ಕೊಳ್ಳೇಗಾಲ: ಉಪ್ಪಾರ ಮೋಳೆ ಬಡಾವಣೆಯ ಸೋನಾಕ್ಷಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಮಾದೇಶನ ಮನೆಯ ಮೇಲೆ ಭಾನುವಾರ ರಾತ್ರಿ ದಾಳಿ ನಡೆಸಲಾಗಿದ್ದು, ಎರಡು ಮನೆಗಳನ್ನು ಧ್ವಂಸಗೊಳಿಸಲಾಗಿದೆ.

ಮನೆಯಲ್ಲಿದ್ದ ಟಿವಿ, ಫ್ಯಾನ್, ಕುರ್ಚಿ, ಪಾತ್ರೆ ಸೇರಿದಂತೆ ಗೃಯೋಪಯೋಗಿ ವಸ್ತುಗಳನ್ನು ಪುಡಿಗಟ್ಟಿದ್ದಾರೆ. ಆರೋಪಿ ಮಾದೇಶನ ತಂದೆ ನಂಜಶೆಟ್ಟಿ ಹಾಗೂ ತಾಯಿ ಮಹದೇವಮ್ಮ ಮನೆಯಲ್ಲಿದ್ದಾಗ ಏಕಾಏಕಿ ನುಗ್ಗಿದ ಕೆಲವರು ಇಬ್ಬರನ್ನೂ ಮನೆಯಿಂದ ಹೊರಗೆಳೆದು ವಸ್ತುಗಳನ್ನೆಲ್ಲ ಒಡೆದು ಹಾಕಿದ್ದಾರೆ.

ಘಟನೆ ಹಿನ್ನೆಲೆಯಲ್ಲಿ ಸೋಮವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ.ಕವಿತಾ, ಡಿವೈಎಸ್ಪಿ ಧರ್ಮೇಂದ್ರ, ಪಿಎಸ್ಐ ವರ್ಷಾ ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿದರು. ಆರೋಪಿಯ ತಂದೆತಾಯಿ ವಿಚಾರಣೆ ನಡೆಸಿದ ಪೊಲೀಸರು ಘಟನೆಯ ಬಗ್ಗೆ ದೂರು ನೀಡಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಆದರೆ, ಆರೋಪಿಯ ಪೋಷಕರು ದೂರು ನೀಡಲು ನಿರಾಕರಿಸಿದಾಗ ಪೊಲೀಸರೇ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡರು. ಮುನ್ನೆಚ್ಚರಿಕಾ ಕ್ರಮವಾಗಿ ಆರೋಪಿಯ ಮನೆಯ ಸುತ್ತ ಹಾಗೂ ಬಡಾವಣೆಯಲ್ಲಿ 20ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

‘ತಿಥಿ’ ಮಾಡಿದ ಮಾದೇಶ: ಜೂನ್ 14ರಂದು ಸುವರ್ಣಾವತಿ ನದಿ ದಡದಲ್ಲಿ ಸೋನಾಕ್ಷಿಯನ್ನು ಕೊಲೆ ಮಾಡಿದ ಮೂರು ದಿನಗಳ ಬಳಿಕ ಆರೋಪಿಯ ಮೃತ ಮಹಿಳೆಯ ತಿಥಿ ಕಾರ್ಯ ಮಾಡಿರುವುದು ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ಕೊಲೆ ಮಾಡಿದ ಜಾಗದಲ್ಲಿಯೇ ಆರೋಪಿ ತಿಥಿ ವಿಧಿವಿಧಾನಗಳನ್ನು ಮಾಡಿದ್ದ. ಪ್ರತಿನಿತ್ಯ ಸಮಾಧಿಯ ಬಳಿ ಹೋಗಿ ರೋಧಿಸುತ್ತಿದ್ದ ಎನ್ನಲಾಗಿದೆ.

ಎಡಬೆಟ್ಟದಲ್ಲಿ ಅಂತ್ಯಕ್ರಿಯೆ: ಚಾಮರಾಜನಗರದ ಸಿಮ್ಸ್ ಆಸ್ಪತ್ರೆಯಲ್ಲಿ ಶನಿವಾರ ಸೋನಾಕ್ಷಿಯ ಶವದ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಯಿತು. ಮೃತರ ತಾಯಿ ಹಾಗೂ ಸಂಬಂಧಿಗಳು ಶವವನ್ನು ಗ್ರಾಮಕ್ಕೆ ಕೊಂಡೊಯ್ಯದೆ ಚಾಮರಾಜನಗರದ ಎಡಬೆಟ್ಟದಲ್ಲಿಯೇ ಅಂತ್ಯಕ್ರಿಯೆ ನಡೆಸಿದ್ದಾರೆ.

ಮತ್ತೊಬ್ಬ ವಶಕ್ಕೆ: ಪ್ರಕರಣ ಸಂಬಂಧ ಮತ್ತೊಬ್ಬ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಮಹಿಳೆ ಕೊಲೆಯಿಂದ ಸಿಟ್ಟಿಗೆದ್ದು ಕೃತ್ಯ ದೂರು ನೀಡದ ಆರೋಪಿಯ ಪೋಷಕರು ಆರೋಪಿ ಮನೆ ಸುತ್ತ ಪೊಲೀಸ್ ಬಂದೋಬಸ್ತ್

‘ವೈಮನಸ್ಸು ಕೊಲೆಗೆ ಕಾರಣ’

‘ಸೋನಾಕ್ಷಿಯ ಕೊಲೆಗೆ ಅನೈತಿಕ ಸಂಬಂಧ ಹಾಗೂ ವೈಮನಸ್ಸು ಕಾರಣವಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಮೃತ ಮಹಿಳೆ ಇಟ್ಟಿಗೆ ಬಾಬು ಎಂಬಾತನ ಜೊತೆಗೆ ಸಂಬಂಧ ಹೊಂದಿರುವುದನ್ನು ಸಹಿಸದೆ ಕೊಲೆ ಮಾಡಿರುವುದಾಗಿ ಆರೋಪಿ ಮಾದೇಶ ಒಪ್ಪಿಕೊಂಡಿದ್ದಾನೆ. ಆಗಾಗ ನಡೆಯುತ್ತಿದ್ದ ಜಗಳ ವಿಕೋಪಕ್ಕೆ ತಿರುಗಿ ಆರೋಪಿಯು ತಾಲ್ಲೂಕಿನ ಹಳೇ ಹಂಪಾಪುರ ಗ್ರಾಮದ ಸುವರ್ಣವತಿ ನದಿಯ ದಡದಲ್ಲಿ ಸೋನಾಕ್ಷಿಯನ್ನು ಕೊಲೆ ಮಾಡಿದ್ದಾನೆ’ ಎಂದು ಎಸ್ಪಿ ಬಿ.ಟಿ.ಕವಿತಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.