ವಾರ ಭವಿಷ್ಯ: ಈ ರಾಶಿಯ ರಾಜಕಾರಣಿಗಳಿಗೆ ನಿರೀಕ್ಷಿತ ಯಶಸ್ಸು ಇರುವುದಿಲ್ಲ
Published 26 ಜುಲೈ 2025, 23:30 IST
ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
ಜ್ಯೋತಿಷ್ಯ ವಿಶಾರದ, ಮಾದಾಪುರ
ಸಂಪರ್ಕ ಸಂಖ್ಯೆ: 8197304680
ಮೇಷ
(ಅಶ್ವಿನಿ ಭರಣಿ ಕೃತಿಕ 1)
ಮನಸ್ಸಿನಲ್ಲಿ ಹೊಸ ಹುರುಪಿರುತ್ತದೆ. ಆದಾಯವು ಮಧ್ಯಮಗತಿಯಲ್ಲಿರುತ್ತದೆ. ನಿಮ್ಮ ಹಿರಿಯರಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಸಹಕಾರ ಪಡೆಯುವಿರಿ. ಸರ್ಕಾರಿ ವ್ಯವಹಾರಗಳಲ್ಲಿ ನಿಮಗೆ ಲಾಭವಿರುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಲಭಿಸುವ ಸಾಧ್ಯತೆ ಇದೆ. ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣಬಹುದು. ಹಿರಿಯರೊಂದಿಗಿನ ವ್ಯವಹಾರ ನಷ್ಟಕ್ಕೆ ಕಾರಣವಾಗಬಹುದು. ಕೃಷಿಯಿಂದ ಸ್ವಲ್ಪ ಆದಾಯ ಬರುತ್ತದೆ. ರಾಜಕಾರಣಿಗಳಿಗೆ ನಿರೀಕ್ಷಿತ ಯಶಸ್ಸು ಇರುವುದಿಲ್ಲ.
ವೃಷಭ
(ಕೃತಿಕಾ2 3 4 ರೋಹಿಣಿ ಮೃಗಶಿರಾ1 2)
ಗೌರವಯುತ ನಡವಳಿಕೆಯನ್ನು ಮೈಗೂಡಿಸಿಕೊಳ್ಳುವಿರಿ. ಆದಾಯವು ನಿಮ್ಮ ನಿರೀಕ್ಷೆಯನ್ನು ತಲುಪುತ್ತದೆ. ಕೃಷಿಭೂಮಿಯಿಂದ ಲಾಭವಿರುತ್ತದೆ. ಸರ್ಕಾರಿ ಅಧಿಕಾರಿಗಳು ಪದೋನ್ನತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದು. ಹಲ್ಲುನೋವು ಕೆಲವರನ್ನು ಕಾಡುವ ಸಾಧ್ಯತೆಗಳಿವೆ. ಸಂಗಾತಿಯು ಬಹಳ ಸಂತೋಷದಿಂದ ಇದ್ದರೂ ಕೂಡ, ಒಮ್ಮೊಮ್ಮೆ ಕೆರಳುವರು. ಉದ್ಯೋಗದಲ್ಲಿ ವಿದೇಶಿಯಾನದ ಅವಕಾಶ ದೊರೆಯುವ ಸಾಧ್ಯತೆಯಿದೆ.
ಮಿಥುನ
(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ಆದಾಯವು ನಿರೀಕ್ಷೆಯ ಹತ್ತಿರ ಬರುತ್ತದೆ. ಸರ್ಕಾರಿ ಸಂಸ್ಥೆಗಳ ಜತೆಗಿನ ವ್ಯವಹಾರಗಳಿಂದ ಲಾಭವಿದೆ. ವಿದ್ಯಾರ್ಥಿಗಳು ಶ್ರಮಪಟ್ಟು ಓದಿದಲ್ಲಿ ಮಾತ್ರ ಉತ್ತಮ ಫಲಿತಾಂಶವನ್ನು ಪಡೆಯಬಹುದು. ನಿಮ್ಮ ಸಂಗಾತಿ ಆದಾಯದಲ್ಲಿ ಹೆಚ್ಚಳವನ್ನು ಕಾಣಬಹುದು. ಉದ್ಯೋಗದಲ್ಲಿದ್ದ ತೊಂದರೆಗಳು ದೂರವಾಗಿ ಕಷ್ಟಪಟ್ಟು ಕೆಲಸಮಾಡುವಿರಿ. ಕೆಲವು ಹಿರಿಯರಿಗೆ ವಿದೇಶಯಾನದ ಯೋಗವಿದೆ.
ಕರ್ಕಾಟಕ
(ಪುನರ್ವಸು 4 ಪುಷ್ಯ ಆಶ್ಲೇಷ)
ನಿಮ್ಮಲ್ಲಿ ಉತ್ತಮ ಗಾಂಭೀರ್ಯ ಮತ್ತು ಬುದ್ಧಿವಂತಿಕೆ ಎರಡು ಮೈಗೂಡಿರುತ್ತದೆ. ಆದಾಯವು ಈಗ ಮಧ್ಯಮಗತಿಯಲ್ಲಿರುತ್ತದೆ. ನಿಮ್ಮ ವ್ಯವಹಾರದಲ್ಲಿ ಹಿರಿಯರು ಸಹಾಯ ಮಾಡುತ್ತಾರೆ. ಆಸ್ತಿ ಸಂಬಂಧಿತ ವ್ಯವಹಾರಗಳಿಗೆ ಹೆಚ್ಚು ಹಣ ಖರ್ಚಾಗಬಹುದು. ಮಕ್ಕಳಿಂದ ನಿರೀಕ್ಷಿತ ಸಹಾಯ ಸಿಗುವುದಿಲ್ಲ. ಆರೋಗ್ಯಕ್ಕಾಗಿ ಹಣ ಖರ್ಚಾಗುವ ಸಾಧ್ಯತೆಗಳಿವೆ. ವಿದೇಶಿ ವ್ಯವಹಾರಗಳಲ್ಲಿ ಅನಿರೀಕ್ಷಿತ ಲಾಭವಿರುತ್ತದೆ. ರಾಜಕಾರಣಿಗಳಿಗೆ ಕೆಲಸಗಳಲ್ಲಿ ಅಭಿವೃದ್ಧಿ ಇರುತ್ತದೆ. ಉದ್ಯೋಗದಲ್ಲಿ ಶತ್ರುಗಳಿದ್ದರೂ ಕೆಲವರು ಸಹಾಯ ಮಾಡುವವರು.
ಸಿಂಹ
(ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
ನಿಮ್ಮ ಆಲೋಚನೆಗಳು ತದ್ವಿರುದ್ಧವಾಗಿರುತ್ತವೆ. ಆದಾಯವು ಬಹಳ ಕಡಿಮೆ ಇರುತ್ತದೆ. ಕೃಷಿಭೂಮಿಯಿಂದ ಆದಾಯ ಹೆಚ್ಚುತ್ತದೆ. ಮಕ್ಕಳಿಂದ ನಿರೀಕ್ಷಿತ ಸಹಾಯ ಸಿಗುವುದಿಲ್ಲ. ಕೆಲವೊಮ್ಮೆ ಸಂಗಾತಿಯು ನಿಮ್ಮನ್ನು ಧಿಕ್ಕರಿಸಬಹುದು. ರಾಜಕಾರಣಿಗಳಿಗೆ ಅನಿರೀಕ್ಷಿತ ಹಿನ್ನಡೆಯಾಗಬಹುದು. ಹಿರಿಯರ ಆಸ್ತಿಯನ್ನು ನೀವು ಕೊಳ್ಳುವ ಯೋಗವಿದೆ. ಉದ್ಯೋಗದಲ್ಲಿ ಸ್ವಲ್ಪ ಆದಾಯ ಜಾಸ್ತಿಯಾಗುವ ಸಂದರ್ಭವಿದೆ. ಸರ್ಕಾರಿ ಕೆಲಸಕಾರ್ಯಗಳಲ್ಲಿ ಸಾಕಷ್ಟು ಹಿನ್ನಡೆಯಾಗುತ್ತದೆ.
ಕನ್ಯಾ
(ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ಮಾತಿನಿಂದ ಕೆಲಸವನ್ನು ಸಾಧಿಸಿಕೊಳ್ಳುವಿರಿ. ಆದಾಯವು ಮಧ್ಯಮಗತಿಯಲ್ಲಿರುತ್ತದೆ. ಕೃಷಿಯಿಂದ ಈಗ ನಿರೀಕ್ಷಿತ ಆದಾಯವಿರುವುದಿಲ್ಲ. ಬಂಧುಗಳ ಸಹಕಾರ ಸಿಗುವುದಿಲ್ಲ. ಆಸ್ತಿ ಖರೀದಿಗೆ ಆತುರ ಬೇಡ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕಫಲ ಮಾತ್ರವಿರುತ್ತದೆ. ವಿದೇಶಿ ವ್ಯವಹಾರ ಮಾಡುವವರಿಗೆ ಹಿನ್ನಡೆಯಾಗಬಹುದು. ಮನೋ ವೈದ್ಯರಿಗೆ ಬೇಡಿಕೆ ಹೆಚ್ಚಬಹುದು. ವೃತ್ತಿಯಲ್ಲಿ ಸ್ವಲ್ಪ ಅನುಕೂಲಕರ ವಾತಾವರಣವಿರುತ್ತದೆ. ಸರ್ಕಾರಿ ವ್ಯವಹಾರಗಳಲ್ಲಿ ಹೆಚ್ಚು ಲಾಭವಿರುತ್ತದೆ.
ತುಲಾ
(ಚಿತ್ತಾ 3 4 ಸ್ವಾತಿ ವಿಶಾಖ 1 2 3)
ನಿಮ್ಮ ಕಾರ್ಯ ಸಾಧನೆಯನ್ನು ಮಾಡುವತ್ತ ಹೆಚ್ಚು ಗಮನ ಕೊಡುವಿರಿ. ಆದಾಯವು ಸಾಮಾನ್ಯಗತಿಯಲ್ಲಿರುತ್ತದೆ. ಬಂಧುಗಳಿಂದ ಸಾಕಷ್ಟು ವಿರೋಧವನ್ನು ಎದುರಿಸಬೇಕಾಗಬಹುದು. ಸಾಂಪ್ರದಾಯಿಕ ಕೃಷಿ ಮಾಡುವವರಿಗೆ ಹೆಚ್ಚಿನ ಅಭಿವೃದ್ಧಿ ಇರುತ್ತದೆ. ವಿದೇಶದಲ್ಲಿ ಓದುತ್ತಿರುವವರಿಗೆ ಹೆಚ್ಚಿನ ಅನುಕೂಲಗಳು ದೊರೆಯುತ್ತವೆ. ಕೆಲವು ರಾಜಕಾರಣಿಗಳಿಗೆ ಆರ್ಥಿಕ ಸಂಕಷ್ಟ ಎದುರಾಗುವ ಸಾಧ್ಯತೆಗಳಿವೆ. ಸರ್ಕಾರಿ ವೃತ್ತಿಯಲ್ಲಿರುವವರಿಗೆ ಅನುಕೂಲಗಳು ಹೆಚ್ಚುತ್ತವೆ. ಕೃಷಿಯಿಂದ ಆದಾಯವಿರುತ್ತದೆ.
ವೃಶ್ಚಿಕ
(ವಿಶಾಖಾ 4 ಅನುರಾಧ ಜೇಷ್ಠ)
ಗೊಂದಲಗಳ ಗೂಡಾಗಿದ್ದ ನಿಮ್ಮ ಮನಸ್ಸು ಈಗ ಸ್ವಲ್ಪ ತಿಳಿಯಾಗುತ್ತದೆ. ಆದಾಯ ಕಡಿಮೆ ಇರುತ್ತದೆ. ನಿಮ್ಮ ಕೆಲಸ ಕಾರ್ಯಗಳಿಗೆ ರಾಜಕೀಯ ಬೆಂಬಲ ದೊರೆಯುತ್ತದೆ. ವಿದೇಶದಲ್ಲಿ ಆಸ್ತಿ ಮಾರಾಟ ಮಾಡುವವರಿಗೆ ಹೆಚ್ಚಿನ ಲಾಭವಿರುತ್ತದೆ. ಹೊಸದಾಗಿ ರಾಜಕೀಯಕ್ಕೆ ಬರುತ್ತಿರುವವರಿಗೆ ಹೆಚ್ಚಿನ ಅವಕಾಶಗಳು ದೊರೆಯುತ್ತವೆ. ಬಂಧುಗಳೊಡನೆ ಹಣಕಾಸಿನ ವ್ಯವಹಾರ ಖಂಡಿತ ಬೇಡ. ಈಗ ಸಂಗಾತಿಯ ಆದಾಯ ಸ್ವಲ್ಪ ಕಡಿಮೆಯಾಗಬಹುದು. ವೃತ್ತಿಯಲ್ಲಿದ್ದ ತೊಂದರೆಗಳು ನಿವಾರಣೆಯಾಗಬಹುದು.
ಧನು
(ಮೂಲ ಪೂರ್ವಾಷಾಢ ಉತ್ತರಾಷಾಢ 1)
ವಾರದ ಆರಂಭದಲ್ಲಿ ಅತಿಯಾದ ಉದಾಸೀನತೆ ಇರುತ್ತದೆ. ಆದಾಯವು ಈಗ ಸಾಮಾನ್ಯಗತಿಯಲ್ಲಿರುತ್ತದೆ. ಕೃಷಿ ಸಂಬಂಧಿತ ಆಸ್ತಿ ಕೊಳ್ಳಬಹುದು. ಮಕ್ಕಳಿಂದ ಸಂತೋಷದ ಮಾತುಗಳು ಕೇಳಿ ಬರುತ್ತವೆ. ಸಂಗಾತಿಯೊಡನೆ ಕೂಡಿ ಮಾಡಿದ ವ್ಯವಹಾರಗಳಲ್ಲಿ ಲಾಭವಿರುತ್ತದೆ. ಆಭರಣ ಮಾರಾಟಗಾರರಿಗೆ ಹೆಚ್ಚಿನ ಆದಾಯವಿರುತ್ತದೆ. ಸರ್ಕಾರಿ ಕೆಲಸಗಳು ಸ್ವಲ್ಪ ನಿಧಾನ ಗತಿಯಲ್ಲಿ ಆಗುತ್ತವೆ. ಕೆಲವರಿಗೆ ತವರಿನಿಂದ ಜಮೀನು ದೊರಕಬಹುದು. ಸುಗಂಧ ದ್ರವ್ಯಗಳನ್ನು ಮಾರುವವರಿಗೆ ಹೆಚ್ಚು ಲಾಭವಿರುತ್ತದೆ.
ಮಕರ
(ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)
ಮನಸ್ಸನ್ನು ದೃಢ ಮಾಡಿಕೊಂಡು ಕೆಲಸ ಮಾಡುವಿರಿ. ಆದಾಯ ಕಡಿಮೆ ಇದ್ದರೂ ವಿದೇಶಿ ವ್ಯವಹಾರ ಮಾಡುವವರಿಗೆ ಆದಾಯ ಹೆಚ್ಚುತ್ತದೆ. ವಿದೇಶಿ ಭಾಷಾ ಬೋಧಕರಿಗೆ ಬೇಡಿಕೆ ಹೆಚ್ಚುತ್ತದೆ. ನಿಮ್ಮ ಶತ್ರುಗಳನ್ನು ಅತ್ಯಂತ ಪರಾಕ್ರಮದಿಂದ ಎದುರಿಸುವಿರಿ. ಕೃಷಿಯಲ್ಲಿ ನಿರೀಕ್ಷಿತ ಮಟ್ಟದ ಆದಾಯ ಇರುವುದಿಲ್ಲ. ವಿದ್ಯಾರ್ಥಿಗಳಿಗೆ ಅವರ ನಿರೀಕ್ಷೆಯ ಹತ್ತಿರದ ಫಲಿತಾಂಶ ಲಭಿಸುತ್ತದೆ. ಹೃದಯ ಸಂಬಂಧಿ ದೋಷಗಳಿರುವವರು ಎಚ್ಚರ ವಹಿಸಿ. ಹಿರಿಯರ ನೆರವಿನಿಂದ ಸರ್ಕಾರಿ ವ್ಯವಹಾರಗಳಲ್ಲಿ ಮುನ್ನಡೆ ಮತ್ತು ಆದಾಯವನ್ನು ಕಾಣಬಹುದು.
ಕುಂಭ
(ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ವಿದೇಶಿ ವಸ್ತುಗಳ ಮೇಲೆ ಮೋಹ ಹೆಚ್ಚುತ್ತದೆ. ಆದಾಯವು ಕಡಿಮೆ ಇರುತ್ತದೆ. ರಾಜಕಾರಣಿಗಳು ತಮ್ಮ ಮಾತಿನಿಂದ ಜನರನ್ನು ಸೆಳೆಯಬಹುದು. ನಿಮ್ಮ ಕೆಲಸ ಕಾರ್ಯಗಳಿಗೆ ಸಮಾಜದಿಂದ ಸಹಾಯ ದೊರೆಯುತ್ತದೆ. ಈಗ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಪಡೆಯುವ ಯೋಗವಿದೆ. ಶ್ವಾಸಕೋಶದ ತೊಂದರೆ ಇರುವವರು ಎಚ್ಚರವಹಿಸಿ. ವಿದೇಶಿ ವ್ಯವಹಾರಗಳಲ್ಲಿ ಅನಿರೀಕ್ಷಿತ ಲಾಭವನ್ನು ಕಾಣಬಹುದು. ತಂದೆ ಜತೆಗೂಡಿ ಮಾಡಿದ ವ್ಯವಹಾರಗಳಲ್ಲಿ ಹೆಚ್ಚು ಲಾಭವಿರುತ್ತದೆ. ವೃತ್ತಿಯಲ್ಲಿ ಸ್ವಲ್ಪ ಈಗ ಸಂತೋಷವನ್ನು ಮತ್ತು ಏಳಿಗೆಯನ್ನು ಕಾಣಬಹುದು.
ಮೀನ
(ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)
ಬಹಳ ಉದಾಸೀನ ಮನೋಭಾವ ನಿಮ್ಮಲ್ಲಿ ತುಂಬಿರುತ್ತದೆ. ಆದಾಯವು ಕಡಿಮೆ ಇದ್ದು ಖರ್ಚು ಹೆಚ್ಚಾಗುವ ಸಾಧ್ಯತೆಯಿದೆ. ಸ್ಥಿರಾಸ್ತಿಯನ್ನು ಕೊಳ್ಳಲು ಬೇಕಾದ ಹಣ ಹೊಂದಿಸಲು ಸೂಕ್ತ ಮಾರ್ಗ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಪಡೆಯುವ ಯೋಗವಿದೆ. ದೇಹದಲ್ಲಿ ಗೆಡ್ಡೆಗಳನ್ನು ಹೊಂದಿರುವವರು ಚಿಕಿತ್ಸೆಯನ್ನು ಪಡೆಯಿರಿ. ಸಂಗಾತಿಯ ಆದಾಯದಲ್ಲಿ ಹೆಚ್ಚಳವನ್ನು ಕಾಣಬಹುದು. ಮಹಿಳೆಯರ ಸಿದ್ಧ ಉಡುಪುಗಳನ್ನು ತಯಾರಿಸುವವರಿಗೆ ಬೇಡಿಕೆ ಹೆಚ್ಚುತ್ತದೆ. ಉದ್ಯೋಗದಲ್ಲಿ ಸ್ವಲ್ಪ ಹಿನ್ನಡೆ ಇರುತ್ತದೆ.