ದಿನ ಭವಿಷ್ಯ: ಈ ರಾಶಿಯ ಸಿವಿಲ್ ಎಂಜಿನಿಯರುಗಳಿಗೆ ಕೆಲಸ ಸಿಗಲಿದೆ
Published 24 ಜುಲೈ 2025, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಆಫೀಸಿನ ಕೆಲಸಗಳನ್ನು ಮಾಡಿ ಮುಗಿಸುವಲ್ಲಿ ಆತುರ ತೋರುವಿರಿ, ಅದರಿಂದಾಗಿ ವ್ಯಾತ್ಯಾಸಗಳಾಗಬಹುದು. ಉನ್ನತ ವ್ಯಾಸಂಗದ ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಬರುವುದು. ಅನಿವಾರ್ಯವಾಗಿ ಪ್ರಯಾಣ ಕಂಡು ಬರುವುದು.
ವೃಷಭ
ನಿಮ್ಮ ಜೀವನ ಶೈಲಿಯನ್ನು ಸುಸಂಸ್ಕೃತವಾಗಿ ಬದಲಾಯಿಸಿಕೊಳ್ಳಲು ಪ್ರಾರಂಭಿಸಿ. ರಸ್ತೆ ಕಾಮಗಾರಿ ಟೆಂಡರ್‌ನಂತಹ ಉದ್ಯೋಗ ನಡೆಸುವವರಿಗೆ ಸರ್ಕಾರದಿಂದ ಗುತ್ತಿಗೆ,ಕೆಲಸಗಾರರಿಂದ ಅಸಹಕಾರವು ಕಂಡುಬರಲಿದೆ.
ಮಿಥುನ
ರಾಜಕೀಯ ವಲಯದಲ್ಲಿರುವವರು ನಿಮ್ಮ ರಚನಾತ್ಮಕ ಕಾರ್ಯ ಕ್ರಮಗಳ ಕುರಿತು ದೂರದರ್ಶನ ಮಾಧ್ಯಮದವರಿಂದ ಮೆಚ್ಚುಗೆಯ ಮಾತು ಕೇಳಲಿದ್ದೀರಿ. ಈ ದಿನವನ್ನು ಸಂತೋಷವಾಗಿ ಕಳೆಯುವಿರಿ.
ಕರ್ಕಾಟಕ
ಸಂಘ ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ. ಸಹೋದರಿಯ ಮದುವೆಯಂತಹ ಸಂದರ್ಭಕ್ಕೆ ಆಪ್ತರೊಬ್ಬರು ನಿಮ್ಮ ನೆರವಿಗೆ ಬರಲಿದ್ದಾರೆ ಎಂಬುದು ಮಾನಸಿಕ ಧೈರ್ಯ ಹೆಚ್ಚಿಸಲಿದೆ.
ಸಿಂಹ
ನಿಮ್ಮ ವೃತ್ತಿಪರವಾದ ಸ್ಥಾನಮಾನದ ಬದಲಾವಣೆ ಬಯಸಿದಲ್ಲಿ ಕಾಯುವುದು ಅವಶ್ಯ. ನೆಚ್ಚಿನ ಉದ್ಯೋಗ ದೊರಕಿಸಿಕೊಳ್ಳಲು ತೀವ್ರ ಪ್ರಯತ್ನ ನಡೆಸುವಿರಿ. ಮಕ್ಕಳಿಂದ ಸಂತೋಷ ನೆಮ್ಮದಿಯನ್ನು ಕಾಣಲಿದ್ದೀರಿ.
ಕನ್ಯಾ
ನ್ಯಾಯಾಂಗ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಹಣದ ಆಸೆ ತೋರಿಸಿ ತಪ್ಪು ಕೆಲಸವನ್ನು ಮಾಡುವಂತೆ ಪ್ರಚೋದಿಸುತ್ತಾರೆ. ಅಂತಹ ಕೆಲಸ ಮಾಡಿದಲ್ಲಿ, ಅಧಿಕಾರ ಹೋಗುವ ಪರಿಸ್ಥಿತಿ ಎದುರಾಗುವುದು.
ತುಲಾ
ಚಿತ್ರಕಲೆ ಮತ್ತು ಸಾಹಿತ್ಯಕಾರರಿಗೆ ಶುಭ. ಸಿವಿಲ್ ಎಂಜಿನಿಯರುಗಳಿಗೆ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ದೊರೆಯುವುದು. ನೀವು ತೆಗೆದುಕೊಂಡಿರುವ ನಿರ್ಧಾರ ಸರಿಯಾದುದೆಂದು ಮನವರಿಕೆ ಮಾಡಿಕೊಡುವಿರಿ.
ವೃಶ್ಚಿಕ
ಪಿತ್ರಾರ್ಜಿತ ಆಸ್ತಿಯ ವ್ಯವಹಾರಗಳು ಒಂದು ಹಂತ ತಲುಪಿದ್ದಕ್ಕೆ ಸಮಾಧಾನವಾಗುವುದು. ಸ್ನೇಹಿತನ ಹಣವನ್ನು ದಿನಾಂತ್ಯಕ್ಕೆ ಹಿಂದಿರುಗಿಸಿ. ತೆರೆಮರೆಯಲ್ಲಿ ನಡೆಸಿದ ಕೆಲಸದಿಂದ ಅಧಿಕಾರ ಪಡೆದುಕೊಳ್ಳುವಿರಿ.
ಧನು
ಚರ ಅಥವಾ ಸ್ಥಿರ ಸ್ವತ್ತುಗಳು ಸಿಗುವ ಸಂಭವವಿದೆ. ಮನೆ ಕೆಲಸದಲ್ಲಿ ನಿರ್ಲಕ್ಷ್ಯ ತೋರಬೇಡಿ. ಸಹೋದರನಲ್ಲಿ ಮತ್ತು ನೆರೆಹೊರೆಯವರೊಂದಿಗೆ ಸೌಹಾರ್ದದಿಂದ ವರ್ತಿಸಿ, ಸಂಬಂಧಗಳು ಇನ್ನಷ್ಟು ಉತ್ತಮಗೊಳ್ಳುವುದು.
ಮಕರ
ನಿಮ್ಮ ಕ್ಷೇತ್ರದಲ್ಲಿ ಉಳಿದುಕೊಳ್ಳಲ್ಲೇಬೇಕಾದರೆ ಅವಿರತ ದುಡಿಮೆಯೊಂದೇ ಮಾರ್ಗ. ಕಂಟ್ರಾಕ್ಟ್ ಕೆಲಸಗಳು ಲಭಿಸುವವು. ನೀವು ಕೆಲವೊಂದು ಬದಲಾವಣೆಗೆ ಹೊಂದಿಕೊಳ್ಳಬೇಕಾದ ಅನಿವಾರ್ಯತೆ ಉಂಟಾಗಲಿದೆ.
ಕುಂಭ
ಬ್ಯಾಂಕಿನ ಸಾಲಗಳು ತೀರಿ ಮನೆಯಲ್ಲಿ ನೆಮ್ಮದಿ ಮೂಡಲಿದೆ. ವಾಹನ ಮಾರಾಟದ ಯೋಚನೆಯಲ್ಲಿರುವವರು ಆ ಯೋಚನೆಯನ್ನು ಕೈ ಬಿಡುವುದೇ ಸೂಕ್ತ. ಆಫೀಸಿನ ಕೆಲಸಗಳಿಗಾಗಿ ದೂರದ ಪ್ರಯಾಣ ಲಾಭದಾಯಕವಾಗಿದೆ.
ಮೀನ
ಮನೆಯವರ ಬೇಡಿಕೆಗಳನ್ನು ಸ್ವಲ್ಪ ಮಟ್ಟಿಗೆ ಪೂರೈಸುವಿರಿ. ಕಾರ್ಮಿಕ ಜನರಿಗೆ ಒಳ್ಳೆಯ ದಿನ. ಅನಗತ್ಯವಾದ ಮಾತುಗಳಿಂದ ದೂರವಿರಿ. ಅನಿವಾರ್ಯದ ಮಾತುಗಳನ್ನು ಎರಡು ಬಾರಿ ಯೋಚಿಸಿ ಮಾತನಾಡಿ.