ಮಂಗಳವಾರ, ಮಾರ್ಚ್ 21, 2023
25 °C

ಬಿಆರ್‌ಟಿ: ಗಂಡು ಹುಲಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಬಿಳಿಗಿರಿರಂಗನಾಥಸ್ವಾಮಿ ದೇವಾಲಯ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶದ ಕೊಳ್ಳೇಗಾಲ ವಲಯd ಕಣ್ಣೂರು ಬೀಟ್‌ನ ಕುರುಬನ ಕೆರೆ ಬಳಿ ಗಂಡು ಹುಲಿಯ ಕಳೇಬರ ಪತ್ತೆಯಾಗಿರುವುದು ತಡವಾಗಿ ಗೊತ್ತಾಗಿದೆ. 

ಶನಿವಾರ (ಡಿ.17) ಹುಲಿಯ ಕಳೇಬರ ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸೋಮವಾರ ಈ ಬಗ್ಗೆ ಮಾಹಿತಿ ನೀಡಿದೆ. ಹುಲಿಗೆ 5ರಿಂದ 7ವರ್ಷ ವಯಸ್ಸಾಗಿರಬಹುದು ಎಂದು ಅಂದಾ‌ಜಿಸಲಾಗಿದೆ. 2020ರಲ್ಲಿ ಆ ಪ್ರದೇಶದಲ್ಲಿ ಈ ಹುಲಿಯನ್ನು ಗುರುತಿಸಲಾಗಿತ್ತು. 

‘ಹುಲಿಯ ಉಗುರುಗಳು, ಹಲ್ಲುಗಳು ಎಲ್ಲವೂ ಇವೆ. ಮುಖಕ್ಕೂ ಗಾಯಗಳಾಗಿವೆ. ಒಂದು ಕಣ್ಣು ಹೊರಗಡೆ ಬಂದಿದೆ. ಇನ್ನೊಂದು ಹುಲಿಯೊಂದಿಗೆ ನಡೆಸಿದ ಕಾದಾಟದಲ್ಲಿ ಮೃತಪಟ್ಟಿರಬಹುದು ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ದೇಹದ ಅಂಗಾಂಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಇನ್ನೂ ಬಂದಿಲ್ಲ. ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ’ ಎಂದು ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕಿ, ಡಿಸಿಎಫ್‌ ದೀಪ್‌ ಜೆ. ಕಾಂಟ್ರಾಕ್ಟರ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು