ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡ್ಲುಪೇಟೆ: ಬಿರುಗಾಳಿಗೆ ಹಾರಿ ಹೋದ ಮನೆ ಹೆಂಚು, ಟಿ.ವಿಗೆ ಹಾನಿ

Published 24 ಮಾರ್ಚ್ 2024, 16:13 IST
Last Updated 24 ಮಾರ್ಚ್ 2024, 16:13 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಬಿರುಗಾಳಿ ರಭಸಕ್ಕೆ ತಾಲ್ಲೂಕಿನ ಅಣ್ಣೂರು ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ಎರಡು ಮನೆಯ ಹೆಂಚುಗಳು ಹಾಗೂ ಚಾವಣಿ ಹಾರಿ ಹೋಗಿವೆ.

ಬಿರುಗಾಳಿಗೆ ಉಮೇಶ್ ಎಂಬುವರ ಮನೆಯ ಚಾವಣಿ, ಹೆಂಚು ಹಾಗೂ ವಿದ್ಯುತ್ ಲೈನ್ ಕಿತ್ತು ಹೋಗಿದೆ. ಜೊತೆಗೆ ಸಿದ್ದರಾಜು ಎಂಬುವವರ ಮನೆ ಚಾವಣಿ, ಹೆಂಚು ಮಲ್ಲಿಗಮ್ಮ ಎಂಬುವವರ ಮನೆಯ ಹೆಂಚು, ವಿದ್ಯುತ್ ಲೈನ್

ಗುರುಸಿದ್ದಯ್ಯ ಎಂಬುವರ ಮನೆಯ ಹೆಂಚು ಹಾಗೂ ಗೌರಮ್ಮ ಮನೆಯ ಹೆಂಚುಗಳು ಕೂಡ ಗಾಳಿಗೆ ಹೊಡೆತಕ್ಕೆ ಒಡೆದು ಹೋಗಿದೆ. ಘಟನೆಯಿಂದ ಮಾಲೀಕರಿಗೆ ಸಾವಿರಾರು ರೂಪಾಯಿ ನಷ್ಟ ಉಂಟಾಗಿದೆ. ಅಷ್ಟೇ ಅಲ್ಲದೆ ಘಟನೆ ವೇಳೆ ವಿದ್ಯುತ್ ಲೈನ್ ಮೇಲೆ ಚಾವಣಿ ಬಿದ್ದ ಪರಿಣಾಮ ಶಾರ್ಟ್ ಸರ್ಕೀಟ್‌ನಿಂದ ಸಿದ್ದಮ್ಮಣಿ, ವೆಂಕಟೇಶಿ, ಮೀನಾ ಅವರ ಮನೆಯ ಮೂರು ಟಿವಿಗಳು ಕೆಟ್ಟು ಹೋಗಿದೆ.

ಪರಿಹಾರಕ್ಕೆ ಒತ್ತಾಯ: ಬಿರುಗಾಳಿಯಿಂದ ಮನೆಯ ಚಾವಣಿ ಹಾಗೂ ಹೆಂಚುಗಳು ಹಾರಿ ಹೋಗಿರುವ ಕಾರಣ ಐದು ಮನೆ ಮಾಲೀಕರಿಗೆ ನಷ್ಟ ಉಂಟಾಗಿದೆ. ಆದ್ದರಿಂದ ಅಧಿಕಾರಿಗಳು ಕೂಡಲೇ ಆಗಮಿಸಿ ಪರಿಶೀಲಿಸುವ ಜೊತೆಗೆ ಸೂಕ್ತ ಪರಿಹಾರ ದೊರಕಿಸಿ ಕೊಡಬೇಕೆಂದು ಅಣ್ಣೂರು ಗ್ರಾಮದ ಸಂತೋಷ್ ಕುಮಾರ್ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT