ಚಾಮರಾಜನಗರ: ಮಾಜಿ ರಾಜ್ಯಪಾಲ ದಿ.ಬಿ.ರಾಚಯ್ಯನವರು ರಾಜ್ಯ ಕಂಡ ಆದರ್ಶ ರಾಜಕಾರಣಿ ಎಂದು ವಿಧಾನಪರಿಷತ್ ಸದಸ್ಯ ಶಿವಕುಮಾರ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಆಲೂರಿನಲ್ಲಿರುವ ಚಿರಶಾಂತಿಧಾಮದಲ್ಲಿ ಶುಕ್ರವಾರ ದಿ.ಗೌರಮ್ಮ ಅವರ ಮೊದಲ ಹಾಗೂ ಮಾಜಿ ರಾಜ್ಯಪಾಲ ದಿ.ಬಿ.ರಾಚಯ್ಯ ಅವರ 26ನೇ ವರ್ಷದ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಧೀಮಂತ ವ್ಯಕ್ತಿತ್ವದ ಬಿ.ರಾಚಯ್ಯ ಅವರಿಗೆ ಮುಖ್ಯಮಂತ್ರಿಯಾಗುವ ಎಲ್ಲ ಅವಕಾಶಗಳಿದ್ದರೂ ಹಲವು ಕಾರಣಗಳಿಂದ ಕೈತಪ್ಪಿತು. 50 ವರ್ಷಗಳಿಗೂ ಹೆಚ್ಚು ಕಾಲ ರಾಜಕಾರಣದಲ್ಲಿದ್ದ ರಾಚಯ್ಯನವರ ವ್ಯಕ್ತಿತ್ವ ಯುವ ರಾಜಕಾರಣಿಗಳಿಗೆ ಮಾದರಿ ಎಂದರು.

ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ರಾಚಯ್ಯನವರ ಜನಪರ ಕೆಲಸಗಳು ಇಂದಿಗೂ ಜೀವಂತವಾಗಿವೆ. ಸಚಿವರಾಗಿದ್ದಾಗ ರಾಜ್ಯದಾದ್ಯಂತ ಪ್ರವಾಸಮಾಡಿ ಉತ್ತಮ ಕಾರ್ಯಕ್ರಮಗಳ ಅನುಷ್ಠಾನದ ಮೂಲಕ ಜನಾನುರಾಗಿ ರಾಜಕಾರಣಿಯಾಗಿದ್ದರು. ವಹಿಸಿಕೊಂಡ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದರು ಎಂದರು.

ರಾಜಕಾರಣದ ಜೊತೆಗೆ ಸಾರ್ವಜನಿಕ ಜೀವನದಲ್ಲೂ ಸರಳ ವ್ಯಕ್ತಿಯಾಗಿ ಶುದ್ಧಹಸ್ತ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದರು. ಅವರ ಹಾದಿಯಲ್ಲಿ ಪುತ್ರ ಹಾಗೂ ಶಾಸಕ ಎ.ಆರ್.ಕೃಷ್ಣಮೂರ್ತಿ ಹಾಗೂ ಅವರ ಸಹೋದರ ಸಾಗುತ್ತಿದ್ದಾರೆ ಎಂದರು.

ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ತಂದೆ ರಾಚಯ್ಯ ಅವರ 26ನೇ ಸಂಸ್ಮರಣೆ ಹಾಗೂ ತಾಯಿ ಗೌರಮ್ಮನವರ ಪ್ರಥಮ ಪುಣ್ಯ ಸ್ಮರಣೆಯಲ್ಲಿ ಅವರ ಅಭಿಮಾನಿಗಳು ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುವುದು ತಂದೆಯವರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ತಂದೆಯವರ ಮಾರ್ಗದರ್ಶನ ಹಾಗೂ ರಾಜಕೀಯ ಹಾದಿಯಲ್ಲಿ ಸಾಗುತ್ತಿದ್ದೇನೆ ಎಂದರು.

ಕಾರ್ಯಕ್ರಮದಲ್ಲಿ ಪುತ್ರ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್.ಬಾಲರಾಜು, ಎ.ಆರ್.ಪ್ರಭಾವತಿ, ವೇದಾವತಿ, ಉಮಾವತಿ, ಆರತಿ, ತ್ರಿವೇಣಿ, ಮಾಜಿ ಸಚಿವ ಬಿ.ಬಿ.ಲಿಂಗಯ್ಯ, ಮುಖಂಡರಾದ ಪುಟ್ಟಮಾದಯ್ಯ, ವೆಂಕಟೇಶ್, ಮಂಜುಳಾ ಕೃಷ್ಣಮೂರ್ತಿ, ವಿಜಯಲಕ್ಷ್ಮಿ ಬಾಲರಾಜು, ಶ್ರೀವರ್ಧನ್, ರೋಷನಿ ಪ್ರದೀಪ್ ಕುಮಾರ್, ಬೋಳಯ್ಯ, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಎಂ.ರಾಮಚಂದ್ರ, ಅಯ್ಯನಪುರ ಶಿವಕುಮಾರ್, ಕೇತಮ್ಮ, ಯೋಗೇಶ್, ಕೊಪ್ಪಾಳಿ ಮಹದೇವ ನಾಯಕ, ಕೆರೆಹಳ್ಳಿ ನವೀನ್, ಎಸ್.ಸೋಮನಾಯಕ, ಕೆ.ಪಿ.ಸದಾಶಿವಮೂರ್ತಿ, ಕಮಲ್, ಲಕ್ಷ್ಮೀ ಪುಟ್ಟಸ್ವಾಮಿ, ಚೂಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ತೋಟೇಶ್, ಗುರುಸ್ವಾಮಿ, ಪ್ರಭುಪ್ರಸಾದ್, ಹೊಂಗನೂರು ಚಂದ್ರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.