ಮ್ಯಾಂಚೆಸ್ಟರ್: ಸ್ಪಿನ್ ಆಲ್ರೌಂಡರ್ ಗಳಾದ ರವೀಂದ್ರ ಜಡೇಜ ಮತ್ತು ವಾಷಿಂಗ್ಟನ್ ಸುಂದರ್ ಅವರು ಅಜೇಯ ಶತಕದೊಡನೆ ಭಾರತದ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಪರೂಪ ಎನ್ನಬಹುದಾದ ಪ್ರತಿಹೋರಾಟ ಪ್ರದರ್ಶಿಸಿದರು. ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಭಾನುವಾರ ಒಂದು ಹಂತದಲ್ಲಿ ಕಠಿಣವಾಗಿ ಕಂಡಿದ್ದ ಡ್ರಾ ಸಾಧಿಸಲು ಇವ ರಿಬ್ಬರ ವೀರೋಚಿತ ಆಟ ನೆರವಾಯಿತು.

ಭಾರತದ 358 ರನ್ಗಳಿಗೆ ಉತ್ತರವಾಗಿ ಇಂಗ್ಲೆಂಡ್ 669 ರನ್ಗಳ ಭಾರಿ ಮೊತ್ತ ಪೇರಿಸಿತ್ತು. ನಂತರ ಭಾರತ ನಾಲ್ಕೇ ಎಸೆತಗಳಲ್ಲಿ 2 ವಿಕೆಟ್ಗಳನ್ನು ಕಳೆದುಕೊಂಡಿತ್ತು. ತಂಡವನ್ನು ಕುಸಿತದಿಂದ ಕಾಪಾಡಿದ್ದ ಕೆ.ಎಲ್.ರಾಹುಲ್ ಮತ್ತು ಶುಭಮನ್ ಗಿಲ್ ಅವರು ಎಷ್ಟು ಹೊತ್ತು ಕಳೆಯಬಹುದೆಂಬುದರ ಮೇಲೆ ಪಂದ್ಯದ ಭವಿಷ್ಯ ಅಡಗಿತ್ತು. 2 ವಿಕೆಟ್ಗೆ 174 ರನ್ ಗಳಿಸಿದ್ದ ಭಾರತ ಇನಿಂಗ್ಸ್ ಸೋಲು ತಪ್ಪಿಸಲು 137 ರನ್ ದೂರದಲ್ಲಿತ್ತು. ಸರಣಿಯಲ್ಲಿ 2–1 ರಿಂದ ಮುಂದಿರುವ ಇಂಗ್ಲೆಂಡ್ ಎದುರು ಸೋಲು ತಪ್ಪಿಸುವ ಸವಾಲು ಎದುರಾಗಿತ್ತು. ರಾಹುಲ್ ಮತ್ತು ಗಿಲ್ ಮೂರನೇ ವಿಕೆಟ್ಗೆ 188 ರನ್ ಸೇರಿಸಿದರು.

ಬೆನ್ ಸ್ಟೋಕ್ಸ್ ಅವರು ದಿನದ ಏಳನೇ ಓವರಿನಲ್ಲಿ ಇನ್ಸ್ವಿಂಗರ್ ಮೂಲಕ ಕೆ.ಎಲ್.ರಾಹುಲ್ (90) ವಿಕೆಟ್ ಪಡೆದಾಗ ಆತಂಕ ಎದುರಾಯಿತು. ಆಕರ್ಷಕ 103 ರನ್ ಗಳಿಸಿದ್ದ ನಾಯಕ ಶುಭಮನ್ ಗಿಲ್ ಅವರ ವಿಕೆಟ್ ಅನ್ನು ಊಟಕ್ಕೆ 6 ನಿಮಿಷಗಳಿರುವಾಗ ಜೋಫ್ರಾ ಆರ್ಚರ್ ಪಡೆದು ಪ್ರವಾಸಿ ತಂಡದ ಮೇಲಿನ ಒತ್ತಡ ಹೆಚ್ಚಿಸಿದರು.

ಆದರೆ ಸುಂದರ್ (ಔಟಾಗದೇ 101, 206ಎ) ಮತ್ತು ಜಡೇಜ (ಔಟಾಗದೇ 107, 185ಎ) ಅವರು ಮುರಿಯದ ಐದನೇ ವಿಕೆಟ್ಗೆ 203 ರನ್ ಜೊತೆಯಾಟದಲ್ಲಿ ಭಾಗಿಯಾಗಿ ಇಂಗ್ಲೆಂಡ್ನ ಲೆಕ್ಕಾಚಾರಗಳನ್ನು ಬುಡಮೇಲುಗೊಳಿಸಿದರು. ಮೊದಲು ಎಚ್ಚರಿಕೆಯಿಂದ ಆಡಿದ ಇವರಿಬ್ಬರು ನಂತರ ಆತ್ಮವಿಶ್ವಾಸದಿಂದ ಆಡಿ ಪ್ರತ್ಯಾಕ್ರಮಣ ನಡೆಸಿದರು. ಪರಿವರ್ತನೆಯ ಹಾದಿಯಲ್ಲಿರುವ ತಂಡ ಗೌರವದ ಡ್ರಾ ಸಾಧಿಸಿತು. ಒಮ್ಮೊಮ್ಮೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಡ್ರಾ ಸಾಧಿಸುವುದೂ ಸಹ ವಿಜಯದಷ್ಟೇ ಸಂತೃಪ್ತಿ ನೀಡುತ್ತದೆ. ಭಾರತ ಡ್ರಾ ಆದಾಗ 143 ಓವರುಗಳನ್ನು ನಿಭಾಯಿಸಿ 4 ವಿಕೆಟ್ಗೆ 425 ರನ್ ಗಳಿಸಿತು.

ಆ್ಯಂಡರ್ಸನ್– ತೆಂಡೂಲ್ಕರ್ ಟ್ರೋಫಿ ಸರಣಿಯ ಎರಡನೇ ಟೆಸ್ಟ್ ತಂಡಕ್ಕೆ ಸುಂದರ್ ಅವರನ್ನು ಆಯ್ಕೆ ಮಾಡಿದ್ದು, ಆರಂಭದಿಂದಲೇ ಚರ್ಚೆಗೆ ಆಹಾರವಾಗಿತ್ತು. ಕೆಲವರು ಇದನ್ನು ಪ್ರಶ್ನಿಸಿದ್ದರು ಕೂಡ. ಬ್ಯಾಟಿಂಗಿಗೆ ನೆರವಾಗುವ ಪಿಚ್ಗಳಲ್ಲಿ ಕುಲದೀಪ್ ಅವರನ್ನು ತಂಡದ ಚಿಂತಕರ ಚಾವಡಿ ಆಯ್ಕೆ ಮಾಡಬೇಕೆಂಬುದು ಟೀಕಾಕಾರರ ಇಂಗಿತವಾಗಿತ್ತು. ಆದರೆ ಗಿಲ್ ಇದನ್ನು ನಿರ್ಲಕ್ಷಿಸಿ ಸುಂದರ್ ಬ್ಯಾಟಿಂಗ್ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟಿದ್ದರು.

ನಾಯಕ ತಮ್ಮ ಮೇಲಿಟ್ಟ ಭರವಸೆಯನ್ನು ಭರವಸೆಯನ್ನು ಅವರು ಹುಸಿಗೊಳಿಸಲಿಲ್ಲ. ನಿಷ್ಕಳಂಕ ಇನಿಂಗ್ಸ್ ಆಡಿದ ಅವರು ರಾಹುಲ್ ಅವರಷ್ಟೇ ಉತ್ತಮವಾಗಿ ಕಂಡರು. ಸಾಮಾನ್ಯವಾಗಿ ಎಂಟನೇ ಕ್ರಮಾಂಕದಲ್ಲಿ ಇಳಿಯುವ ಅವರನ್ನು ಅನುಭವಿ ಜಡೇಜ ಅವರಿಗಿಂತ ಮೊದಲೇ ಐದನೇ ಕ್ರಮಾಂಕಕ್ಕೆ ಬಡ್ತಿ ನೀಡಲಾಯಿತು.

ಆದರೆ ಒತ್ತಡ ಜೋರಾಗಿತ್ತು. ಸ್ಟೋಕ್ಸ್ ಬೆಂಕಿಯುಗುಳುತ್ತಿದ್ದರು. ಪ್ರತಿ ಎಸೆತವೂ ಕುತೂಹಲಕ್ಕೆ ಕಾರಣ ವಾಗುತಿತ್ತು. ಒಂದು ಎಸೆತ ಗಿಲ್ ಅವರ ಕೈಗೆ ತಾಗಿದ ಮೇಲೆ ಹೆಲ್ಮೆಟ್ಗೆ ಬಡಿದಿತ್ತು ಕೂಡ. ಎಡಗೈ ಆಟಗಾರರ ವಿರುದ್ಧ ಉತ್ತಮ ದಾಖಲೆ ಹೊಂದಿರುವ ಜೋಫ್ರಾ ಆರ್ಚರ್ ಅವರನ್ನೂ ಇನ್ನೊಂದು ಕಡೆಯಿಂದ ಅವರು ದಾಳಿಗಿಳಿಸಿದರು.

ಆದರೆ 25 ವರ್ಷ ವಯಸ್ಸಿನ ಸುಂದರ್ ವಿಚಲಿತರಾಗಲಿಲ್ಲ. ಟೆಸ್ಟ್ ಕ್ರಿಕೆಟ್ನಲ್ಲಿ ಚೊಚ್ಚಲ ಶತಕ ದಾಖಲಿಸಿದ ಅವರು ಉತ್ತಮ ರಕ್ಷಣೆಯ ಆಟ ಪ್ರದರ್ಶಿಸಿದರು. ಚೆಂಡಿನ ಚಲನೆಯನ್ನು ಚೆನ್ನಾಗಿ ಗ್ರಹಿಸಿದರು. ಆದರೆ ರನ್ ಗಳಿಸುವ ಅವಕಾಶ ತಪ್ಪಿಸಲಿಲ್ಲ. ಹೀಗಾಗಿ ಸ್ಕೋರ್ ವೇಗ ಆಮೆಗತಿಯಲ್ಲಿರಲಿಲ್ಲ. ಸುಂದರ್ ಅವರಿಗೆ ಇನ್ನೊಂದು ಕಡೆಯಿಂದ ಜಡೇಜ ನೆರವು ನೀಡಿದರು. ಸ್ಲಿಪ್ನಲ್ಲಿ ಜೋ ರೂಟ್ ಅವರಿಂದ ಜೀವದಾನ ಪಡೆದಿದ್ದ ಜಡೇಜ ಅದಕ್ಕೆ ಆತಿಥೇಯರು ತಕ್ಕ ಬೆಲೆ ತೆರುವಂತೆ ಆಡಿದರು. ರಕ್ಷಣೆಯ ಜೊತೆಗೆ ಆಕ್ರಮಣವನ್ನೂ ಬೆರೆಸಿ ಆಡಿ, ಟೆಸ್ಟ್ ಕ್ರಿಕೆಟ್ನಲ್ಲಿ ಐದನೇ ಶತಕ ದಾಖಲಿಸಿದರು.

ಸರಣಿಯಲ್ಲಿ ಇಂಗ್ಲೆಂಡ್ 2–1 ಮುನ್ನಡೆ ಉಳಿಸಿಕೊಂಡಿದ್ದು, ಅಂತಿಮ ಪಂದ್ಯ ಆಗಸ್ಟ್ 31ರಂದು ಲಂಡನ್ನ ಕೆನ್ಸಿಂಗ್ಟನ್ ಓವಲ್ನಲ್ಲಿ ನಡೆಯಲಿದೆ.

ಐದನೇ ಟೆಸ್ಟ್ಗೆ ಪಂತ್ ಅಲಭ್ಯ

ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ದಿನ ಕಾಲ್ಬೆರಳು ಮುರಿತಕ್ಕೊಳಗಾದ ಭಾರತದ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಅವರು ಇಂಗ್ಲೆಂಡ್ ವಿರುದ್ಧದ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.

ತಮಿಳುನಾಡಿನ ಬ್ಯಾಟರ್ ಎನ್. ಜಗದೀಶನ್ ಅವರು ಬದಲಿ ಆಟಗಾರನಾಗಿ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಇಂಗ್ಲೆಂಡ್ ವೇಗಿ ಕ್ರಿಸ್ ವೋಕ್ಸ್ ಎಸೆತವನ್ನು ರಿವರ್ಸ್ ಸ್ವೀಪ್ ಮಾಡಲು ಪ್ರಯತ್ನಿಸುವಾಗ ಪಂತ್ ಅವರ ಬಲಗಾಲಿಗೆ ಪೆಟ್ಟಾಗಿತ್ತು.

ಗಿಲ್ ದಾಖಲೆ

ಶುಭಮನ್ ಗಿಲ್ ಅವರು ಒಂದೇ ಸರಣಿಯಲ್ಲಿ ನಾಲ್ಕು ಶತಕ ದಾಖಲಿಸಿದ ಮೂರನೇ ನಾಯಕ ಎಂಬ ಹಿರಿಮೆಗೆ ಪಾತ್ರರಾದರು. ಕ್ರಿಕೆಟ್ ದಂತಕಥೆಗಳಾದ ಡಾನ್ ಬ್ರಾಡ್ಮನ್ ಮತ್ತು ಸುನಿಲ್ ಗಾವಸ್ಕರ್ ಈ ಸಾಧನೆ ಮಾಡಿದ್ದರು. ಗಿಲ್ ಟೆಸ್ಟ್ನಲ್ಲಿ ಒಂಬತ್ತನೇ ಶತಕ ಸಿಡಿಸಿದರು.

ಪೆಚ್ಚಾದ ಬೆನ್ ಸ್ಟೋಕ್ಸ್

ಸಾಕಷ್ಟು ನಾಟಕೀಯ ಘಟನೆಗಳನ್ನು ಕಂಡಿರುವ ಆ್ಯಂಡರ್ಸನ್ -ತೆಂಡೂಲ್ಕರ್ ಟ್ರೋಫಿ ಸರಣಿ ಭಾನುವಾರ ಅಂತಹದ್ದೇ ಇನ್ನೊಂದು ಪ್ರಸಂಗಕ್ಕೆ ಸಾಕ್ಷಿಯಾಯಿತು. ಈ ಪ್ರಕರಣದಲ್ಲಿ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಪೆಚ್ಚಾದರು.

ವಾಷಿಂಗ್ಟನ್ ಸುಂದರ್ - ರವೀಂದ್ರ ಜಡೇಜ ಜೊತೆಯಾಟ ಮುರಿಯಲು ಅವರು ನಡೆಸಿದ ಪ್ರಯತ್ನಗಳೆಲ್ಲವೂ ವಿಫಲವಾಗಿದ್ದವು. ಕೊನೆಯ ಅವಧಿಯ ಡ್ರಿಂಕ್ಸ್ ವೇಳೆಗೆ ಸ್ಟೋಕ್ಸ್ ಅವರು ಡ್ರಾ ಪ್ರಸ್ತಾವವನ್ನು ಭಾರತದ ಮುಂದಿಟ್ಟರು. ಆ ವೇಳೆಗೆ ದಿನದಾಟ ಮುಗಿಯಲು 15 ಓವರ್ಗಳು ಬಾಕಿ ಇದ್ದವು.

ಆದರೆ, ಆ ಪ್ರಸ್ತಾವವನ್ನು ನಾಯಕ ಶುಭಮನ್ ಗಿಲ್ ತಿರಸ್ಕರಿಸಿ, ಶತಕದ ಹೊಸ್ತಿಲಲ್ಲಿದ್ದ ವಾಷಿಂಗ್ಟನ್ (ಔಟಾಗದೇ 80) ಮತ್ತು ಜಡೇಜ (ಔಟಾಗದೇ 89) ಅವರಿಗೆ ಬ್ಯಾಟಿಂಗ್ ಮುಂದುವರಿಸಲು ಅವಕಾಶ ಮಾಡಿಕೊಟ್ಟರು. ಹೀಗಾಗಿ, ಇಂಗ್ಲೆಂಡ್ ಬೌಲರ್ಗಳು ಅನಿವಾರ್ಯವಾಗಿ ಬೌಲಿಂಗ್ ಮಾಡಬೇಕಾಯಿತು.

ಆಟ ಮುಂದುವರಿಸಿದ ಜಡೇಜ, ಟೆಸ್ಟ್ ಕ್ರಿಕೆಟ್ನಲ್ಲಿ ಐದನೇ ಶತಕ ದಾಖಲಿಸಿದರೆ, ವಾಷಿಂಗ್ಟನ್ ಚೊಚ್ಚಲ ಟೆಸ್ಟ್ ಶತಕ ಪೂರೈಸಿ ಸಂಭ್ರಮಿಸಿದರು. ನಂತರದಲ್ಲಿ ಡ್ರಾ ಮಾಡಲು ಉಭಯ ತಂಡಗಳು ಒಪ್ಪಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.