ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ; 14 ಬೋಧಕರ ಆಯ್ಕೆ

Last Updated 5 ಸೆಪ್ಟೆಂಬರ್ 2021, 7:14 IST
ಅಕ್ಷರ ಗಾತ್ರ

ಚಾಮರಾಜನಗರ: 2021–22ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ 14 ಮಂದಿ ಆಯ್ಕೆಯಾಗಿದ್ದಾರೆ.

ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲಾ ವಿಭಾಗಗಳ ತಲಾ ಐವರು, ಪ್ರೌಢ ಶಾಲಾ ವಿಭಾಗದಲ್ಲಿ ನಾಲ್ವರನ್ನು ಆಯ್ಕೆ ಮಾಡಲಾಗಿದೆ.

ಕಿರಿಯ ಪ್ರಾಥಮಿಕ ಶಾಲಾ ವಿಭಾಗ: ಬಿ.ಎಸ್‌.ಲತಾ, ಸ.ಕಿ.ಪ್ರಾ ಶಾಲೆ ಕರಡಿಮೋಳೆ– ಚಾಮರಾಜನಗರ ತಾಲ್ಲೂಕು, ಸಿ.ಪರಿಮಳ, ಸ.ಕಿ.ಪ್ರಾ. ಶಾಲೆ ಮೂಕಹಳ್ಳಿ– ಗುಂಡ್ಲುಪೇಟೆ ತಾಲ್ಲೂಕು, ಸಿ.ಮಾದೇಶ, ಸ.ಕಿ.ಪ್ರಾಥಮಿಕ ಶಾಲೆ, ಸೇಬಿನಕೋಬೆ– ಹನೂರು ತಾಲ್ಲೂಕು, ಗೋಪಾಲಸ್ವಾಮಿ, ಸ.ಕಿ.ಪ್ರಾ.ಶಾಲೆ, ಬೂದುಗಟ್ಟಿದೊಡ್ಡಿ–ಕೊಳ್ಳೇಗಾಲ ತಾಲ್ಲೂಕು ಮತ್ತು ನಾಗೇಶ್‌, ಅನುದಾನಿತ ವಿವೇಕಾನಂದ ಗಿರಿಜನ ಹಿ.ಪ್ರಾ ಶಾಲೆ ಬಿಳಿಗಿರಿರಂಗನಬೆಟ್ಟ–ಯಳಂದೂರು ತಾಲ್ಲೂಕು.

ಹಿರಿಯ ಪ್ರಾಥಮಿಕ ಶಾಲಾ ವಿಭಾಗ: ಎನ್‌.ಎಸ್‌.ಮಹದೇವಸ್ವಾಮಿ, ಮುಖ್ಯ ಶಿಕ್ಷಕ ಸ.ಹಿ.ಪ್ರ.ಶಾಲೆ ಮಸಣಾಪುರ–ಚಾಮರಾಜನಗರ ತಾಲ್ಲೂಕು, ಮಹದೇಶ್ವರಸ್ವಾಮಿ, ಮುಖ್ಯ ಶಿಕ್ಷಕ, ಸ.ಹಿ.ಪ್ರ.ಶಾಲೆ ಹೊಂಗಹಳ್ಳಿ– ಗುಂಡ್ಲುಪೇಟೆ ತಾಲ್ಲೂಕು, ಸಾವಿತ್ರಿ ಎಚ್‌.ಎನ್‌. ಉನ್ನತೀಕರಿಸಿದ ಸ.ಹಿ.ಪ್ರ.ಶಾಲೆ ರಾಮಾಪುರ–ಹನೂರು ತಾಲ್ಲೂಕು, ವೆಂಕಟರಾಜು, ದೈಹಿಕ ಶಿಕ್ಷಣ ಶಿಕ್ಷಕ, ಸ.ಹಿ.ಪ್ರ.ಶಾಲೆ, ಇಕ್ಕಡಹಳ್ಳಿ–ಕೊಳ್ಳೇಗಾಲ ತಾಲ್ಲೂಕು ಮತ್ತು ಉಮಾ ಟಿ., ಸ.ಹಿ.ಪ್ರ.ಶಾಲೆ, ಕಟ್ನವಾಡಿ– ಯಳಂದೂರು ತಾಲ್ಲೂಕು.

ಪ್ರೌಢ ಶಾಲಾ ವಿಭಾಗ: ಕೆ.ಬಿ.ರವೀಂದ್ರ, ಜೆಎಸ್‌ಎಸ್‌ ಪ್ರೌಢಶಾಲೆ, ಚಾಮರಾಜನಗರ, ಮಲ್ಲು ಎಂ. ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಗುಂಡ್ಲುಪೇಟೆ, ರಾಜಮ್ಮ ಆರ್‌, ಸರ್ಕಾರಿ ಪ್ರೌಢಶಾಲೆ ಸಿಂಗಾನಲ್ಲೂರು, ಕೊಳ್ಳೇಗಾಲ ತಾಲ್ಲೂಕು ಮತ್ತು ಶೇಷಾದ್ರಿ ಎಂ, ದೈಹಿಕ ಶಿಕ್ಷಣ ಶಿಕ್ಷಕ ಮಾಂಬಳ್ಳಿ, ಯಳಂದೂರು ತಾಲ್ಲೂಕು.

ನಗರದಲ್ಲಿ ಭಾನುವಾರ ನಡೆಯಲಿರುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ಶಿಕ್ಷಕರ ದಿನಾಚರಣೆ:ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಮತ್ತು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಜೆ.ಎಚ್‌. ಪಟೇಲ್ ಸಭಾಂಗಣದಲ್ಲಿ ಭಾನುವಾರ (ಸೆ.5) ಬೆಳಿಗ್ಗೆ 11 ಗಂಟೆಗೆ ಆಯೋಜಿಸಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಅಧ್ಯಕ್ಷತೆ ವಹಿಸುವರು.ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎಂ. ರಾಮಚಂದ್ರ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪಿ.ಬಿ. ಶಾಂತಮೂರ್ತಿ, ನಗರಸಭಾ ಅಧ್ಯಕ್ಷರಾದ ಸಿ.ಎಂ. ಆಶಾ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಮೈಸೂರಿನ ಸೋಮಾನಿ ಬಿ.ಇ.ಡಿ. ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರಾದ ಪ್ರೊ.ಎಚ್. ಎಸ್.ಮಲ್ಲಿಕಾರ್ಜುನ ಶಾಸ್ತ್ರಿ ಅವರು ಮುಖ್ಯ ಭಾಷಣ ಮಾಡುವರು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT