ರೂಟ್ 38ನೇ ಶತಕ
180 ಎಸೆತಗಳನ್ನು ಎದುರಿಸಿರುವ ರೂಟ್, 12 ಬೌಂಡರಿ ಸಹಿತ 105 ರನ್ ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅವರು ಗಳಿಸಿದ 38ನೇ ಶತಕ ಇದಾಗಿದೆ. ಇದರೊಂದಿಗೆ ಅವರು ಶ್ರೀಲಂಕಾದ ಕುಮಾರ ಸಂಗಕ್ಕಾರ ದಾಖಲೆಯನ್ನು ಸರಿಗಟ್ಟಿದ್ದಾರೆ. ಶತಕ ಗಳಿಕೆ ಪಟ್ಟಿಯಲ್ಲಿ ಮಾಜಿ ಕ್ರಿಕೆಟಿಗರಾದ ಭಾರತದ ಸಚಿನ್ ತೆಂಡೂಲ್ಕರ್ (51), ದಕ್ಷಿಣ ಆಫ್ರಿಕಾದ ಜಾಕ್ ಕಾಲಿಸ್ (45) ಮತ್ತು ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ (41) ರೂಟ್‌ಗಿಂತ ಮುಂದಿದ್ದಾರೆ.