ಚಾಮರಾಜನಗರ: ತಾಲ್ಲೂಕಿನ ಕಿಲಗೆರೆ ಗ್ರಾಮದ ಬಸವೇಶ್ವರ ದೇವಸ್ಥಾನದ ಮುಂಭಾಗ ಈಚೆಗೆ ಬಸವ ಬಳಗದ ವತಿಯಿಂದ ಬಸವ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಗ್ರಾಮದ ಗಣ್ಯರು ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಬಸವ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಬಸವೇಶ್ವರರ ಪುತ್ಥಳಿ ಹಾಗೂ ಭಾವಚಿತ್ರವನ್ನು ಮೆರವಣಿಗೆ ನಡೆಸಲಾಯಿತು. ಮಂಗಳವಾದ್ಯ, ವೀರಗಾಸೆ ಸೇರಿದಂತೆ ಹಲವು ಕಲಾ ಪ್ರಕಾರಗಳು ಭಾಗವಹಿಸಿದ್ದವು. ದೇವಸ್ಥಾನದಿಂದ ಹೊರಟ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿತು. ಅನ್ನ ಸಂತರ್ಪಣೆ ನಡೆಯಿತು.

ನಂಜನಗೂಡು ತಾಲ್ಲೂಕಿನ ಬದನವಾಳು ಶಿವಕುಮಾರಶಾಸ್ತ್ರೀ, ಭರತ್ಕುಮಾರ ಶಾಸ್ತ್ರೀ ತಂಡದಿಂದ ಬಸವೇಶ್ವರರ ಜೀವನ ಚರಿತ್ರೆ ಕುರಿತು ಹರಿಕಥೆ ನಡೆಯಿತು.

ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಬಸವೇಶ್ವರರ ಫ್ಲೆಕ್ಸ್ಗಳು ಗ್ರಾಮದಲ್ಲಿ ರಾರಾಜಿಸುತ್ತಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.