ಚಾಮರಾಜನಗರ: ಜಿಲ್ಲೆಯಾದ್ಯಂತ ಬುಧವಾರ ಸಹಸ್ರಾರು ಅಭಿಮಾನಿಗಳು ಹಾಗೂ ಸಂಘಟನೆಗಳು ನಟ ದಿ.ಪುನೀತ್ ರಾಜ್ಕುಮಾರ್ ಪುಣ್ಯಸ್ಮರಣೆ ಆಚರಿಸಿದವು. ನಗರ, ಪಟ್ಟಣಗಳ ಪ್ರಮುಖ ಬಡಾವಣೆಗಳಲ್ಲಿ ವೃತ್ತಗಳಲ್ಲಿ ಅಪ್ಪು ಕೌಟೌಟ್ಗಳನ್ನು ನಿಲ್ಲಿಸಿ ಹೂವಿನ ಮಾಲೆಗಳನ್ನು ಹಾಕಿದರು.

ನಗರದ ಮಾರಿಗುಡಿ ಸಮೀಪದಲ್ಲಿರುವ ಕಾಮಧೇನು ಮಿಲ್ಕ್ ಪಾರ್ಲರ್ ಎದುರು ರಾಜರತ್ನ ಅಪ್ಪು ಯುವ ಸೇನಾ ಸಮಿತಿ ವತಿಯಿಂದ ನಾಲ್ಕನೇ ವರ್ಷದ ಪುನೀತ್ ರಾಜಕುಮಾರ್ ಪುಣ್ಯಸ್ಮರಣೆ ನಡೆಯಿತು. ಪವರ್ಸ್ಟಾರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅಭಿಮಾನಿಗಳು ಗುಣಗಾನ ಮಾಡಿದರು.

ರಾಜರತ್ನ ಅಪ್ಪು ಯುವಸೇನಾ ಸಮಿತಿ ಅಧ್ಯಕ್ಷ ಕ್ಯಾಂಟೀನ್ ಮಂಜು ಮಾತನಾಡಿ, ಯುವಕರ ಕಣ್ಮಣಿಯಾಗಿದ್ದ ಪುನೀತ್ ರಾಜಕುಮಾರ್ ದೈಹಿಕವಾಗಿ ಅಗಲಿದ್ದರೂ ಯುವಜನತೆಯ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾರೆ. ವಿಶಿಷ್ಟ ವ್ಯಕ್ತಿತ್ವ, ಅತ್ಯುತ್ತಮ ನಟನೆ, ಸ್ನೇಹಪರ ಗುಣಗಳಿಂದ ಅಭಿಮಾನಿಗಳ ಪಾಲಿಗೆ ಸದಾ ಸ್ಫೂರ್ತಿಯಾಗಿದ್ದಾರೆ ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಸಮಿತಿಯ ಮಂಜು ಮಿಲನ್, ಕಾರ್ತಿಕ್, ಮದನ, ರವಿ, ಮನು, ಮಧು, ರಮೇಶ್, ಮಂಗಲ ಮಾದೇಶ್, ಕುಮಾರ್, ಹರದನಹಳ್ಳಿ ಮಹೇಶ್, ವಿಷ್ಣು, ಮಣಿ, ಚಂದ್ರು, ಆಟೋ ಮಹೇಶ್, ಆದರ್ಶ, ಅಂಕಶೆಟ್ಟಿ, ಸಿ.ಆರ್.ಕೃಷ್ಣ, ರಾಜು, ಶಿವು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.