ಶನಿವಾರ, ಮೇ 15, 2021
24 °C

ಚಾಮರಾಜನಗರ: 175 ಮಂದಿಗೆ ಸೋಂಕು, 73 ಜನ ಗುಣಮುಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯಲ್ಲಿ ಬುಧವಾರ ದಾಖಲೆ 175 ಮಂದಿಗೆ ಕೋವಿಡ್ ಇರುವುದು ದೃಢಪಟ್ಟಿದೆ.

ಕಳೆದ ವರ್ಷದ ಜೂನ್ ತಿಂಗಳಲ್ಲಿ ಜಿಲ್ಲೆಯಲ್ಲಿ  ಕೋವಿಡ್ ಪ್ರಕರಣಗಳು ವರದಿಯಾಗಲು ಆರಂಭಿಸಿದ ನಂತರ ಇಷ್ಟು ದೊಡ್ಡ ಪ್ರಮಾಣದಲ್ಲಿ ಪ್ರಕರಣಗಳು ದೃಢಪಡುತ್ತಿರುವುದು ಇದೇ ಮೊದಲು.

ಬುಧವಾರ 73 ಜನರು ಕೋವಿಡ್ ಮುಕ್ತರಾಗಿದ್ದಾರೆ. ಜಿಲ್ಲೆಯ ಸಕ್ರಿಯ ಪ್ರಕರಣಗಳ ಸಂಖ್ಯೆ 726ಕ್ಕೆ ಏರಿದೆ. ಈ ಪೈಕಿ 466 ಮಂದಿ ಹೋಂ ಐಸೋಲೇಶನ್ನಲ್ಲಿದ್ದಾರೆ. ಬುಧವಾರ ಸಾವಿನ ಪ್ರಕರಣಗಳು ವರದಿಯಾಗಿಲ್ಲ.

ಜಿಲ್ಲೆಯ ಒಟ್ಟು ಪ್ರಕರಣಗಳ ಸಂಖ್ಯೆ 8,241ಕ್ಕೆ ಏರಿದೆ. 7,376 ಮಂದಿ ಸೋಂಕು ಮುಕ್ತರಾಗಿದ್ದಾರೆ. 119 ಮಂದಿ ಕೋವಿಡ್‌ನಿಂದ ಹಾಗೂ 20 ಮಂದಿ ಅನ್ಯ ಕಾರಣಗಳಿಂದ ನಿಧನರಾಗಿದ್ದಾರೆ.

ಬುಧವಾರ 1,346 ಮಂದಿಯ ಗಂಟಲು ದ್ರವ ಪರೀಕ್ಷಾ ವರದಿ ಬಂದಿದ್ದು, 1,171 ವರದಿಗಳು ನೆಗೆಟಿವ್ ಬಂದಿವೆ.

ದೃಢಪಟ್ಟ 175 ಪ್ರಕರಣಗಳಲ್ಲಿ ಚಾಮರಾಜನಗರ ತಾಲ್ಲೂಕಿನಲ್ಲಿ 61, ಕೊಳ್ಳೇಗಾಲದಲ್ಲಿ 40, ಗುಂಡ್ಲುಪೇಟೆಯಲ್ಲಿ 37, ಹನೂರು ಮತ್ತು ಯಳಂದೂರು ತಾಲ್ಲೂಕುಗಳಲ್ಲಿ ಕ್ರಮವಾಗಿ 18 ಮತ್ತು 17 ಹಾಗೂ ಹೊರ‌ಜಿಲ್ಲೆಯ ಎರಡು ಪ್ರಕರಣಗಳು ವರದಿಯಾಗಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು