ಸಂತೇಮರಹಳ್ಳಿ: ಮೂಗೂರು ತ್ರಿಪುರಸುಂದರಿ ಬಂಡಿ ಜಾತ್ರೆ ಅಂಗವಾಗಿ ಕಮರವಾಡಿ ಗ್ರಾಮದಲ್ಲಿ ಶನಿವಾರ ಈಚೆಗೆ ಬಂಡಿ ಮೆರವಣಿಗೆ ವಿಜೃಂಭಣೆಯಿಂದ ನೆರವೇರಿತು.

ಕಮರವಾಡಿ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಬಂಡಿ ಹಾಗೂ ಎತ್ತುಗಳನ್ನು ಸ್ವಚ್ಫಗೊಳಿಸಿ ಬಣ್ಣಬಣ್ಣದ ಬಟ್ಟೆಗಳನ್ನು ಕಟ್ಟಿ ನಾನಾ ಬಗೆಯ ಹೂವು ಹೊಂಬಾಳೆ, ಬಾಳೆಗೊನೆ, ಬಾಳೆಕಂದು, ಎಳನೀರುಗಳನ್ನು ಕಟ್ಟಿ ಬಂಡಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಮೂಗೂರು ತ್ರಿಪುರಸುಂದರಿ ದೇವಸ್ಥಾನ ಆವರಣದಲ್ಲಿ ವಾದ್ಯಮೇಳಗಳ ಮೂಲಕ ಪ್ರದರ್ಶನ ಹಾಕಿ ನಂತರ ಗ್ರಾಮಕ್ಕೆ ಮೆರವಣಿಗೆ ಮೂಲಕ ಬಂಡಿ ಆಗಮಿಸಿತು. ಸಂಜೆ ಗ್ರಾಮದ ಎಲ್ಲ ಸಮುದಾಯ ಮುಖಂಡರ ಸಮ್ಮುಖದಲ್ಲಿ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ವಾಧ್ಯಗೋಷ್ಠಿ, ತಮಟೆ ಸದ್ದಿನ ಮೂಲಕ ಬಂಡಿ ಮೆರವಣಿಗೆ ನಡೆಯಿತು.

ಬಂಡಿ ಹಬ್ಬದ ನಿಮಿತ್ತ ಬಸವೇಶ್ವರ, ಮಾರಮ್ಮ ದೇವಸ್ಥಾನ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ತಳಿರು ತೋರಣ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಸಂತೇಮರಹಳ್ಳಿ ಠಾಣೆಯಿಂದ ಬಂಡಿ ಮೆರವಣಿಗೆಗೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಯಿತು.

ಚಾಮುಲ್ ನಾಮ ನಿರ್ದೇಶಕ ಕಮರವಾಡಿ ರೇವಣ್ಣ, ಬಂಡಿ ಹಬ್ಬದ ಆಚರಣ ಸಮಿತಿ ಸದಸ್ಯರಾದ ಕೊಟ್ಟೂರಪ್ಪ, ಗೌಡಿಕೆ ಸುರೇಶ್, ಮಹದೇವಯ್ಯ, ಕುಳ್ಳಶೆಟ್ಟಿ, ಕೆ.ಪಿ.ಮಹದೇವಸ್ವಾಮಿ, ಪರಶಿವಪ್ಪ, ಶಿವನಂಜಯ್ಯ, ಮಹೇಶ್, ನಂಜುಂಡಪ್ಪ, ಶಿವಸ್ವಾಮಿ, ಅಶೋಕ್, ಬಸವೇಶ್ವರ ಯುವಕ ಮಿತ್ರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.