‘ಓಣಂ ಹಬ್ಬದ ಸಂದರ್ಭದಲ್ಲಿ ರೈತರು ಕೇರಳಕ್ಕೆ ಹೆಚ್ಚಿನ ಹೂ ಮಾರಾಟ ಮಾಡುತ್ತಾರೆ. ಕೋವಿಡ್ ಬಳಿಕ ಕೇರಳದಿಂದ ಹೆಚ್ಚಿನವರು ಹೂ ಖರೀದಿಸಲು ಆಸಕ್ತಿ ತೋರುತ್ತಿದ್ದಾರೆ. ಚೆಂಡು ಹೂಗೆ ಬೇಡಿಕೆ ಹೆಚ್ಚಿದ್ದು ಉತ್ತಮ ದರ ಸಿಗುತ್ತಿದೆ ಎನ್ನುತ್ತಾರೆ ಬೆಳೆಗಾರ ರಾಜಣ್ಣ.
ಹೂಗಳ ಹಬ್ಬ ಓಣಂ
ಓಣಂಗೆ ಕೇರಳದಲ್ಲಿ ವಿಶೇಷ ಮಹತ್ವ ಇದೆ. ಹೂಗಳ ಹಬ್ಬವಾಗಿ ಸಂಭ್ರಮಿಸಲಾಗುತ್ತದೆ. ದೀಪಾವಳಿಗೂ ಮುನ್ನ ಬರುವ ಓಣಂ ವೇಳೆ ಬಲಿ ಮಹಾರಾಜ ಬರುತ್ತಾನೆ ಎಂಬ ನಂಬಿಕೆಯೊಂದಿಗೆ ಹೂವಿನ ರಂಗೋಲಿ ಬಿಡಿಸಿ ಸ್ವಾಗತ ಕೋರಲಾಗುತ್ತದೆ. ಹೂವಿನ ದರ ಹೆಚ್ಚಾದರೂ ಹಬ್ಬವನ್ನು ಸಂಭ್ರಮಿಸಲು ಖರೀದಿಸುತ್ತೇವೆ ಎನ್ನುತ್ತಾರೆ ಕೇರಳದ ವ್ಯಾಪಾರಿಗಳು.