ಮ್ಯಾಂಚೆಸ್ಟರ್: ಆತಿಥೇಯ ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 311 ರನ್ಗಳ ಭಾರಿ ಹಿನ್ನಡೆ ಅನುಭವಿಸಿದ್ದ ಭಾರತ, ಎರಡನೇ ಇನಿಂಗ್ಸ್ನಲ್ಲಿ ಖಾತೆ ತೆರೆಯುವ ಮುನ್ನವೇ ಆರಂಭಿಕರಿಬ್ಬರನ್ನೂ ಕಳೆದುಕೊಂಡಿತ್ತು. ಆಂಗ್ಲರು ಈಗಾಗಲೇ 2–1 ಅಂತರದ ಮುನ್ನಡೆ ಸಾಧಿಸಿರುವುದರಿಂದ, ಮತ್ತೊಂದು ಸುಲಭ ಜಯ ಗಳಿಸುವುದು ಖಚಿತ ಎಂದು ಅಂದಾಜಿಸಲಾಗಿತ್ತು. ಆದರೆ, ಆಗಿದ್ದೇ ಬೇರೆ!

'ಬಜ್ಬಾಲ್' ಮಾದರಿ ಅನುಸರಿಸಿ ಬಿರುಸಿನ ಬ್ಯಾಟಿಂಗ್ ಮಾಡುತ್ತಿದ್ದ ಆಂಗ್ಲರಿಗೆ ನಿಜವಾದ ಟೆಸ್ಟ್ ಅನ್ನು ಭಾರತ ಪರಿಚಯಿಸಿತು. ಭಾರತದ ಬ್ಯಾಟರ್ಗಳು ಬೆನ್ ಸ್ಟೋಕ್ಸ್ ಬಳಗದ ತಾಳ್ಮೆ ಪರೀಕ್ಷೆ ಮಾಡಿದರು.

ಮೂರನೇ ವಿಕೆಟ್ಗೆ ಜೊತೆಯಾದ ಅನುಭವಿ ಕೆ.ಎಲ್.ರಾಹುಲ್ ಮತ್ತು ನಾಯಕ ಶುಭಮನ್ ಗಿಲ್ ಬಿಟ್ಟುಕೊಡದೆ ಹೋರಾಡಿದರು. ಅಕ್ಷರಶಃ ಗೋಡೆಯಂತೆ ನಿಂತ ಈ ಇಬ್ಬರೂ ಬರೋಬ್ಬರಿ 69.3 ಓವರ್ ವರೆಗೆ ಕ್ರೀಸ್ಗೆ ಅಂಟಿಕೊಂಡು ಆಡಿ 188 ರನ್ ಕೂಡಿಸಿದರು. ಆದರೆ, ರಾಹುಲ್ ಶತಕದ ಹೊಸ್ತಿಲಲ್ಲಿ ಎಡವಿದರು. 203 ಎಸೆತಗಳಲ್ಲಿ 90 ರನ್ ಗಳಿಸಿದ್ದಾಗ ವಿಕೆಟ್ ಒಪ್ಪಿಸಿದರು. 238 ಎಸೆತಗಳಲ್ಲಿ 103 ರನ್ ಗಳಿಸಿದ ಗಿಲ್ ಕೂಡ, ಶತಕ ಬಾರಿಸಿದ ಬೆನ್ನಲ್ಲೇ ಪೆವಿಲಿಯನ್ ಸೇರಿಕೊಂಡರು.

ಗಿಲ್ ಔಟಾದಾಗ ಇಂಗ್ಲೆಂಡ್ ಲೆಕ್ಕಾ ಚುಕ್ತಾ ಮಾಡಲು ಭಾರತಕ್ಕೆ ಇನ್ನೂ 89 ರನ್ ಬೇಕಿತ್ತು. ಹೀಗಾಗಿ, ಭಾರತವನ್ನು ಬೇಗನೆ ಆಲೌಟ್ ಮಾಡಿ ಜಯ ಸಾಧಿಸುವ ಲೆಕ್ಕಾಚಾರ ಹಾಕಿಕೊಂಡಿತ್ತು ಆತಿಥೇಯ ತಂಡ. ಇದಕ್ಕೆ ಅಡ್ಡಗಾಲಿಟ್ಟವರು ವಾಷಿಂಗ್ಟನ್ ಸುಂದರ್ ಮತ್ತು ರವೀಂದ್ರ ಜಡೇಜ.

ಎಡಗೈ ಆಲ್ರೌಂಡರ್ಗಳಾದ ಈ ಜೋಡಿ, ಮುರಿಯದ 5ನೇ ವಿಕೆಟ್ಗೆ 203 ರನ್ ಕೂಡಿಸುವ ಮೂಲಕ ಆಂಗ್ಲರ ಆಸೆಗೆ ತಣ್ಣೀರೆರಚಿತು. ತಲಾ ಶತಕಗಳನ್ನು ಪೂರೈಸಿಕೊಳ್ಳುವ ಮೂಲಕ ಪಂದ್ಯ ಡ್ರಾ ಆಗುವಂತೆ ಮಾಡಿತು. 185 ಎಸೆತಗಳಲ್ಲಿ 107 ರನ್ ಗಳಿಸಿದ ಜಡೇಜ, ಟೆಸ್ಟ್ ಮಾದರಿಯಲ್ಲಿ 5ನೇ ಶತಕ ಪೂರೈಸಿದರು. ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಚೊಚ್ಚಲ ಶತಕದ ಸಂಭ್ರಮ ಆಚರಿಸಿದ ಸುಂದರ್ 206 ಎಸೆತಗಳಲ್ಲಿ 101 ರನ್ ಬಾರಿಸಿದರು.

ಭಾರತದ ಮೊತ್ತ 143 ಓವರ್ಗಳಲ್ಲಿ 4 ವಿಕೆಟ್ಗೆ 425 ರನ್ ಆಗಿದ್ದಾಗ ಪಂದ್ಯವನ್ನು ಡ್ರಾ ಮಾಡಿಕೊಳ್ಳಲಾಯಿತು. ಅಷ್ಟರಲ್ಲಿ, ಮೊದಲ ಇನಿಂಗ್ಸ್ನ ಲೆಕ್ಕ ಚುಕ್ತಾ ಮಾಡಿದ್ದ ಟೀಂ ಇಂಡಿಯಾ, 114 ರನ್ಗಳ ಮುನ್ನಡೆ ಸಾಧಿಸಿತ್ತು.

ಸಂಕ್ಷಿಪ್ತ ಸ್ಕೋರ್
ಮೊದಲ ಇನಿಂಗ್ಸ್
ಭಾರತ: 358, ಇಂಗ್ಲೆಂಡ್: 669

ಎರಡನೇ ಇನಿಂಗ್ಸ್
ಭಾರತ: 425/4

ಪಂದ್ಯಶ್ರೇಷ್ಠ: ಬೆನ್ ಸ್ಟೋಕ್ಸ್ (141 ರನ್ ಹಾಗೂ 5 ವಿಕೆಟ್)

ಈ ಪಂದ್ಯದ ಅಂತಿಮ ದಿನ ಮೂಡಿಬಂದ ದಾಖಲೆಗಳಿವು..

ನಾಯಕನಾಗಿ ಗಿಲ್ ಸಾಧನೆ
ನಾಯಕನಾಗಿ ಆಡಿದ ಮೊದಲ ಟೆಸ್ಟ್ ಸರಣಿಯಲ್ಲೇ ಅತ್ಯಧಿಕ ರನ್ ಗಳಿಸಿದ ಕ್ರಿಕೆಟಿಗ ಎನಿಸಿಕೊಳ್ಳಲು ಶುಭಮನ್ ಗಿಲ್ಗೆ ಇನ್ನು 88 ರನ್ ಬೇಕಾಗಿದೆ. ಟೂರ್ನಿ ಇನ್ನೂ ಒಂದು ಪಂದ್ಯ ಬಾಕಿ ಇರುವುದರಿಂದ ಅಗ್ರಸ್ಥಾನಕ್ಕೇರುವ ಅವಕಾಶ ಇದೆ.

ಕೊಹ್ಲಿಯನ್ನು ಹಿಂದಿಕ್ಕಿದ ಗಿಲ್
ನಾಯಕತ್ವದ ವಹಿಸಿದ ಮೊದಲ ಸರಣಿಯಲ್ಲಿ 4 ಶತಕ ಗಳಿಸಿದ ಮೊದಲಿಗ ಎನಿಸಿಕೊಂಡಿದ್ದಾರೆ ಶುಭಮನ್ ಗಿಲ್.

ಆಸ್ಟ್ರೇಲಿಯಾದ ವಾರ್ವಿಕ್ ಆರ್ಮ್ಸ್ಟ್ರಾಂಗ್, ಡಾನ್ ಬ್ರಾಡ್ಮನ್, ಗ್ರೇಗ್ ಚಾಪೆಲ್, ಸ್ಟೀವ್ ಸ್ಮಿತ್ ಮತ್ತು ಭಾರತದ ವಿರಾಟ್ ಕೊಹ್ಲಿ 'ಹೊಣೆ' ವಹಿಸಿಕೊಂಡ ಮೊದಲ ಟೂರ್ನಿಯಲ್ಲಿ ತಲಾ ಮೂರು ಶತಕ ಬಾರಿಸಿದ್ದರು.

ಇದಷ್ಟೇ ಅಲ್ಲ. ನಾಯಕನಾಗಿ ಸರಣಿಯೊಂದರಲ್ಲಿ ಅತಿಹೆಚ್ಚು ಶತಕ ಗಳಿಸಿದವರ ಸಾಲಿನಲ್ಲಿ ದಿಗ್ಗಜರೊಂದಿಗೆ ಸ್ಥಾನ ಹಂಚಿಕೊಂಡರು. ಈ ಹಿಂದೆ ಡಾನ್ ಬ್ರಾಡ್ಮನ್ ಅವರು ಭಾರತದ ವಿರುದ್ಧ (1947–48) ಹಾಗೂ ಸುನಿಲ್ ಗವಾಸ್ಕರ್ ವೆಸ್ಟ್ ಇಂಡೀಸ್ ವಿರುದ್ಧದ (1978–79) ಸರಣಿಯಲ್ಲಿ ಗಿಲ್ ಅವರಷ್ಟೇ (4) ಶತಕ ಗಳಿಸಿದ್ದರು.

ಹಾಗೆಯೇ, ಟೀಂ ಇಂಡಿಯಾ ಪರ ಒಂದೇ ಸರಣಿಯಲ್ಲಿ ಹೆಚ್ಚು ಶತಕ ಗಳಿಸಿದ್ದ ಗವಾಸ್ಕರ್ ಮತ್ತು ಕೊಹ್ಲಿ ಅವರ ದಾಖಲೆಯನ್ನೂ ಗಿಲ್ ಸರಿಗಟ್ಟಿದರು.

ಕೆಳಮಧ್ಯಮ ಕ್ರಮಾಂಕದಲ್ಲಿ ಜಡೇಜ ಮಿಂಚು
ಟೆಸ್ಟ್ ಸರಣಿಯೊಂದರಲ್ಲಿ ಭಾರತದ ಪರ 6 ಅಥವಾ ಅದಕ್ಕಿಂತ ಕೆಳಗಿನ ಕ್ರಮಾಂಕದಲ್ಲಿ ಹೆಚ್ಚು ಬಾರಿ (5) ಅರ್ಧಶತಕ ಗಳಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಜಡೇಜ ಅವರು ಜಂಟಿ ಅಗ್ರಸ್ಥಾನಕ್ಕೇರಿದರು. 2002ರ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ವಿವಿಎಸ್ ಲಕ್ಷ್ಮಣ್ ಕೂಡ ಇಷ್ಟೇ ಸಲ 50ಕ್ಕಿಂತ ಹೆಚ್ಚು ರನ್ ಗಳಿಸಿದ್ದರು.
.ವಾಷಿಂಗ್ಟನ್, ಜಡೇಜ ವೀರೋಚಿತ ಆಟ: ಸೋಲಿನಿಂದ ಪಾರಾಗಿ ಡ್ರಾ ಸಾಧಿಸಿದ ಭಾರತ ತಂಡ.ಕೊಹ್ಲಿ, ರೋಹಿತ್ ನಿವೃತ್ತಿ ಆಯಿತು, ಮುಂದೆ ಇವರೇ.. ಅಚ್ಚರಿಯ ಹೇಳಿಕೆ ನೀಡಿದ ಕೈಫ್.
ವಿದೇಶದಲ್ಲಿ 1,000 ಹಾಗೂ 30 ವಿಕೆಟ್
ತವರಿನೇತರ ಯಾವುದೇ ದೇಶದಲ್ಲಿ ಆಡಿದ ಟೆಸ್ಟ್ ಪಂದ್ಯಗಳಲ್ಲಿ ಒಟ್ಟಾರೆ ಸಾವಿರಕ್ಕಿಂತ ಹೆಚ್ಚು ರನ್ ಹಾಗೂ 30ಕ್ಕಿಂತ ಅಧಿಕ ವಿಕೆಟ್ ಪಡೆದ ಮೂರನೇ ಆಟಗಾರ ಎನಿಸಿದರು ಜಡೇಜ.

ವೆಸ್ಟ್ ಇಂಡೀಸ್ನ ಗ್ಯಾರಿ ಸೋಬರ್ಸ್ ಇಂಗ್ಲೆಂಡ್ನಲ್ಲಿ 1,820 ರನ್ ಹಾಗೂ 62 ವಿಕೆಟ್ ಪಡೆದಿದ್ದಾರೆ. ಇಂಗ್ಲೆಂಡ್ನ ವಿಲ್ಫ್ರೆಡ್ ರೋಡ್ಸ್ ಆಸ್ಟ್ರೇಲಿಯಾದಲ್ಲಿ 1,032 ರನ್ ಮತ್ತು 42 ವಿಕೆಟ್ ಪಡೆದಿದ್ದಾರೆ. ಜಡೇಜ ಇಂಗ್ಲೆಂಡ್ನಲ್ಲಿ 1,082 ರನ್ ಹಾಗೂ 34 ವಿಕೆಟ್ ಪಡೆದಿದ್ದಾರೆ.

350+ ರನ್: ಆಸ್ಟ್ರೇಲಿಯಾ ಹಿಂದಿಕ್ಕಿದ ಭಾರತ
ಒಂದೇ ಟೆಸ್ಟ್ ಸರಣಿಯಲ್ಲಿ ಅತಿಹೆಚ್ಚು ಸಲ 350ಕ್ಕಿಂತ ಹೆಚ್ಚು ರನ್ ಗಳಿಸಿದ ತಂಡ ಎಂಬ ಖ್ಯಾತಿ ಭಾರತದ್ದಾಯಿತು. ಪ್ರಸ್ತುತ ಸರಣಿಯಲ್ಲಿ ಒಟ್ಟು ಏಳು ಬಾರಿ ಈ ಸಾಧನೆ ಮಾಡಿದೆ. ಇದಕ್ಕೂ ಮೊದಲು ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್ ವಿರುದ್ಧ 1920–21, 1948 ಹಾಗೂ 1989ರಲ್ಲಿ ತಲಾ ಆರು ಸಲ ಇಷ್ಟು ರನ್ ಗಳಿಸಿದ್ದೇ ಸಾಧನೆಯಾಗಿತ್ತು.

140+ ಓವರ್ಗಳ ಆಟ
ಮೊದಲ ಇನಿಂಗ್ಸ್ನಲ್ಲಿ 300ಕ್ಕಿಂತ ಹೆಚ್ಚು ರನ್ ಹಿನ್ನಡೆ ಅನುಭವಿಸಿದ ನಂತರ, 140ಕ್ಕಿಂತ ಹೆಚ್ಚು ಓವರ್ಗಳ ಆಟವಾಡಿ ಸೋಲು ತಪ್ಪಿಸಿಕೊಂಡದ್ದು ಇದು ಮೂರನೇ ಬಾರಿ.

ನ್ಯೂಜಿಲೆಂಡ್ ವಿರುದ್ಧ 2009ರಲ್ಲಿ ನಡೆದ ನೇಪಿಯರ್ ಟೆಸ್ಟ್ನಲ್ಲಿ 180 ಓವರ್ ಆಡಿ 4 ವಿಕೆಟ್ಗೆ 180 ರನ್ ಗಳಿಸಿತ್ತು. ಅದಕ್ಕೂ ಮೊದಲು, ಇಂಗ್ಲೆಂಡ್ ವಿರುದ್ಧ 1979ರಲ್ಲಿ ಲಾರ್ಡ್ಸ್ನಲ್ಲಿ ನಡೆದ ಪಂದ್ಯದಲ್ಲಿ 148 ಓವರ್ ಆಡಿ 4 ವಿಕೆಟ್ಗೆ 318 ರನ್ ಕಲೆಹಾಕಿತ್ತು.

ಭಾರತದ ಶತಕ ದಾಖಲೆ
ಮೂರನೇ ಇನಿಂಗ್ಸ್ನಲ್ಲಿ ಗಿಲ್, ಜಡೇಜ ಹಾಗೂ ಸುಂದರ್ ಶತಕ ಸಿಡಿಸಿದರು. ಟೆಸ್ಟ್ ಪಂದ್ಯವೊಂದರ ಮೂರು ಅಥವಾ ನಾಲ್ಕನೇ ಇನಿಂಗ್ಸ್ನಲ್ಲಿ ಭಾರತದ ನಾಲ್ಕು ಮಂದಿ ಶತಕ ಬಾರಿಸಿದ್ದು ಇದೇ ಮೊದಲು.

ಇಂಗ್ಲೆಂಡ್ ನಾಯಕನಾಗಿ ದಾಖಲೆ
ಇಂಗ್ಲೆಂಡ್ ಪರ ಟೆಸ್ಟ್ ಸರಣಿಯೊಂದರಲ್ಲಿ 300ಕ್ಕಿಂತ ಹೆಚ್ಚು ರನ್ ಹಾಗೂ 15ಕ್ಕಿಂತ ಹೆಚ್ಚು ವಿಕೆಟ್ ಪಡೆದ ಮೊದಲ ನಾಯಕ ಎಂಬ ಶ್ರೇಯಕ್ಕೆ ಬೆನ್ ಸ್ಟೋಕ್ಸ್ ಭಾಜನರಾದರು.

ಕಳೆದ 40 ವರ್ಷಗಳಲ್ಲಿ ಈ ಸಾಧನೆ ಮಾಡಿದ ಇಂಗ್ಲೆಂಡ್ನ ಏಕೈಕ ಆಟಗಾರ ಆ್ಯಂಡ್ರೋ ಫ್ಲಿಂಟಾಫ್. ಅವರು 2005ರ ಆ್ಯಷಸ್ ಸರಣಿಯಲ್ಲಿ 402 ರನ್ ಹಾಗೂ 24 ವಿಕೆಟ್ ಪಡೆದಿದ್ದರು.
.WCL 2025| ನನ್ನ ನಿಲುವು ಬದಲಾಗದು: ಪಾಕ್ ಪತ್ರಕರ್ತನಿಗೆ ಶಿಖರ್ ಧವನ್ ತಿರುಗೇಟು.ಘಟಾನುಘಟಿಗಳನ್ನು ಹೆಸರಿಸಿ ಇಂತಹ ಬೌಲರ್ಗಳು ಈಗ ಯಾರಿದ್ದಾರೆ ಎಂದ ಪೀಟರ್ಸನ್.
ಸ್ಟೋಕ್ಸ್ 'ಪಂದ್ಯಶ್ರೇಷ್ಠ'
ಮೊದಲ ಇನಿಂಗ್ಸ್ನಲ್ಲಿ 141 ಹಾಗೂ ಒಟ್ಟು 6 ವಿಕೆಟ್ ಉರುಳಿಸಿದ ಬೆನ್ ಸ್ಟೋಕ್ಸ್ 'ಪಂದ್ಯಶ್ರೇಷ್ಠ' ಎನಿಸಿದರು. ಇದು ಅವರಿಗೆ ದೊರೆತ 12ನೇ 'ಪಂದ್ಯಶ್ರೇಷ್ಠ' ಪ್ರಶಸ್ತಿಯಾಗಿದೆ.

ಇಂಗ್ಲೆಂಡ್ ಪರ ಅತಿಹೆಚ್ಚು ಬಾರಿ ಈ ಪ್ರಶಸ್ತಿಗೆ ಭಾಜನರಾದವರ ಲಿಸ್ಟ್ನಲ್ಲಿ ಜೋ ರೂಟ್ ಅಗ್ರಸ್ಥಾನದಲ್ಲಿದ್ದಾರೆ.

13 - ಜೋ ರೂಟ್
12 - ಇಯಾನ್ ಬಾಥಮ್
12 - ಬೆನ್ ಸ್ಟೋಕ್ಸ್
10 - ಕೆವಿನ್ ಪೀಟರ್ಸನ್
10 - ಸ್ಟುವರ್ಟ್ ಬ್ರಾಡ್

ಟೂರ್ನಿಯ ಅಂತಿಮ ಪಂದ್ಯವು ಲಂಡನ್ನ ಕೆನ್ನಿಂಗ್ಟನ್ ಓವಲ್ನಲ್ಲಿ ಜುಲೈ 31ರಂದು ಆರಂಭವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.