ಕೊಳ್ಳೇಗಾಲ: ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು ನಗರಸಭೆ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟುನಿಂತಿದ್ದು ನಾಗರಿಕರು ನೀರಿಗಾಗಿ ಅಲೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ನೀರಿನ ಬವಣೆ ನೀಗುವ ನಿಟ್ಟಿನಲ್ಲಿ ನಗರಸಭೆಯು ಸಾರ್ವಜನಿಕರ ತೆರಿಗೆ ಹಣ ಬಳಸಿಕೊಂಡು ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಗರದ 21 ಕಡೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು (ಆರ್ಒ) ಅಳವಡಿಕೆ ಮಾಡಿತ್ತು. ನಿರ್ವಹಣೆಯ ಹೊಣೆಗಾರಿಕೆಯನ್ನೂ ನಗರಸಭೆಯೇ ವಹಿಸಿಕೊಂಡಿತ್ತು.

ಆದರೆ, ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ನಿರ್ವಹಣೆ ಕೊರತೆಯಿಂದ ಬಹುತೇಕ ಶುದ್ಧ ನೀರಿನ ಘಟಕಗಳು ಕೆಟ್ಟುನಿಂತಿವೆ. ನಗರಸಭಾ ವ್ಯಾಪ್ತಿಯಲ್ಲಿರುವ 21 ನೀರಿನ ಘಟಕಗಳ ಪೈಕಿ 4 ರಿಂದ 5 ಘಟಕಗಳು ಮಾತ್ರ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರತಿನಿತ್ಯ ಶುದ್ಧ ಕುಡಿಯುವ ನೀರು ಪೂರೈಸುವಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಬಳಿ ಶ್ರೀಸಾಮಾನ್ಯ ಅಂಗಲಾಚಬೇಕಾದ ಪರಿಸ್ದಿತಿ ನಿರ್ಮಾಣವಾಗಿದೆ.

ಘಟಕಗಳು ಆರಂಭವಾದ ಕೆಲದಿನಗಳಲ್ಲಿಯೇ ಅಸಮರ್ಪಕ ನಿರ್ವಹಣೆಯಿಂದಾಗಿ ಆಗಾಗ ಮೋಟಾರ್ಗಳು ಕೆಡುವುದು, ಫಿಲ್ಟರ್ಗಳು ಹಾಳಾಗುವುದು, ಘಟಕಕ್ಕೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ, ತಾಂತ್ರಿಕ ದೋಷ, ಪೈಪ್ಲೈನ್ನಲ್ಲಿ ಸಮಸ್ಯೆಯಿಂದಾಗಿ ಘಟಕಗಳು ಕಾರ್ಯನಿರ್ವಹಿಸಿದ್ದಕ್ಕಿಂತ ದುರಸ್ತಿಯಲ್ಲಿದ್ದ ದಿನಗಳೇ ಹೆಚ್ಚು ಎನ್ನುತ್ತಾರೆ ಸ್ಥಳೀಯರು.

ಮಳೆಗಾಲ ಆರಂಭವಾಗಿದ್ದು ಕೊಳಚೆ ನೀರಿನಿಂದ ನೀರಿನ ಮೂಲಗಳು ಕಲುಷಿತಗೊಳ್ಳುವ ಅಪಾಯವಿದ್ದು ನಲ್ಲಿಗಳಲ್ಲಿ ನೀರಿನ ಬಣ್ಣ ಬದಲಾಗಿ ಕುಡಿಯುಲು ಯೋಗ್ಯವಾಗಿರುವುದಿಲ್ಲ. ಇಂತಹ ಸಂದರ್ಭದಲ್ಲಿ ಶುದ್ಧ ನೀರಿನ ಘಟಕಗಳು ಕಾರ್ಯ ನಿರ್ವಹಿಸಿದರೆ ಜನರ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

ಅನಾರೋಗ್ಯ:

ಶುದ್ಧ ಕುಡಿಯುವ ನೀರಿನ ಅಲಭ್ಯತೆಯಿಂದ ಜನರು ಕೊಳವೆ ಬಾವಿ ಹಾಗೂ ಇತರೆ ಜಲಮೂಲಗಳಿಂದ ನೀರು ತಂದು ಕುಡಿಯುತ್ತಿದ್ದಾರೆ. ಪರಿಣಾಮ ಬಹಳಷ್ಟು ಮಂದಿಗೆ ಆಗಾಗ ಅನಾರೋಗ್ಯ ಕಾಣಿಸಿಕೊಳ್ಳುತ್ತಿದೆ. ಕಲುಷಿತ ನೀರಿನ ಸೇವನೆ ಬಗ್ಗೆ ನಗರಸಭೆಗೆ ಮಾಹಿತಿ ಇದ್ದರೂ ಅಧಿಕಾರಿಗಳು ತಲೆಕೆಡಿಸಿಕೊಳ್ಳುತ್ತಿಲ್ಲ.

ನಾಣ್ಯಗಳು ಹೊರಬರುವುದಿಲ್ಲ:

ಘಟಕಕ್ಕೆ ₹ 5 ನಾಣ್ಯ ಹಾಕಿದರೆ 20 ಲೀಟರ್ ನೀರು ಬರುತ್ತದೆ. ಕೆಲವು ಘಟಕಗಳಲ್ಲಿ ನಾಣ್ಯ ಒಳಗೆ ಹೋದರೂ ನೀರು ಬರುತ್ತಿಲ್ಲ. ನೀರು ಇಲ್ಲದೆ, ನಾಣ್ಯವೂ ಇಲ್ಲದೆ ಮನೆಗೆ ಬರಿಗೈಲಿ ಮರಳಬೇಕಾಗಿದೆ. ಇನ್ನೂ ಕೆಲವು ಘಟಕಗಳಲ್ಲಿ ನಾಣ್ಯ ಹಾಕಿದರೂ ಎರಡರಿಂದ ಮೂರು ಲೀಟರ್ ನೀರು ಮಾತ್ರ ಬರುತ್ತಿದೆ. ಕೆಲವು ಕಡೆ ನೀರು ಶುದ್ಧವಾಗಿರುವುದಿಲ್ಲ. ನೀರಿನ ಫಿಲ್ಟರ್ಗಳನ್ನು ಕಾಲಕಾಲಕ್ಕೆ ಬದಲಿಸದಿರುವುದು ಸಮಸ್ಯೆಗೆ ಕಾರಣ ಎನ್ನುತ್ತಾರೆ ನಾಗರಿಕರಾದ ಸಂದೀಪ್.

ತೆರಿಗೆ ಕಟ್ಟಿಸಿಕೊಳ್ಳುವ ನಗರಸಭೆ ಜನಸಾಮಾನ್ಯರ ಕಷ್ಟ ಸುಖಗಳಿಗೆ ಸ್ಪಂದಿಸದಿರುವುದು ವಿಪರ್ಯಾಸ. ತೆರಿಗೆ ವಸೂಲಿಗೆ ಬರುವ ಅಧಿಕಾರಿಗಳನ್ನು ವಾಪಸ್ ಕಳಿಸುತ್ತೇವೆ. ಸಮಸ್ಯೆ ಬಗೆಹರಿಸಿದ್ದರೆ ನಗರಸಭೆಗೆ ಮುತ್ತಿಗೆ ಹಾಕುತ್ತೇವೆ ಎಂದು ದೇವಂಗಪೇಟೆ ಬಡಾವಣೆ ನಿವಾಸಿ ಮಧುಚಂದ್ರ ಪ್ರಜಾವಾಣಿಗೆ ತಿಳಿಸಿದರು.

