ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಣ್ಯತ್ತಹಳ್ಳ ಜಲಾಶಯ ಅನೈತಿಕ ಚಟುವಟಿಕೆಗಳ ತಾಣ

ನಿರ್ವಹಣೆ ಕೊರತೆಯಿಂದ ಸೌಂದರ್ಯ ಮಾಯ, ವಾರಾಂತ್ಯದಲ್ಲಿ ಕಿಡಿಗೇಡಿಗಳಿಗೆ ಜೂಜಿನ ಅಡ್ಡೆ
Last Updated 26 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಹನೂರು: ಸಾವಿರಾರು ಎಕರೆ ಕೃಷಿಭೂಮಿಗೆ ನೀರುಣಿಸಿ,ವನ್ಯಜೀವಿ ಸಂಕುಲಕ್ಕೆ ಜಲಮೂಲವಾಗಿದ್ದ ತಾಲ್ಲೂಕಿನ ಯರಂಬಾಡಿಯ ಮಿಣ್ಯತ್ತಹಳ್ಳ ಜಲಾಶಯ ಸಮರ್ಪಕ ನಿರ್ವಹಣೆಯಿಲ್ಲದೆ ಕುಡುಕರಹಾಗೂಅನೈತಿಕಚಟುವಟಿಕೆಗಳ ತಾಣವಾಗಿಮಾರ್ಪಟ್ಟಿದೆ.

ನೆಲ್ಲೂರು,ಹಂಚಿಪಾಳ್ಯ,ಪೆದ್ದನಪಾಳ್ಯ,ಕೂಡ್ಲೂರು,ಜಲ್ಲಿಪಾಳ್ಯಹಾಗೂಹೂಗ್ಯಂಗ್ರಾಮಗಳ ವ್ಯಾಪ್ತಿಯ ಜಮೀನುಗಳಿಗೆ ನೀರಿನ ಸೌಲಭ್ಯಒದಗಿಸುವ ದೃಷ್ಟಿಯಿಂದ 1983ರಲ್ಲಿಅಂದಿನ ಮುಖ್ಯಮಂತ್ರಿ ಆರ್‌.ಗುಂಡೂರಾವ್‌ ಅವರು ಈಜಲಾಶಯವನ್ನು ಲೋಕಾರ್ಪಣೆಗೊಳಿಸಿದ್ದರು.

ಸಣ್ಣನೀರಾವರಿಇಲಾಖೆಯತೆಕ್ಕೆಯಲ್ಲಿರುವಜಲಾಶಯಈಭಾಗದರೈತರಜಮೀನುಗಳಿಗೆಹಾಗೂಮಲೆಮಹದೇಶ್ವರವನ್ಯಧಾಮದಸಾವಿರಾರುವನ್ಯಪ್ರಾಣಿಗಳಿಗೆ ಜಲ ಮೂಲವಾಗಿದೆ. ತಮಿಳುನಾಡಿನ ಮಾಸನಪಾಳ್ಯ,ಗುಂಡರೆಹಾಗೂಕರ್ನಾಟಕದಪಿ.ಜಿ.ಪಾಳ್ಯ,ಅಂಡಕುರುಬನದೊಡ್ಡಿ,ಬೈಲೂರು ಮತ್ತಿತರ ಕಡೆ ಉತ್ತಮ ಮಳೆಯಾದರೆಈಜಲಾಶಯಭರ್ತಿಯಾಗುತ್ತಿದೆ.ಈಬಾರಿಯೂಉತ್ತಮಮಳೆಯಾಗಿದ್ದರಿಂದ ಜಲಾಶಯಕ್ಕೆ ಸಾಕಷ್ಟು ನೀರು ಹರಿದು ಬಂದಿತ್ತು.

ಸುತ್ತಲೂಬೆಟ್ಟಗುಡ್ಡಗಳಿಂದಲೇಆವೃತವಾಗಿರುವಜಲಾಶಯ ಸುತ್ತಮುತ್ತಲಿನ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ವಾರಾಂತ್ಯದಲ್ಲಿ ಶಾಲಾ ಮಕ್ಕಳು ಸೇರಿದಂತೆ ಮಹಿಳೆಯರು ಕುಟುಂಬ ಸಮೇತರಾಗಿ ಇಲ್ಲಿಗೆ ಬರುತ್ತಾರೆ.

ಆದರೆ, ಇತ್ತೀಚೆಗೆ ಜಲಾಶಯದ ಆವರಣದಲ್ಲಿ ನಡೆಯುವ ಅನೈತಿಕ ಚಟುವಟಿಕೆಗಳು ಹಾಗೂ ರಾಶಿ ಬಿದ್ದ ಕಸಗಳು ಪ್ರವಾಸಿಗರಿಗೆ ಕಿರಿಕಿರಿ ಉಂಟು ಮಾಡುತ್ತಿದೆ.

ಜಲಾಶಯಕ್ಕೆಬರುವಕೆಲಕಿಡಿಗೇಡಿಗಳು ಮದ್ಯ ಸೇವಿಸಿ ಅದರ ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ವೀಕ್ಷಣಾಗೋಪುರದ ಮೇಲಂತೂ ಕುಡುಕರಅಟ್ಟಹಾಸಎಲ್ಲೆಮೀರಿದೆ. ಅಲ್ಲಲ್ಲಿ ಬಾಟಲಿಗಳನ್ನುಒಡೆದುಬಿಸಾಡಿರುವುದರಿಂದ ಪ್ರವಾಸಿಗರ ಓಡಾಟಕ್ಕೂ ತೊಂದರೆಯಾಗಿದೆ.

ವನ್ಯಜೀವಿಗಳಜೀವನಾಡಿ: ಮಲೆಮಹದೇಶ್ವರವನ್ಯಧಾಮದಲ್ಲಿರುವಉಡುತೊರೆಜಲಾಶಯದಂತೆ ಮಿಣ್ಯತ್ತಹಳ್ಳ ಜಲಾಶಯವೂ ಕೂಡ ವನ್ಯಪ್ರಾಣಿಗಳ ದಾಹವನ್ನು ಇಂಗಿಸುತ್ತಿದೆ.

‘ಜಲಾಶಯದತೀರದಲ್ಲಿ ಬಿದ್ದಿರುವ ಮದ್ಯದ ಬಾಟಲಿಚೂರುಗಳು ವನ್ಯಪ್ರಾಣಿಗಳಕಾಲಿಗೆಚುಚ್ಚಿ ಗಾಯಗೊಂಡಿರುವ ಪ್ರಕರಣಗಳು ಸಾಕಷ್ಟು ಜರುಗಿವೆ.

ಇಲ್ಲಿಗೆಬರುವಕಿಡಿಗೇಡಿಗಳುಪಾನಮತ್ತರಾಗಿವನ್ಯಜೀವಿಗಳ ಸ್ವಚ್ಛಂದಕ್ಕೂಧಕ್ಕೆಮಾಡುವುದಲ್ಲದೇ ಎಲ್ಲೆಂದರಲ್ಲಿ ಪ್ಲಾಸ್ಟಿಕ್‌ ಹಾಗೂ ಬಾಟಲಿಗಳನ್ನು ಎಸೆದು ಪರಿಸರವನ್ನೂ ಹಾಳು ಮಾಡುತ್ತಿದ್ದಾರೆ’ ಎಂಬುದು ಅರಣ್ಯಇಲಾಖೆಸಿಬ್ಬಂದಿಯ ಆರೋಪ.

ಇಸ್ಪೀಟ್, ಜೂಜಾಟದ ಅಡ್ಡೆ

ಜಲಾಶಯವು ತಮಿಳುನಾಡಿಗೆ ಹೊಂದಿಕೊಂಡಂತೆ ಇರುವುದರಿಂದ ಅಲ್ದಲಿಂದ ಬರುವ ಕೆಲವರು ಈ ಸ್ಥಳವನ್ನು ಇಸ್ಪೀಟ್‌ ಆಟದ ಅಡ್ಡೆಯನ್ನಾಗಿ ಮಾಡಿಕೊಂಡಿದ್ದಾರೆ.

‘ವಾರಾಂತ್ಯದಲ್ಲಿ ವಾಹನಗಳಲ್ಲಿ ಬರುವ ಜನರು ಜಲಾಶಯದ ಕೆಳಗೆ ಜೂಜಾಟ ಆಡುವುದರ ಜೊತೆಗೆ ಮದ್ಯಪಾನ ಮಾಡಿ ಬಾಟಲಿಗಳನ್ನು ನೀರಿಗೆ ಎಸೆದು ಹೋಗುತ್ತಿದ್ದಾರೆ’ ಎಂದು ಆರೋಪಿಸುತ್ತಾರೆ ಸ್ಥಳೀಯರು.

‘ಸರಿಯಾಗಿ ನಿರ್ವಹಣೆ ಮಾಡಿದರೆ ಜಲಾಶಯವು ಸುಂದರ ಪ್ರವಾಸಿ ತಾಣವಾಗಿ ರೂಪುಗೊಳ್ಳುವುದರಲ್ಲಿ ಸಂಶಯವಿಲ್ಲ. ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಂದ ಸೌಂದರ್ಯಕ್ಕೆ ಧಕ್ಕೆಯಾಗಿದೆ. ಅಧಿಕಾರಿಗಳು ಹಾಗೂ ಪೊಲೀಸರು ಈ ಬಗ್ಗೆ ನಿಗಾ ಇಟ್ಟು ಜಲಾಶಯವನ್ನು ಪ್ರವಾಸಿಗರ ನೆಚ್ಚಿನ ತಾಣವನ್ನಾಗಿ ಮಾಡಬೇಕು’ ಎಂಬುದು ಅವರ ಆಗ್ರಹ.

ಜಲಾಶಯದ ಸ್ಥಿತಿಗತಿ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ (ಎಇಇ) ಪ್ರತೀಕ್‌ ಅವರು, ‘ಹಿಂದೆಯೂ ಸಾರ್ವಜನಿಕರಿಂದ ಇದೇ ರೀತಿಯ ದೂರುಗಳು ಬಂದಿದ್ದವು. ಜಲಾಶಯ ಆವರಣಕ್ಕೆ ಗೇಟ್ ಅಳವಡಿಸಿ ನಿರ್ವಹಣೆಗಾಗಿ ಇಬ್ಬರನ್ನು ನಿಯೋಜಿಸಲಾಗಿತ್ತು. ಆದರೆ, ಕಿಡಿಗೇಡಿಗಳು ಗೇಟನ್ನು ಮುರಿದು ಹಾಕಿದ್ದಾರೆ. ಈ ಸಂಬಂಧ ರಾಮಾಪುರ ಪೊಲೀಸ್ ಠಾನೆಗೂ ದೂರು ನೀಡಲಾಗಿದೆ’ ಎಂದರು.

ಜೂಜುಕೋರರ ಅಡ್ಡೆ

ಪ್ರವಾಸಿ ತಾಣವಾಗಬೇಕಿದ್ದ ಜಲಾಶಯ ನಿರ್ವಹಣೆಯಿಲ್ಲದೇ ಕುಡುಕರ, ಜೂಜುಕೋರರ ಅಡ್ಡೆಯಾಗಿ ಪರಿಣಮಿಸಿದೆ. ಅಧಿಕಾರಿಗಳು ಇದಕ್ಕೆ ಕಡಿವಾಣ ಹಾಕಬೇಕು‍ –ಕಿರಣ್, ಹೂಗ್ಯಂ

ಜಲಾಶಯಕ್ಕೆ ಹೊಸ ಗೇಟ್

ಜಲಾಶಯಕ್ಕೆ ಹೊಸ ಗೇಟ್ ನಿರ್ಮಾಣಕ್ಕೆ ಕ್ರಿಯಾಯೋಜನೆ ತಯಾರಿಸಿ ಅನುಮೋದನೆಗಾಗಿ ಕಳುಹಿಸಲಾಗಿದೆ. ಅನುಮತಿ ಸಿಕ್ಕ ಬಳಿಕ ಗೇಟ್ ನಿರ್ಮಿಸಲಾಗುವುದು –ಪ್ರತೀಕ್, ಎಇಇ,ಸಣ್ಣ ನೀರಾವರಿ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT