ಚಾಮರಾಜನಗರ: ಜಿಲ್ಲೆಯಲ್ಲಿರುವ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶಿಥಿಲಾವಸ್ಥೆಯಲ್ಲಿರುವ ಕೊಠಡಿಗಳ ದುರಸ್ತಿ ಹಾಗೂ ಹೆಚ್ಚುವರಿ ಕೊಠಡಿಗಳನ್ನು ರಿಪೇರಿಗೊಳಿಸಲು ಸಾಧ್ಯವಿಲ್ಲದ ಕಟ್ಟಡಗಳನ್ನು ನೆಲಸಮ ಮಾಡಿ ಹೊಸದಾಗಿ ನಿರ್ಮಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ.ಪ್ರೌಢ ಹಾಗೂ ಪ್ರಾಥಮಿಕ ಶಾಲೆಗಳಲ್ಲಿ ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸಲೂ ಅದು ಮುಂದಾಗಿದೆ. ಇದಕ್ಕಾಗಿ 2018–19ನೇ ಸಾಲಿನಲ್ಲಿ ₹10.58 ಕೋಟಿ ಬಿಡುಗಡೆಯಾಗಿದೆ.

ಈ ಅನುದಾನದಲ್ಲಿ294 ಕೊಠಡಿಗಳನ್ನು ದುರಸ್ತಿ ಮಾಡಲು ಹಾಗೂ 143 ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸಲು ಇಲಾಖೆ ನಿರ್ಧರಿಸಿದೆ.

ದುರಸ್ತಿ ಕಾಮಗಾರಿಗಳನ್ನು ನಿರ್ವಹಿಸುವ ಹೊಣೆಯನ್ನು ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗ ಹಾಗೂ ಕಟ್ಟಡ ನಿರ್ಮಾಣದ ಜವಾಬ್ದಾರಿಯನ್ನುಲೋಕೋಪಯೋಗಿ ಇಲಾಖೆಗೆ ವಹಿಸಲಾಗಿದೆ.

ಪ್ರಾಥಮಿಕ ಮತ್ತು ಪ್ರೌಢಶಾಲೆ ಸೇರಿದಂತೆ ಜಿಲ್ಲೆಯ 183 ಶಾಲೆಗಳ 794 ಕೊಠಡಿಗಳು ಶಿಥಿಲಗೊಂಡಿರುವುದನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಗುರುತಿಸಿದೆ. ಈ ಪೈಕಿ ಕೆಲವು ಕೊಠಡಿಗಳು ದುರಸ್ತಿ ಮಾಡಲು ಸಾಧ್ಯವಿಲ್ಲದಷ್ಟು ಶಿಥಿಲವಾಗಿದ್ದು, ಅಂತಹವುಗಳನ್ನು ನೆಲಸಮ ಮಾಡುವ ಸಂಬಂಧ, ತಾಂತ್ರಿಕ ಪರಿಶೀಲನೆ ನಡೆಸಿ ಅಂದಾಜು ಪಟ್ಟಿಗಳೊಂದಿಗೆ ವರದಿ ನೀಡಲು ಲೋಕೋಪಯೋಗಿ ಇಲಾಖೆಗೆ ಶಿಕ್ಷಣ ಇಲಾಖೆ ಮನವಿ ಮಾಡಿದೆ.

ಯಾವ ತಾಲ್ಲೂಕಿನಲ್ಲಿ (ವಿಧಾನಸಭಾ ಕ್ಷೇತ್ರ) ಎಷ್ಟು?: ಕೊಳ್ಳೇಗಾಲದ (ಯಳಂದೂರು ಸೇರಿ) 130, ಚಾಮರಾಜನಗರದ 9, ಗುಂಡ್ಲುಪೇಟೆಯ 34 ಮತ್ತು ಹನೂರಿನ 10 ಶಾಲೆಗಳಲ್ಲಿರುವ ಶಿಥಿಲ ಕೊಠಡಿಗಳು ದುರಸ್ತಿಯಾಗಲಿವೆ. ಅದೇ ರೀತಿ ಚಾಮರಾಜನಗರದ 23, ಗುಂಡ್ಲುಪೇಟೆಯ 10, ಕೊಳ್ಳೇಗಾಲದ 44 ಮತ್ತು ಹನೂರಿನ 7 ಶಾಲೆಗಳಲ್ಲಿ ಹೊಸ ಕೊಠಡಿಗಳು ನಿರ್ಮಾಣವಾಗಲಿವೆ.

‘ಸರ್ಕಾರದಿಂದ ಬಿಡುಗಡೆಯಾಗಿರುವ ₹ 10.58 ಕೋಟಿ ಅನುದಾನದಲ್ಲಿ ₹10.41 ಕೋಟಿಯನ್ನು ಸಂಬಂಧಿಸಿದ ಏಜೆನ್ಸಿಗಳಿಗೆ (ಲೋಕೋಪಯೋಗಿ ಇಲಾಖೆ ಮತ್ತು ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗ) ಪಾವತಿಸಲಾಗಿದೆ. ಈ ಏಜೆನ್ಸಿಗಳು ಇನ್ನು ಕಾಮಗಾರಿ ಆರಂಭಿಸಬೇಕು. ಶೀಘ್ರದಲ್ಲಿ ಕೆಲಸ ಆರಂಭವಾಗಲಿದೆ’ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದರು.

ದೀರ್ಘ ಸಮಯದ ಬೇಡಿಕೆ: ಜಿಲ್ಲೆಯಾದ್ಯಂತ ಶಿಥಿಲಗೊಂಡಿರುವ ಶಾಲಾ ಕೊಠಡಿಗಳನ್ನು ದುರಸ್ತಿಗೊಳಿಸಬೇಕು ಇಲ್ಲವೇ ನೆಲಸಮಗೊಳಿಸಿ ಹೊಸ ಕಟ್ಟಡ ಕಟ್ಟಬೇಕು ಎಂಬ ಬೇಡಿಕೆ ಹಲವು ಸಮಯದಿಂದ ಕೇಳಿಬರುತ್ತಿತ್ತು. ಕೇಂದ್ರ ಸರ್ಕಾರ ಪುರಸ್ಕೃತ ಯೋಜನೆಗಳ ಸಭೆಯಲ್ಲಿ, ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆಗಳಲ್ಲಿ, ತಾಲ್ಲೂಕು ಪಂಚಾಯಿತಿಗಳ ಸಾಮಾನ್ಯಸಭೆ ಹಾಗೂ ಕೆಡಿಪಿ ಸಭೆಗಳಲ್ಲಿ ಈ ವಿಚಾರ ಪ್ರಸ್ತಾಪ ಆಗುತ್ತಲೇ ಇತ್ತು.ಜಿಲ್ಲೆಯವರೇ ಆದ ಎನ್.ಮಹೇಶ್ ಅವರು ಪ್ರಾಥಮಿಕ ಮತ್ತು ಶಿಕ್ಷಣ ಇಲಾಖೆ ಸಚಿವರಾಗಿದ್ದ ಸಂದರ್ಭದಲ್ಲೂ ಅವರ ಮುಂದೆ ಸಂಸದರು ಸೇರಿದಂತೆ ಜನಪ್ರತಿನಿಧಿಗಳು ಕಟ್ಟಡಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಬೇಡಿಕೆ ಇಟ್ಟಿದ್ದರು.

ರಾಜ್ಯದಾದ್ಯಂತ ಸರ್ಕಾರಿ ಶಾಲಾ ಕಟ್ಟಡಗಳ ದುರಸ್ತಿಗಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ₹ 150 ಕೋಟಿ ಮೀಸಲಿಟ್ಟಿದ್ದರು.

ಕಟ್ಟಡಗಳು ಶಿಥಿಲಾವಸ್ಥೆಗೆ ತಲುಪಿದ್ದರಿಂದ ಕೆಲವು ಶಾಲೆಗಳಲ್ಲಿ ಕೊಠಡಿಗಳ ಸಮಸ್ಯೆ ಎದುರಾಗಿತ್ತು. ಅಲ್ಲದೇ, ಶಿಥಿಲ ಕೊಠಡಿಗಳು ಯಾವ ಸಮಯದಲ್ಲಾದರೂ ಕುಸಿದು ಬೀಳುವ ಆತಂಕವೂ ಎದುರಾಗಿತ್ತು. ಇಂತಹ ಕಟ್ಟಡಗಳ ಆಸುಪಾಸಿನಲ್ಲಿ ಮಕ್ಕಳು ಓಡಾಡುವುದಕ್ಕೂ ಭಯಪಡುವ ಸ್ಥಿತಿ ನಿರ್ಮಾಣವಾಗಿತ್ತು.

ಕುಡಿಯುವ ನೀರು, ಶೌಚಾಲಯ ನಿರ್ವಹಣೆಗೆ ಹಣ

‘ಶಾಲಾ ಮಕ್ಕಳಿಗೆ ಕುಡಿಯುವ ನೀರು ಪೂರೈಸಲು ಹಾಗೂ ಶೌಚಾಲಯಗಳ ನಿರ್ವಹಣೆಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಪ್ರತಿ ಪ್ರಾಥಮಿಕ ಶಾಲೆಗೆ ತಲಾ ₹ 3,000 ಮತ್ತು ಪ್ರೌಢಶಾಲೆಗೆ ₹ 4,000 ನೀಡಲೂ ಅನುದಾನ ಬಂದಿದೆ’ ಎಂದು ಡಿಡಿಪಿಐ (ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ) ಮಂಜುಳಾ ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಕೊಳ್ಳೇಗಾಲಕ್ಕೆ ವಿಶೇಷ ಪ್ಯಾಕೇಜ್

ಕೊಠಡಿಗಳ ದುರಸ್ತಿ ಹಾಗೂ ನಿರ್ಮಾಣಕ್ಕೆ ಬಿಡುಗಡೆಯಾಗಿರುವ ಅನುದಾನದಲ್ಲಿ, ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ವಿಶೇಷ ಪ್ಯಾಕೇಜ್ ಅಡಿಯಲ್ಲಿ ₹ 7.92 ಕೋಟಿ ಮೊತ್ತ ಮೀಸಲಾಗಿದೆ.ಈ ಮೊತ್ತದಲ್ಲಿ ಕ್ಷೇತ್ರದ 92 ಪ್ರಾಥಮಿಕ ಮತ್ತು ಪ್ರೌಢಶಾಲೆಗಳ 198 ಕೊಠಡಿಗಳು ದುರಸ್ತಿಗೊಳ್ಳಲಿವೆ. 36 ಶಾಲೆಗಳಲ್ಲಿ 57 ಹೊಸ ಕೊಠಡಿಗಳು ನಿರ್ಮಾಣವಾಗಲಿವೆ.

ಕೊಳ್ಳೇಗಾಲ ಶಾಸಕ ಎನ್. ಮಹೇಶ್ ಅವರು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾಗಿದ್ದಾಗ ಕ್ಷೇತ್ರದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.