ಹಗರಣ; ಕೋಟ್ಯಂತರ ಹಣ ಗುಳಂ:

ಶುದ್ಧ ಕುಡಿಯುವ ನೀರಿನ ಘಟಕದ ನಿರ್ವಹಣೆಯಲ್ಲಿ ಕೋಟ್ಯಂತರ ರೂಪಾಯಿ ದುರುಪಯೋಗವಾಗಿರುವ ಬಗ್ಗೆ 21 ಅಧಿಕಾರಿಗಳ ವಿರುದ್ಧ ನಗರ ಠಾಣೆಯಲ್ಲಿ ಹಿಂದೆ ಪ್ರಕರಣ ದಾಖಲಾಗಿದೆ. ಆರೋಪಿತ ಅಧಿಕಾರಿಗಳು ಜಾಮೀನನ ಮೇಲೆ ಬಿಡುಗಡೆಯಾಗಿದ್ದಾರೆ. ಸಾರ್ವಜನಿಕರ ತೆರಿಗೆ ದುರುಪಯೋಗವಾಗಿದ್ದರೂ ಕ್ರಮ ಜರುಗಿಸದೆ ಮೌನವಾಗಿರುವ ನಗರಸಭೆಯ ನಡುವಳಿಕೆಯ ವಿರುದ್ಧ ಟೀಕೆಗಳು ವ್ಯಕ್ತವಾಗಿವೆ.

ಹಗರಣದ ಬಗ್ಗೆ ಪ್ರಶ್ನಿಸಿದರೆ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ನಡೆಯುತ್ತಿದೆ ಎಂದು ಸಬೂಬು ಹೇಳಿ ಜಾರಿಕೊಳ್ಳುತ್ತಿದ್ದಾರೆ. ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಸ್ಮಾರ್ಟ್ ಕಾರ್ಡ್ ವ್ಯವಸ್ಥೆ ಮಾಡಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಸುತ್ತುವುದೇ ಕಾಯಕ

ನಗರದಲ್ಲಿ ಬಹುತೇಕ ಆರ್ಒ ಘಟಕಗಳು ಕೆಟ್ಟಿರುವುದರಿಂದ ನೀರು ತರಲು ಬಡಾವಣೆಯಿಂದ ಬಡಾವಣೆಗೆ ಅಲೆಯುವುದೇ ನಿತ್ಯ ಕಾಯಕವಾಗಿದೆ. ಬೈಕ್ನಲ್ಲಿ ಖಾಲಿ ನೀರಿನ ಕ್ಯಾನ್ಗಳನ್ನು ಹಾಕಿಕೊಂಡು ಸುತ್ತುತ್ತಿದ್ದು ಪೆಟ್ರೋಲ್ ವ್ಯಯವಾಗುತ್ತಿದೆಯೇ ಹೊರತು ನೀರು ಸಿಗುತ್ತಿಲ್ಲ ಎನ್ನುತ್ತಾರೆ ಜಿ.ಪಿ.ಮಲ್ಲಪ್ಪಪುರಂ ಬಡಾವಣೆಯ ನಿವಾಸಿ ಲೋಕೇಶ್.

ಕೆಟ್ಟು ನಿಂತ ಘಟಕಗಳು

ತಾಲ್ಲೂಕು ಪಂಚಾಯಿತಿ ಬಳಿಯ ಘಟಕ ಭೀಮನಗರ 3ನೇ ವಾರ್ಡ್ ಭೀಮನಗರ 4ನೇ ವಾರ್ಡ್ ಪ್ರಶಾಂತಿ ಲಾಡ್ಜ್ ಸಮೀಪ ಆನಂದಜ್ಯೋತಿ ಕಾಲೋನಿ ಸಂತೆಬೀದಿ ಬಡಾವಣೆ ಮುಡಿಗುಂಡ ರೇಷ್ಮೆಗೂಡಿನ ಮಾರುಕಟ್ಟೆ ಮುಡಿಗುಂಡ ಅಂಬೇಡ್ಕರ್ ಭವನ ಎದುರು ಮುಡಿಗುಂಡ ನಾಯಕರ ಬಡಾವಣೆ ಸರ್ಕಾರಿ ಉಪವಿಭಾಗ ಆಸ್ಪತ್ರೆ ಆವರಣ ಹೊಸ ಅಣಗಳ್ಳಿ ಬಡಾವಣೆ ಬಿಎಂಎಚ್ಪಿ ಶಾಲೆ ಸಮೀಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.