ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡ್ಲುಪೇಟೆ | ಕಾಡಾನೆ ದಾಳಿ: ಟೊಮೆಟೊ ನಾಶ

Published 14 ಡಿಸೆಂಬರ್ 2023, 14:44 IST
Last Updated 14 ಡಿಸೆಂಬರ್ 2023, 14:44 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶ ಓಂಕಾರ ವಲಯದ ಮಂಚಹಳ್ಳಿ ಗ್ರಾಮದಲ್ಲಿ ಜಮೀನುಗಳಲ್ಲಿ ಮಾರುಕಟ್ಟೆ ಸಾಗಿಸಲೆಂದು ರೈತರು ಕ್ರೇಟ್‍ಗಳಲ್ಲಿ ಸಂಗ್ರಹಿಸಿಟ್ಟಿದ್ದ  ಟೊಮೆಟೊ ಗಳನ್ನು ಕಾಡಾನೆಗಳು ನಾಶಪಡಿಸಿದೆ.

ಗ್ರಾಮದ ನಾಗೇಂದ್ರ ಮತ್ತು ಸ್ವಾಮಿಗೌಡ ನಷ್ಟ ಅನುಭವಿಸಿದ ರೈತರು. ಮಂಗಳವಾರ ರಾತ್ರಿ ಆಹಾರ ಅರಸಿ ಬಂದ ಕಾಡಾನೆ ಟೊಮೆಟೋ ಅನ್ನು ತಿಂದು, ತುಳಿದು, ಚಲ್ಲಾಪಿಲ್ಲಿ ಮಾಡಿ ನಾಶಪಡಿಸಿವೆ. ಇಬ್ಬರೂ ತಮ್ಮ ಜಮೀನುಗಳಲ್ಲಿ ಬೆಳೆದಿರುವ ಟೊಮೆಟೊ ಹಣ್ಣುಗಳನ್ನು ಮಾರುಕಟ್ಟೆ ಸಾಗಿಸಲು ವಿಂಗಡನೆ ಮಾಡಿ ಕ್ರೇಟ್‍ಗಳಲ್ಲಿ ತುಂಬಿಸಿಟ್ಟಿದ್ದರು.

ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಕೆ.ಜಿ.ಗೆ ₹23 ಇದೆ. ಆನೆ ದಾಳಿಯಿಂದ ರೈತರಿಗೆ ಸಾವಿರಾರು ರೂಪಾಯಿ ನಷ್ಟ ಆಗಿದೆ.  ಅರಣ್ಯ ಇಲಾಖೆಯವರು ಸೂಕ್ತ ಪರಿಹಾರ ಕೊಡಿಸಬೇಕು. ಕಾಡಾನೆ ಹಾವಳಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT