ಚಾಮರಾಜನಗರ: ಹುಬ್ಬಳ್ಳಿ ತಾಲ್ಲೂಕಿನ ಇನಾಮ ವೀರಪುರ ಗ್ರಾಮದಲ್ಲಿ ಗರ್ಭಿಣಿ ಮಾನ್ಯ ದೊಡ್ಡಮನಿ ಹತ್ಯೆ ಹಾಗೂ ಪತಿಯ ಕುಟುಂಬಸ್ಥರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿ ಜಿಲ್ಲಾ ಮಾದಿಗ ಸಂಘಟನೆಗಳ ಒಕ್ಕೂಟದ ವತಿಯಿಂದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ದಲಿತ ಸಮುದಾಯಕ್ಕೆ ಸೇರಿದ ವಿವೇಕಾನಂದ ದೊಡ್ಡಮನಿ ಎಂಬ ಯುವಕನನ್ನು ಮಾನ್ಯ ಪ್ರೀತಿಸಿ ವಿವಾಹವಾಗಿದ್ದರು. ಅನ್ಯೋನ್ಯವಾಗಿದ್ದ ಪತಿ ಪತ್ನಿಯನ್ನು ದೂರ ಮಾಡಲು ಮಾನ್ಯಳನ್ನು ಆಕೆಯ ತಂದೆಯೇ ಬರ್ಬರವಾಗಿ ಕೊಲೆ ಮಾಡಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವ ವಿಚಾರವಾಗಿದ್ದು ಇದೊಂದು ಮರ್ಯಾದೆಗೇಡು ಹತ್ಯೆಯಾಗಿದೆ ಎಂದು ಟೀಕಿಸಿದರು.

ವಿವೇಕನಂದ ದೊಡ್ಡಮನಿ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ, ಸರ್ಕಾರಿ ನೌಕರಿ ಹಾಗೂ ಜೊತೆಗೆ ರಕ್ಷಣೆ ನೀಡಬೇಕು. ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸಿ ಆರೋಪಿಗಳಿಗೆ ಗರಿಷ್ಠ ಶಿಕ್ಷೆಯಾಗುವಂತೆ ಮಾಡಬೇಕು ಒಂದು ಮನವಿಯಲ್ಲಿ ಒತ್ತಾಯಿಸಲಾಯಿತು.

ಇಂತಹ ಕಹಿ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಸರ್ಕಾರ ಜಾತಿ ವಿನಾಶದ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭ ಮಾದಿಗ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಬಸವನಪುರ ರಾಜಶೇಖರ್, ಮುಖಂಡರಾದ ಹೆಚ್.ಹೆಚ್.ನಾಗರಾಜು, ಜವರಯ್ಯ ಅರಕಲವಾಡಿ, ರಾಮಸಮುದ್ರ ಶಿವಕುಮಾರ್, ಮೂರ್ತಿ ಮೂಡಹಳ್ಳಿ, ಗುರುಲಿಂಗಯ್ಯ, ದ್ವಾರ್ಕಿ ಬಸವರಾಜು, ಸಿದ್ದಯ್ಯ ಹಸಗೂಲಿ, ಎಲ್ಐಸಿ ಸಿದ್ದರಾಜು, ಚಾಮರಾಜು, ಎಂ.ಶಿವಕುಮಾರ್, ಸಿ.ಚನ್ನಬಸವಯ್ಯ, ಲಿಂಗರಾಜು, ದೇವರಾಜು, ಕೆಸ್ತೂರು ಮರಪ್ಪ, ಸುಂದ್ರ, ಬೆಳ್ಳಿಯಪ್ಪ, ಸಿ.ಎಚ್.ರಂಗಸ್ವಾಮಿ, ಸ್ವಾಮಿ, ಸಿ.ನಾಗಮಲ್ಲು, ಶಿವಕುಮಾರ್ ರಾಮಸಮುದ್ರ, ಸೇರಿದಂತೆ ಹಲವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.