ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಮಾದಪ್ಪನ ಬೆಟ್ಟಕ್ಕೆ ಬರುವ ಪ್ರಯಾಣಿಕರಿಗೆ ₹1 ಹೊರೆ

Last Updated 11 ಫೆಬ್ರುವರಿ 2021, 1:59 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯ ಪ್ರಸಿದ್ಧ ಯಾತ್ರಾ ಕ್ಷೇತ್ರ ಮಹದೇಶ್ವರ ಬೆಟ್ಟಕ್ಕೆ ತೆರಳುವ ಎಲ್ಲ ಕೆಎಸ್‌ಆರ್‌ಟಿಸಿ ಬಸ್‌ಗಳ ಟಿಕೆಟ್‌ ದರ ₹1 ಹೆಚ್ಚಳವಾಗಿದೆ.

ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವು ಕೊಳ್ಳೇಗಾಲ ಮತ್ತು ಪಾಲಾರ್ ಗೇಟ್‌ಗಳ ಮೂಲಕ ಬೆಟ್ಟಕ್ಕೆ ಬರುವ ಎಲ್ಲ ಬಸ್‌ಗಳಿಗೆ ಪ್ರತಿ ಟ್ರಿಪ್‌ಗೆ ₹50 ಪ್ರವೇಶ ದರ ವಿಧಿಸಿರುವುದನ್ನು ಕೆಎಸ್‌ಆರ್‌ಟಿಸಿಯು ನಿರೀಕ್ಷೆಯಂತೆಯೇ ಪ್ರಯಾಣಿಕರ ಮೇಲೆ ವರ್ಗಾಯಿಸಿದೆ.

ಪ್ರತಿ ಪ್ರಯಾಣಿಕರಿಂದ ಹೆಚ್ಚುವರಿಯಾಗಿ ₹1 ವಸೂಲು ಮಾಡುವಂತೆ ಕೆಎಸ್‌ಆರ್‌ಟಿಸಿಯು ಸೂಚನೆ ನೀಡಿದ್ದು, ಅದರಂತೆ ನಿರ್ವಾಹಕರು ಟಿಕೆಟ್‌ ದರವನ್ನು ₹1 ಹೆಚ್ಚು ಪಡೆಯುತ್ತಿದ್ದಾರೆ.

ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವು ಒಂದೂವರೆ ತಿಂಗಳ ಹಿಂದೆ ವಿವಿಧ ಸೇವಾ ದರಗಳನ್ನು ಹೆಚ್ಚಿಸಿ ಆದೇಶ ಹೊರಡಿಸಿತ್ತು. ಅಲ್ಲದೇ, ಬೆಟ್ಟಕ್ಕೆ ಬರುವ ವಾಹನಗಳ ಪ್ರವೇಶದರವನ್ನೂ ಹೆಚ್ಚಳ ಮಾಡಿತ್ತು.

ಕೆಎಸ್‌ಆರ್‌ಟಿಸಿ ಬಸ್‌ಗಳ ಪ್ರತಿ ಟ್ರಿಪ್‌ಗೆ ₹50 ಪ್ರವೇಶ ಶುಲ್ಕ ನಿಗದಿಪಡಿಸಿತ್ತು. ಅಲ್ಲಿಯವರೆಗೂ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಶುಲ್ಕ ವಿಧಿಸುತ್ತಿರಲಿಲ್ಲ.

‘ಶುಲ್ಕದಿಂದಾಗಿ ಸಂಸ್ಥೆಗೆ ಹೊರೆಯಾಗುತ್ತಿತ್ತು. ಹಾಗಾಗಿ ಪ್ರಸ್ತಾವನೆ ಕಳುಹಿಸಿದ್ದೆವು. ₹1 ಹೆಚ್ಚುವರಿಯಾಗಿ ತೆಗೆದುಕೊಳ್ಳುವಂತೆ ಆದೇಶ ಬಂದಿದೆ. ಅದನ್ನು ಜಾರಿಗೊಳಿಸಲು ಸೂಚಿಸಿದ್ದೇನೆ’ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ ಬಿ. ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT