ಭಾನುವಾರ, ಜೂನ್ 20, 2021
29 °C
ಸೋಮವಾರದಿಂದ ಬೆಳಿಗ್ಗೆ 4ರಿಂದ ರಾತ್ರಿ 10ರವರೆಗೆ ದೇಗುಲ ಭಕ್ತರಿಗೆ ಮುಕ್ತ

ಮಹದೇಶ್ವರ ಬೆಟ್ಟ, ರಾತ್ರಿ ವಾಸ್ತವ್ಯಕ್ಕೆ ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಲಾಕ್‌ಡೌನ್‌ನ ಬಹುತೇಕ ನಿಯಮಗಳನ್ನು ಸಡಿಲಿಕೆ ಮಾಡಿರುವುರಿಂದ, ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರ ಸ್ವಾಮಿ ದೇವಾಲಯವು ಭಾನುವಾರದಿಂದ ವಾರದ ಎಲ್ಲ ದಿನಗಳೂ ಭಕ್ತರಿಗೆ ತೆರೆದಿರಲಿದೆ. 

ಸೋಮವಾರದಿಂದ ಬೆಳಿಗ್ಗೆ 4ರಿಂದ ರಾತ್ರಿ‌‌ 10ರವರೆಗೆ ದೇವಸ್ಥಾನವನ್ನು ತೆರೆಯಲು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ. 

‘ಭಾನುವಾರ (ಆಗಸ್ಟ್‌ 2) ಸಂಜೆ‌ 5ರಿಂದ ನಾಗಮಲೆ ಭವನದಲ್ಲಿ ಮಾತ್ರ ಮೊದಲು ಬಂದವರಿಗೆ ಆದ್ಯತೆ ಮೇರೆಗೆ ಪ್ರಾಯೋಗಿಕವಾಗಿ ಭಕ್ತರಿಗೆ ರಾತ್ರಿ‌ ತಂಗಲು ಕೊಠಡಿಗಳನ್ನು ನೀಡಲಾಗುವುದು. ಎ.ಸಿ ಕೊಠಡಿಗೆ ₹950 ಹಾಗೂ ಸಾಮಾನ್ಯ ಕೊಠಡಿಗೆ ₹500 ದರ ಇರಲಿದೆ’ ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು ಹೇಳಿದ್ದಾರೆ. 

‘ದಾಸೋಹದಲ್ಲಿ ಬೆಳಿಗ್ಗೆ 7 ರಿಂದ ರಾತ್ರಿ 9ರವರೆಗೆ‌ ಉಪಾಹಾರ ಪ್ರಸಾದ ವಿತರಣೆ ವ್ಯವಸ್ಥೆಯೂ ಇರಲಿದೆ. ಸದ್ಯದ ಮಟ್ಟಿಗೆ ಯಾವುದೇ ಉತ್ಸವಗಳು ಇರುವುದಿಲ್ಲ. ಭಕ್ತರು ಮಾಸ್ಕ್ ಧರಿಸಿಯೇ ಬರಬೇಕು. ಪ್ಲಾಸ್ಟಿಕ್ ಬಾಟಲಿ ತರುವುದಕ್ಕೆ ಅವಕಾಶ ಇಲ್ಲ. ಅಂತರ ಕಾಪಾಡಿಕೊಂಡು ದರ್ಶನ‌ ಪಡೆಯಬಹುದು. ಪೂಜೆ ಮಾಡಿಸಬಹುದು. ಸೋಮವಾರದಿಂದ ಬೆಳಿಗ್ಗೆ 4 ಕ್ಕೆ,‌ ಬೆಳಿಗ್ಗೆ‌ 10.30ಕ್ಕೆ, ಸಂಜೆ 6ಕ್ಕೆ ಅಭಿಷೇಕ ನಡೆಯಲಿದ್ದು, ಅಭಿಷೇಕ ಮಾಡಿಸುವವರು ಮಾಡಿಸಬಹುದು ಆದರೆ, ದೇವಾಲಯದ‌ ಒಳಗಡೆ ಕುಳಿತುಕೊಳ್ಳಲು ಅವಕಾಶವಿರುವುದಿಲ್ಲ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಮಾಹಿತಿಗೆ ದೇವಾಲಯದ ಪಾರುಪತ್ತೇಗಾರರಾದ ಮಹದೇವಸ್ವಾಮಿ ಅವರನ್ನು (9449490095) ಸಂಪರ್ಕಿಸಬಹುದು ಎಂದು ಅವರು ಹೇಳಿದ್ದಾರೆ.   ‘ರಾತ್ರಿಯ ಲಾಕ್‌ಡೌನ್‌ (ನಿಷೇದಾಜ್ಞೆ) ವಾಪಸ್‌ ಪಡೆದಿರುವುದರಿಂದ, ರಾತ್ರಿವರೆಗೂ ದರ್ಶನಕ್ಕೆ ಅವಕಾಶ ಕಲ್ಪಿಸಬಹುದಕ್ಕೆ ಅವಕಾಶ ಇದೆ. ಹೀಗಾಗಿ, ಅದಕ್ಕೆ ಪೂರಕವಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ’ ಎಂದು ಜಯವಿಭವಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.