ಮಂಗಳವಾರ, ಅಕ್ಟೋಬರ್ 27, 2020
28 °C

ಡಾ. ವಿಷ್ಣು ಅಭಿಮಾನಿ ಸ್ನೇಹ ಬಳಗದಿಂದ ಎಸ್‌ಪಿಬಿಗೆ ಶ್ರದ್ಧಾಂಜಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಶುಕ್ರವಾರ ನಿಧನರಾದ ಖ್ಯಾತ ಗಾಯಕ ಡಾ.ಎಸ್.ಪಿ.ಬಾಲಸುಬ್ರಮಣ್ಯಂ ಅವರಿಗೆ ಡಾ.ವಿಷ್ಣು ಅಭಿಮಾನಿ ಸ್ನೇಹ ಬಳಗದಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು.

ನಗರದ ನ್ಯಾಯಾಲಯದ ರಸ್ತೆಯ ಆಟೊ ನಿಲ್ಧಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿ ಎರಡು ನಿಮಿಷಗಳ ಮೌನಾಚರಣೆ ಮಾಡಲಾಯಿತು. 

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ, ಡಾ.ವಿಷ್ಣು ಅಭಿಮಾನಿ ಸ್ನೇಹ ಬಳಗದ ಉಮ್ಮತ್ತೂರು ಇಂದುಶೇಖರ್ ಮಾತನಾಡಿ, ‘ಸರಳ ವ್ಯಕ್ತಿಯಾಗಿದ್ದ ಎಸ್‌ಪಿಬಿಯವರು ಮೇರು ವ್ಯಕ್ತಿತ್ವ ಹೊಂದಿದ್ದರು. ಅವರ ಅಗಲಿಕೆಯಿಂದ ಭಾರತೀಯ ಚಿತ್ರರಂಗಕ್ಕೆ ಬಹಳ ನಷ್ಟ ಉಂಟಾಗಿದೆ’ ಎಂದು ಹೇಳಿದರು. 

‘ಕನ್ನಡ ಸೇರಿದಂತೆ 15 ಭಾಷೆಗಳಲ್ಲಿ 40 ಸಾವಿರ ಗೀತೆಗಳನ್ನು ಹಾಡಿರುವ ಅವರು ಭಾರತದ ಹೆಮ್ಮೆಯ ಗಾಯಕರಾಗಿದ್ದವರು. ಗಾಯನದ ಜೊತೆಗೆ ಸಂಗೀತ ನಿರ್ದೇಶನ, ನಟನೆ, ಚಿತ್ರ ನಿರ್ಮಾಣವನ್ನೂ ಮಾಡಿ ಜನಮಾನಸದಲ್ಲಿ ಉಳಿದಿದ್ದಾರೆ’ ಎಂದರು. 

ಚುಡಾ ಸದಸ್ಯ ಕರಿನಂಜನಪುರ ಕೂಸಣ್ಣ, ಸಾಧನ ಸಂಸ್ಥೆ ನಿರ್ದೇಶಕ ಟಿ.ಜೆ.ಸುರೇಶ್, ಎಸ್.ಎ.ಜಿ ರಮೇಶ್, ಪತಂಜಲಿ ಯೋಗ ಕೇಂದ್ರದ ಅಧ್ಯಕ್ಷ ಎಚ್.ಜಿ.ಕುಮಾರಸ್ವಾಮಿ, ಉಡಿಗಾಲ ಮಹೇಶ್, ಮಹೇಶ್‌ಕುಮಾರ್ ‌ಗೌಡ, ರಾಮಸಮುದ್ರ ಪುಟ್ಟುವರ್ಧನ್, ಮಿಲ್ಕ್ ಮಂಜು, ಎಸ್.ನವೀನ್‌ಕುಮಾರ್, ಪ್ರಮೋದ್‌ಪ್ರಸಾದ್, ರಾಮಸಮುದ್ರ ನಾಗರಾಜಪ್ಪ, ಮೋಹನ್‌ಕುಮಾರ್ ಹಾಗೂ ಅಭಿಮಾನಿಗಳು ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.