ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣ್ಣೂರು ಕೇರಿ ಜಾತ್ರೆ; ಕುರಿ ರಕ್ತ ಹೀರಿದ ಅರ್ಚಕ

Last Updated 20 ಮಾರ್ಚ್ 2022, 4:27 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ತಾಲ್ಲೂಕಿನ ಅಣ್ಣೂರುಕೇರಿ ಗ್ರಾಮದಲ್ಲಿ ನಡೆಯುವ ದೊಡ್ಡಮ್ಮತಾಯಿ ಜಾತ್ರೆ ಶುಕ್ರವಾರ ರಾತ್ರಿ ನಡೆಯಿತು. ದೊಡ್ಡಮ್ಮ ತಾಯಿಗೆ ಹರಕೆಯಾಗಿ ಬಂದ ಕುರಿಗಳ ರಕ್ತವನ್ನು ಅರ್ಚಕ ಹೀರುವ ಪದ್ಧತಿ ಚಾಲ್ತಿಯಲ್ಲಿದೆ.

ಶುಕ್ರವಾರ ರಾತ್ರಿ ನಡೆದ ಉತ್ಸವದಲ್ಲಿ ಅರ್ಚಕ, ಹರಕೆ ರೂಪದಲ್ಲಿ ಬಂದ ಕುರಿಯ ಕೊರಳನ್ನು ಕಚ್ಚಿ ರಕ್ತ ಹೀರಿದರು. ಭಕ್ತರು ಇದರ ವಿಡಿಯೊ ಚಿತ್ರೀಕರಣ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

ಪ್ರತಿ ವರ್ಷ ಪಾಲ್ಗುಣ ಮಾಸದಲ್ಲಿ ಗ್ರಾಮದ ದೊಡ್ಡಮ್ಮತಾಯಿ ಜಾತ್ರೆ ನಡೆಯುತ್ತದೆ. ಈ ಸಂಪ್ರದಾಯ ಆಚರಿಸುವುದರಿಂದದೇವಿ ಸಂತೃಪ್ತಿಯಾಗಿ ಗ್ರಾಮದ ಜನ ಜಾನುವಾರಗಳಿಗೆ ತೊಂದರೆಯಾಗುವುದಿಲ್ಲ ಎಂಬ ನಂಬಿಕೆ ಗ್ರಾಮಸ್ಥರಲ್ಲಿದೆ ಎಂಬ ನಂಬಿಕೆ ಗ್ರಾಮಸ್ಥರದ್ದು.

ಕುರಿಯ ರಕ್ತ ಹೀರಿದ ನಂತರ ಆ ಕುರಿಯನ್ನು ವಾಪಸ್‌ ಭಕ್ತರಿಗೆ ನೀಡಲಾಗುತ್ತದೆ. ಅವುಗಳನ್ನು ಮನೆಗೆ ಕೊಂಡೊಯ್ಯುವ ಭಕ್ತರು ಬಾಡೂಟ ಮಾಡಿ ಸೇವಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT