ಯಳಂದೂರು ತಾಲ್ಲೂಕಿನ ವೈ.ಕೆ.ಮೋಳೆ ಗ್ರಾಮದ ಪರಿಶಿಷ್ಟ ಜನಾಂಗದ ಸ್ಮಶಾನದ ಗಡಿ ಗುರುತು ಕಾರ್ಯದಲ್ಲಿ ಅಧಿಕಾರಿಗಳು ಹಾಗೂ ಗ್ರಾಮಸ್ಥರ ಶನಿವಾರ ಭಾಗಿಯಾದರು.
ಸೌಕರ್ಯ ಕಲ್ಪಿಸಲು ಯೋಜನೆ
ತಹಶೀಲ್ದಾರ್ ಎಸ್,ಎನ್.ನಯನಾ ಮಾತನಾಡಿ, ‘ಸರ್ವೇ ನಂಬರ್ 306ರಲ್ಲಿ ಪರಿಶಿಷ್ಟರ ಸ್ಮಶಾನದ ಸ್ಥಳ 1 ಎಕರೆ 4ಗುಂಟೆ ಹಾಗೂ ಸರ್ಕಾರಿ ಬೀಳು ಮತ್ತು ಕಟ್ಟೆ 20 ಗುಂಟೆ ಪ್ರದೇಶದಲ್ಲಿ ಇದೆ. ಸ್ಮಶಾನದ ಜಾಗವನ್ನು 2.20 ಎಕರೆ ಪ್ರದೇಶಕ್ಕೆ ವಿಸ್ತರಿಸಲಾಗಿದೆ. ಸ್ಮಶಾನದ ಅಭಿವೃದ್ಧಿಗೆ ಸಮಾಜ ಕಲ್ಯಾಣ ಇಲಾಖೆ ಹಣ ಬಿಡುಗಡೆ ಮಾಡಿದ್ದು, ಇಲ್ಲಿ ಮೂಲ ಸೌಕರ್ಯ ಕಲ್ಪಿಸಲು ಯೋಜನೆ ಜಾರಿಗೆ ಬರಲಿದೆ’ ಎಂದರು.