ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂ ಧರ್ಮಕ್ಕೆ ವೇಗ ತಂದ ಪ್ರಧಾನಿ ನರೇಂದ್ರ ಮೋದಿ: ಚಕ್ರವರ್ತಿ ಸೂಲಿಬೆಲೆ

Published 30 ಸೆಪ್ಟೆಂಬರ್ 2023, 4:42 IST
Last Updated 30 ಸೆಪ್ಟೆಂಬರ್ 2023, 4:42 IST
ಅಕ್ಷರ ಗಾತ್ರ

ಚಾಮರಾಜನಗರ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಜೀವ ಸವೆಸಿ ಭಾರತವನ್ನು ಕಟ್ಟುತ್ತಿದ್ದಾರೆ. ಆರ್ಥಿಕವಾಗಿ ಭಾರತ ಇಂದು ಸದೃಢವಾಗಿದೆ. ಮೋದಿಯವರು ಅಧಿಕಾರಕ್ಕೆ ಬಂದ ಮೇಲೆ ಧಾರ್ಮಿಕ ವಿಚಾರದಲ್ಲಿ ತುಂಬಾ ಕೆಲಸಗಳು ಆಗಿವೆ. ಅವರು ಹಿಂದೂ ಧರ್ಮಕ್ಕೆ ವೇಗ ತಂದುಕೊಟ್ಟಿದ್ದಾರೆ’ ಎಂದು ನಮೋ ಬ್ರಿಗೇಡ್‌ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಶುಕ್ರವಾರ ಹೇಳಿದರು. 

ನಗರದ ನಂದಿ ಭವನದಲ್ಲಿ ನಮೋ ಬ್ರಿಗೇಡ್ ವತಿಯಿಂದ ನಡೆದ ‘ಸಧೃಢ ಮತ್ತು ಸಮೃದ್ದ ಭಾರತಕ್ಕಾಗಿ ಮೋದಿ’ ಎಂಬ ‌ವಿಚಾರವಾಗಿ ಹಮ್ಮಿಕೊಂಡಿದ್ದ ಬೈಕ್ ಯಾತ್ರಾ ಸಂಬಂಧ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕೋವಿಡ್‌ ಸಮಯದಲ್ಲಿ ಐದು ರಾಷ್ಟ್ರಗಳು ಲಸಿಕೆ ತಯಾರಿಸಿದ್ದರೂ, ಬಡರಾಷ್ಟ್ರ ಎಂದು ಕರೆಸಿಕೊಳ್ಳುವ ಭಾರತ ಲಸಿಕೆಗಳನ್ನು ತಯಾರಿಸಿ ಜಗತ್ತಿನ ರಾಷ್ಟ್ರಗಳಿಗೆ ಸಿಗುವಂತೆ ಮಾಡಿತ್ತು. ಒಂದು ಪೈಸೆ ಲಾಭ ಇಲ್ಲದೆ 100 ರಾಷ್ಟ್ರಗಳಿಗೆ ಪೂರೈಸಿತ್ತು’ ಎಂದು ಹೇಳಿದರು. 

ಚೀನಾ ಮತ್ತು ಪಾಕಿಸ್ತಾನದದ ತಂಟೆ ನಿಲ್ಲಬೇಕೆಂದರೆ ಮೋದಿಯವರು ಬರಬೇಕಾಯಿತು. ಭಾರತವು ಪಾಕಿಸ್ತಾನವನ್ನು ಯಾವ ರೀತಿ ಮಟ್ಟ ಹಾಕಿದೆ ಎಂದರೆ, ಪಾಕ್‌ ಈಗ ಭಿಕಾರಿ ರಾಷ್ಟ್ರವಾಗಿದೆ. ಅದು ನಾಲ್ಕು ಹೋಳಾಗಲಿದೆ ಎಂದು ಜಗತ್ತಿನ ರಾಷ್ಟ್ರಗಳು ಹೇಳುತ್ತಿವೆ’ ಎಂದರು.

‘ಚೀನಾವು ಅದರ ಗಡಿಭಾಗದಲ್ಲಿ ಅಭಿವೃದ್ಧಿ ಪಡಿಸಿರುವಂತಹ ರಸ್ತೆಗಳ ನಿರ್ಮಾಣ ಕಾರ್ಯ ಈಗ ನಮ್ಮ ಗಡಿಭಾಗದಲ್ಲಿ ₹11 ಸಾವಿರ ಕೋಟಿ ವೆಚ್ಚದಲ್ಲಿ ರಸ್ತೆಯಾಗುತ್ತಿದೆ. ರಾಹುಲ್ ಗಾಂಧಿಯವರು ಲಡಾಖ್‌ಗೆ ಹೋಗಿ, ಚೀನಿಯರು ಭಾರತದ ಹಳ್ಳಿಗಳಿಗೆ ಬಂದಿದ್ದಾರೆ ಎಂದು ಹೇಳಿದರು. ಅದರೆ ಇದುವರೆವಿಗೂ ಯಾವ ಹಳ್ಳಿ ಎಂದು ಹೇಳಿಲ್ಲ’ ಎಂದು ಹೇಳಿದ ಅವರು, ‘ರಾಹುಲ್ ಗಾಂಧಿ ಯಾವುದೇ ಕಾರಣಕ್ಕೂ ಪ್ರಧಾನಿ ಆಗುವುದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

‘ಅಯೋಧ್ಯೆ ರಾಮ ಮಂದಿರ 2024ರ ಜನವರಿ 22, 23, 24 ರಂದು ಉದ್ಘಾಟನೆ ಆಗಲಿದ್ದು, ಅನೇಕ ದೇಶದ ಜನರು ಇದರ ಉದ್ಘಾಟನೆಗೆ ಬರಲು ಕಾಯುತ್ತಿದ್ದಾರೆ. ಮಂದಿರದಲ್ಲಿ ಒಂದು ಹುಂಡಿ ಇಲ್ಲ, ಆರತಿ ತಟ್ಟೆಗೆ ಕಾಸು ಹಾಕುವಂತಿಲ್ಲ. ಉಚಿತ ಊಟ, ಅಂಗವಿಕಲರಿಗೆ ದೇವಸ್ಥಾನ ನೋಡಲು ಗಾಲಿ ಕುರ್ಚಿಯ ವ್ಯವಸ್ಥೆಗಳು ಇರಲಿವೆ’ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT