ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ: ಸುನಿಲ್‌ ಬೋಸ್‌ಗೆ ಭರ್ಜರಿ ಗೆಲುವು

Published 4 ಜೂನ್ 2024, 11:37 IST
Last Updated 4 ಜೂನ್ 2024, 11:37 IST
ಅಕ್ಷರ ಗಾತ್ರ

ಚಾಮರಾಜನಗರ: ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸುನಿಲ್‌ ಬೋಸ್‌ ಅವರು ದಾಖಲೆತ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. 

ಇವಿಎಂಗಳಲ್ಲಿ ದಾಖಲಾಗಿದ್ದ13,63,690 ಮತಗಳ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಸುನಿಲ್‌ ಬೋಸ್‌ ಅವರು 7,48,885 ಮತಗಳನ್ನು ಪಡೆದಿದ್ದಾರೆ. ಎನ್‌ಡಿಎ ಅಭ್ಯರ್ಥಿ ಎಸ್‌.ಬಾಲರಾಜ್‌ ಅವರು 5,59,942 ಮತಗಳನ್ನು ಗಳಿಸಿದ್ದಾರೆ. ಸದ್ಯ ಬೋಸ್‌ ಅವರು 1,88,943 ಮತಗಳಿಂದ ಮುಂದಿದ್ದಾರೆ. 

4,405 ಅಂಚೆ ಮತಗಳ ಎಣಿಕೆಯ ವಿವರಗಳು ಇನ್ನಷ್ಟೇ ತಿಳಿಯಬೇಕಾಗಿದೆ. 

ಕಣದಲ್ಲಿ 14 ಮಂದಿ ಅಭ್ಯರ್ಥಿಗಳಿದ್ದರು. ಎಸ್‌.ಬಾಲರಾಜ್‌ ಬಿಟ್ಟು ಉಳಿದವರೆಲ್ಲರೂ ಠೇವಣಿ ಕಳೆದುಕೊಂಡಿದ್ದಾರೆ. ನೋಟಾಗೆ 8084 ಮತಗಳು ಬಿದ್ದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT