ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಬಿಳಿಗಿರಿರಂಗನ ಬೆಟ್ಟ ಈಗ ಮಂಜಿನಬೆಟ್ಟ, ಚಳಿಯ ಕಚಗುಳಿ

ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಬಿಳಿಗಿರಿರಂಗನ ಕ್ಷೇತ್ರ  
Last Updated 6 ಜುಲೈ 2022, 6:29 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯ ಪ್ರಸಿದ್ಧ ಯಾತ್ರಾಸ್ಥಳ ಹಾಗೂ ಪ್ರವಾಸಿ ತಾಣವಾಗಿರುವ ಬಿಳಿಗಿರಿರಂಗನಬೆಟ್ಟ ಈಗ ಮಂಜಿನ ಬೆಟ್ಟವಾಗಿ ಬದಲಾಗಿದೆ.

ನಿರಂತರ ಮಳೆ, ಮೋಡ ಕವಿದ ವಾತಾವರಣ ಹಾಗೂ ಚಳಿ ಗಾಳಿಯಿಂದ ಬಿಳಿಗಿರಿರಂಗನಬೆಟ್ಟ ಪೂರ್ತಿ ಮಂಜಿನಿಂದ ಮುಸುಕಿದ್ದು ಪ್ರವಾಸಿಗರನ್ನು ಸೆಳೆಯುತ್ತಿದೆ.

ರಾಜ್ಯದ ವಿವಿಧ ಭಾಗಗಳಲ್ಲಿ ಮುಂಗಾರು ಮಳೆ ಬಿರುಸು‌ ಪಡೆದ ಬಳಿಕ, ಜಿಲ್ಲೆಯಲ್ಲೂ ಸಾಧಾರಣ ಮಳೆಯಾಗುತ್ತಿದೆ.

ಬಿಳಿಗಿರಿರಂಗನಾಥಸ್ವಾಮಿ ದೇವಾಲಯ (ಬಿಆರ್ ಟಿ) ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಗೆ ಬರುವ ಬಿಳಿಗಿರಿರಂಗನ ಬೆಟ್ಟದಲ್ಲಿ ವಾರದಿಂದೀಚೆಗೆ ದಟ್ಟ ಮಂಜಿನ ವಾತಾವರಣ ಇದೆ. ವೇಗವಾಗಿ ಬೀಸುವ ಶೀತಗಾಳಿಯಿಂದ ಥರಗುಟ್ಟುವ ಚಳಿಯ ಅನುಭವವಾಗುತ್ತಿದೆ. ಬೆಟ್ಟದಲ್ಲಿ ವಾತಾವರಣದ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿದೆ.

ಬೆಳಿಗ್ಗೆ 11 ಗಂಟೆಯಾದರೂ ಮಂಜು ತಿಳಿಯಾಗುತ್ತಿಲ್ಲ. ಬೆಟ್ಟದ ಸುತ್ತ ಗಾಳಿಗೆ ಚಲಿಸುವ ಮಂಜಿನ ದೃಶ್ಯಾವಳಿಗಳು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

'ಆಷಾಢ ಆರಂಭವಾದಾಗಿನಿಂದ ಬೆಟ್ಟದಲ್ಲಿ ಮಳೆಯಾಗುತ್ತಿದೆ. ಪ್ರತಿ ದಿನವೂ ದಟ್ಟ ಇಬ್ಬನಿ ಸುರಿಯುತ್ತಿದೆ. ಮಧ್ಯಾಹ್ನವಾದರೂ ತಿಳಿಯಾಗುತ್ತಿಲ್ಲ. ಶೀತಗಾಳಿಯಿಂದಾಗಿ ತೀವ್ರ ಚಳಿಯೂ ಇದೆ. ಶ್ರಾವಣದವರೆಗೂ ಇದೇ ವಾತಾವರಣ ಇರಲಿದೆ. ಈ ಸಮಯದಲ್ಲೇ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ' ಎಂದು ದೇವಾಲಯದಲ್ಲಿ ಹೂವಿನ ವ್ಯಾಪಾರ ಮಾಡುತ್ತಿರುವ ಮಣಿ 'ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT