದಂತೆ ಎಲ್ಲ ಹಣ್ಣುಗಳ ಬೆಲೆಯಲ್ಲಿ ವ್ಯತ್ಯಾಸ ಕಂಡು ಬಂದಿಲ್ಲ.

‘ಎಪಿಎಂಸಿ ಮಾರುಕಟ್ಟೆಯಲ್ಲಿನ ಬೆಲೆಗೆ ಅನುಗುಣವಾಗಿ ಹಾಪ್‌ಕಾಮ್ಸ್‌ನಲ್ಲಿ ತರಕಾರಿಗಳನ್ನು ಮಾರಾಟ ಮಾಡುತ್ತೇವೆ. ದಾಸ್ತಾನು ಇದ್ದರೂ ಹಿಂದಿನ ಬೆಲೆಗೆ ಮಾರಾಟ ಮಾಡುತ್ತೇವೆ. ಮದುವೆ ಸಂದರ್ಭದಲ್ಲಿ ತರಕಾರಿಗಳ ಮಾರಾಟ ಚುರುಕಾಗಿರುತ್ತದೆ. ಹಣ್ಣುಗಳ ಪೈಕಿ ಈ ವಾರ ಮೂಸಂಬಿ ಬೆಲೆ ಏರಿಕೆ ಇದೆ’ ಎಂದು ಹಾಪ್‌ಕಾಮ್ಸ್‌ ವ್ಯಾಪಾರಿ ಮಧು ಹೇಳುತ್ತಾರೆ.

ಚಿಕನ್‌ ₹20 ತುಟ್ಟಿ

ಪ್ರತಿ ಮೂರು ದಿನಗಳಿಗೆ ಬದಲಾಗುವ ಮೊಟ್ಟೆ ದರ ಈ ವಾರ₹10 ಕಡಿಮೆ ಆಗಿದೆ. ಕಳೆದ ವಾರ₹ 435 ಇದ್ದ ಮೊಟ್ಟೆ ಬೆಲೆ ಸೋಮವಾರ₹ 425 ಇತ್ತು.

ಮಾಂಸ ಮಾರುಕಟ್ಟೆಯಲ್ಲಿ ಚಿಕನ್‌ ಬೆಲೆ₹20 ಹೆಚ್ಚಳವಾಗಿದೆ. ಉಳಿದ ಮಾಂಸಗಳ ಧಾರಣೆ ಯಥಾಸ್ಥಿತಿ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT