ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳ್ಳೇಗಾಲ | ಎರಡು ಗುಂಪಿನ ನಡುವೆ ಗಲಾಟೆ: ದೂರು ದಾಖಲು

Published 8 ಮೇ 2024, 14:31 IST
Last Updated 8 ಮೇ 2024, 14:31 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಸಾಲದ ವಿಚಾರವಾಗಿ ಎರಡು ಗುಂಪಿನ ನಡುವೆ ಗಲಾಟೆಯಾಗಿದ್ದು, ಪ್ರತ್ಯೇಕ ದೂರು ದಾಖಲಾಗಿದೆ.

ಮಾಂಬಳ್ಳಿ ಗ್ರಾಮದ ಮಹೇಶ್ ಹಲ್ಲೆಗೊಳಗಾಗಿದ್ದು, ರಾಕೇಶ್, ರಂಜಿತ್, ಅರಸ್, ವೆಂಕಟೇಶ್, ಪ್ರಭು, ಮಹೇಶ್ ಇತರೆ ನಾಲ್ವರು ಹಲ್ಲೆ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ.

‘ಮಹೇಶ್ ಎರಡು ತಿಂಗಳ ಹಿಂದೆ ಗ್ರಾಮದ ರಾಕೇಶ್ ಅವರ ತಮ್ಮ ರಂಜಿತ್ ಬಳಿ ₹40 ಸಾವಿರ ಹಣವನ್ನು ತಿಂಗಳ ಬಡ್ಡಿಗೆ ಪಡೆದುಕೊಂಡು ತನ್ನ ಚಿಕ್ಕಪ್ಪ ಮಾದೇವ್ ಅವರಿಗೆ ನೀಡಿದ್ದರು. ನಂತರ ಸಾಲದ ಹಣಕ್ಕೆ ಒಂದು ತಿಂಗಳ ಬಡ್ಡಿ ಕಟ್ಟಿದ್ದರು. ಮಹೇಶ್ ಅವರಿಗೆ ರಂಜಿತ್ ಅಣ್ಣ ರಾಕೇಶ್ ಕರೆ ಮಾಡಿ ಹಣದ ವಿಚಾರವಾಗಿ ಮಾತನಾಡಲು ಕರೆದಿದ್ದರು. ಮಹೇಶ್ ಎಂಜಿಎಸ್‌ವಿ ಕಾಲೇಜು ಬಳಿ ಮಂಗಳವಾರ ರಾತ್ರಿ 8.30ರ ಸಮಯದಲ್ಲಿ ರಾಕೇಶ್, ರಂಜಿತ್, ಅರಸ್, ವೆಂಕಟೇಶ್, ಪ್ರಭು ಮಹೇಶ್ ಹಾಗೂ ಇತರರು ಅವಾಚ್ಯ ಶಬ್ದಗಳಿಂದ ನಿಂದಿಸಿ ಗಲಾಟೆ ಮಾಡಿದ್ದು ಈ ವೇಳೆ ರಂಜಿತ್ ರಾಡಿನಿಂದ ಹಲ್ಲೆ ಮಾಡಿದ್ದಲ್ಲದೆ ಎಲ್ಲರೂ ಕೊಲೆ ಬೆದರಿಕೆ ಹಾಕಿದ್ದಾರೆ. ಹಲ್ಲೆ ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಮಹೇಶ್ ದೂರುನಲ್ಲಿ ತಿಳಿಸಿದ್ದಾರೆ.

ಪ್ರತಿದೂರು: ನಗರ ಪೊಲೀಸ್ ಠಾಣೆಗೆ ರಾಕೇಶ್ ತೆರಳಿ, ‘ಮಹೇಶ್ ನನ್ನ ತಮ್ಮ ರಂಜಿತ್ ಬಳಿ ಪಡೆದುಕೊಂಡಿದ್ದ ₹40 ಸಾವಿರ ಹಣ ಕೇಳಿದಾಗ ನನ್ನನ್ನು ಹಾಗೂ ನನ್ನ ತಮ್ಮನನ್ನು ನಿಂದಿಸಿ ನನ್ನ ಮೇಲೆ ಹಲ್ಲೆ ಮಾಡಿದ್ದಾನೆ. ನನ್ನ ತಮ್ಮನ ಮೇಲೂ ಮಹೇಶ್ ಹಾಗೂ ಸ್ನೇಹಿತ ಅಭಿಷೇಕ್ ಹಲ್ಲೆ ಮಾಡಿದ್ದಾರೆ’ ಎಂದು ದೂರ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT