ಗುರುವಾರ , ಡಿಸೆಂಬರ್ 3, 2020
20 °C

ಕಾಂಗ್ರೆಸ್ ಕಚೇರಿಯಲ್ಲಿ ನೆಹರು ಜಯಂತಿ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಮಾಜಿ ಪ್ರಧಾನಿ ಜವಾಹಲ್ ಲಾಲ್‌ ನೆಹರು ಅವರ ಜಯಂತಿಯನ್ನು ಜಿಲ್ಲಾ ಕಾಂಗ್ರೆಸ್‌ ಸಮಿತಿ ಕಚೇರಿಯಲ್ಲಿ ಶನಿವಾರ ಆಚರಿಸಲಾಯಿತು.

ನೆಹರು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು, ‘ನೆಹರು ಅವರು ದೇಶದ ಅಭಿವೃದ್ಧಿಗೆ ಅಪಾರ ಕೊಡುಗೆಗಳನ್ನು ನೀಡಿದ್ದಾರೆ. ಬಡತನ ನಿರ್ಮೂಲನೆ, ದೇಶದ ಭದ್ರತೆಗಾಗಿ ಅವರು ಕೈಗೊಂಡ ನಿರ್ಣಯಗಳು ಅಭಿವೃದ್ದಿಗೆ ಪೂರಕವಾಗಿತ್ತು’ ಎಂದರು. 

‘ಸ್ವಾತಂತ್ರ್ಯ ಹೋರಾಟರಾಗಿದ್ದ ನೆಹರು ಹಾಗೂ ಮಹಾತ್ಮ ಗಾಂಧೀಜಿ ಅವರೊಂದಿಗೆ ಸಕ್ರಿಯವಾಗಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದರು. ಬ್ರಿಟಿಷರ ದಾಸ್ಯದಿಂದ ದೇಶವನ್ನು ಬಿಡುಗಡೆಗೊಳಿಸಿದ ಬಳಿಕ ಸ್ವಾತಂತ್ರ್ಯ ನಂತರ ಪ್ರಥಮ ಪ್ರಧಾನಿಯಾಗಿ ನೆಹರು ಅವರು ಆಯ್ಕೆಯಾಗಿ, ದೇಶವನ್ನು ವಿಶ್ವಮಟ್ಟದಲ್ಲಿ ಗುರುತಿಸುವಂತೆ ಮಾಡಿದರು’ ಎಂದರು. 

‘ಬ್ರಿಟಿಷರು ನೂರಾರು ವರ್ಷಗಳ ಕಾಲ ಭಾರತದ ಆಳ್ವಿಕೆ ಮಾಡಿ, ಸಂಪತ್ತು ದೋಚಿ ಹೋಗಿದ್ದರು. ಇಂಥ ಸಂಕಷ್ಟದ ಸಮಯದಲ್ಲಿ ಬಡತನದಿಂದ ಕೂಡಿದ್ದ ದೇಶವನ್ನು ಮುನ್ನಡೆಯುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದವರು ನೆಹರು. ಬಡತನ ನಿರ್ಮೂಲನೆ ಹಾಗೂ ದೇಶದ ಅಖಂಡತೆ, ಭದ್ರತೆಗಾಗಿ ಅವರು ಜಾರಿ ಮಾಡಿದ, ಪಂಚ ವಾರ್ಷಿಕ ಯೋಜನೆ, ವಿದೇಶಾಂಗ ನೀತಿಗಳು ಭಾರತವನ್ನು ಅಭಿವೃದ್ದಿ ಪಥದತ್ತ ಕೊಂಡೊಯ್ದಿತು’ ಎಂದು ಎಂದರು. 

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ ಅವರು ಮಾತನಾಡಿದರು. ‘ನೆಹರು ಅವರಿಗೆ ಮಕ್ಕಳು ಎಂದರೆ ಪ್ರೀತಿ. ಹಾಗಾಗಿ, ಅವರ ಜನ್ಮ ದಿನವಾದ ನವೆಂಬರ್‌ 14 ಅನ್ನು ಮಕ್ಕಳ ದಿನಾಚರಣೆಯನ್ನಾಗಿ ರಾಷ್ಟ್ರದಾದ್ಯಂತ ಆಚರಣೆ ಮಾಡಲಾಗುತ್ತದೆ’ ಎಂದರು. 

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ. ರವಿಕುಮಾರ್ ಮಾತನಾಡಿದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವ್, ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಬ್ಲಾಕ್ ಅಧ್ಯಕ್ಷರಾದ ಮಹಮದ್ ಅಸ್ಗರ್, ಎ.ಎಸ್.ಗುರುಸ್ವಾಮಿ, ಜಿಲ್ಲಾ ಪಂಚಾಯಿತಿ ಸದಸ್ಯ ಕೆರೆಹಳ್ಳಿ ನವೀನ್, ಮುಖಂಡರಾದ ಸುಹೇಲ್ ಆಲಿ ಖಾನ್, ಆಯುಬ್ ಖಾನ್, ನಾಗವಳ್ಳಿ ನಾಗಯ್ಯ, ಎಸ್.ರಾಜು, ಕಾಗಲವಾಡಿ ಚಂದ್ರು, ಶೇಖರಪ್ಪ, ಕಾನೂನು ವಿಭಾಘದ ಅಧ್ಯಕ್ಷ ನಾಗಾರ್ಜುನ್ ಪೃಥ್ವಿ, ಡಾ.ರಂಗಸ್ವಾಮಿ, ವೀರಭದ್ರಸ್ವಾಮಿ, ಸೋಮೇಶ್ವರ್, ಅಮಚವಾಡಿ ಕಾಂತರಾಜು, ವಡ್ಗಲ್‌ಪುರ ದೊರೆಸ್ವಾಮಿ, ಉತ್ತುವಳ್ಳಿ ರಾಮು, ರೇಣುಕಾ ಮಲ್ಲಿಕಾರ್ಜುನ್, ವೈ.ಪಿ.ರಾಜೇಂದ್ರ ಪ್ರಸಾದ್ ಮೊದಲಾದವರು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು