ಎತ್ತಿನ ಗಾಡಿ ಮೂಲಕ ಆಹಾರ ಪದಾರ್ಥ ವಿತರಣೆ

ಗುಂಡ್ಲುಪೇಟೆ: ತಾಲ್ಲೂಕಿನ ಕಾಡಂಚಿನ ಗ್ರಾಮದಲ್ಲಿರುವ ಹೊಂಗಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಅಕ್ಷರ ದಾಸೋಹದ ನಡಿಗೆ ಮಕ್ಕಳ ಮನೆ ಕಡೆಗೆ ಎಂಬ ಘೋಷವಾಕ್ಯದಡಿ ಎತ್ತಿನ ಗಾಡಿಗಳ ಮೂಲಕ ಆಹಾರ ಪದಾರ್ಥಗಳನ್ನು ವಿತರಿಸಲಾಯಿತು.
ಶಾಲೆಯ ಮುಖ್ಯ ಶಿಕ್ಷಕ ಬಿ.ಮಹ ದೇಶ್ವರಸ್ವಾಮಿ ಮಾತನಾಡಿ, ಕೊರೊನಾ ಮುಂಜಾಗ್ರತಾ ಕ್ರಮ ಅನುಸರಿಸಿ ಶಾಲೆ ವತಿಯಿಂದ ಎಸ್‍ಡಿಎಂಸಿ ಸದಸ್ಯರ ಸಹಕಾರದಿಂದ ಬೆಳಿಗ್ಗೆ 8 ರಿಂದ 10 ರವರೆಗೆ ಶಾಲೆ 111 ಮಕ್ಕಳ ಮನೆ ಮನೆಗೆ ಎತ್ತಿನಗಾಡಿ ಮೂಲಕ ತೆರಳಿ ಸರ್ಕಾರ ನಿಗದಿಪಡಿಸಿರುವ ಪ್ರಮಾಣದಲ್ಲಿ 83 ದಿನದ ಅಕ್ಕಿ, ಗೋಧಿ, ಎಣ್ಣೆ, ಉಪ್ಪು ಆಹಾರ ಪದಾರ್ಥಗಳನ್ನು ವಿತರಿಸಲಾಗಿದೆ ಎಂದರು.
ಶಾಲೆಗಳು ಮುಚ್ಚಿರುವುದರಿಂದ ಬಿಸಿಯೂಟ ಇಲ್ಲದ ಪರಿಣಾಮ ಶಿಕ್ಷಣ ಇಲಾಖೆಯು ಮಕ್ಕಳ ಅನುಕೂಲಕ್ಕಾಗಿ ಪಡಿತರ ವಿತರಿಸಿದ್ದು, ಇದರ ಜೊತೆಗೆ ದಾನಿಗಳ ಸಹಕಾರದಿಂದ ಪ್ರತಿ ವಿದ್ಯಾರ್ಥಿಗೆ ಒಂದು ಡಜನ್ ಬಿಸ್ಕೆಟ್ ವಿತರಿಸಿ ಕೊರೊನಾ ಜಾಗೃತಿ ಮೂಡಿಸಲಾಗಿದೆ ಎಂದರು.
ಎಸ್‍ಡಿಎಂಸಿ ಅಧ್ಯಕ್ಷ ಮಾದಪ್ಪ, ಉಪಾಧ್ಯಕ್ಷ ಸುಬ್ಬಪ್ಪ, ಸದಸ್ಯ ಸ್ವಾಮಿ, ಗುರುಸ್ವಾಮಿ, ಸುಧಾ, ರಾಣಿ ಸಮವಸ್ತ್ರ ಧರಿಸಿ ಗಮನ ಸೆಳೆದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.