ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ| ಶಿವರಾತ್ರಿ: ಜಿಲ್ಲೆಯಾದ್ಯಂತ ಶಿವಧ್ಯಾನ

ಈಶ್ವರನ ದೇವಾಲಯ ಹಾಗೂ ಮಠಗಳಲ್ಲಿ ವಿಶೇಷ ಪೂಜೆ, ಜಾಗರಣೆ
Last Updated 19 ಫೆಬ್ರುವರಿ 2023, 4:43 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಾದ್ಯಂತ ಶನಿವಾರ ಮಹಾಶಿವರಾತ್ರಿಯನ್ನು ಜನರು ಅ‌ತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಈಶ್ವರನ ಭಕ್ತರು ಶಿವಧ್ಯಾನದಲ್ಲಿ ಮುಳುಗಿದರು. ರಾತ್ರಿ ದೇವಾಲಯ, ಮಠಗಳಲ್ಲಿ ಜಾಗರಣೆ ಮಾಡಿದರು.

ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರ ಸ್ವಾಮಿ ದೇವಾಲಯ ಮಾತ್ರವಲ್ಲದೆ, ನಗರದ ಚಾಮರಾಜೇಶ್ವರ ದೇವಸ್ಥಾನ, ಹಳೆ ಬಸ್‌ ನಿಲ್ದಾಣದಲ್ಲಿರುವ ಶ್ರೀಕಂಠೇಶ್ವರ ದೇವಸ್ಥಾನ, ವೀರಭದ್ರೇಶ್ವರ ದೇವಸ್ಥಾನ, ಯಡಬೆಟ್ಟದ ಮಹದೇಶ್ವರ, ಹರದನಹಳ್ಳಿಯ ದಿವ್ಯಲಿಂಗೇಶ್ವರ ದೇವಸ್ಥಾನ, ಯಳಂದೂರಿನ ಗೌರೀಶ್ವರ ಸೇರಿದಂತೆ ಜಿಲ್ಲೆಯ ವಿವಿಧ ಶಿವ ದೇವಾಲಯಗಳಲ್ಲಿ ದೇವರಿಗೆ ಅಭಿಷೇಕ, ವಿಶೇಷ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆದವು.

ವಿಶೇಷ ಪೂಜೆ: ಹಬ್ಬದ ಅಂಗವಾಗಿ ಜನರು ಸುಡು ಬಿಸಿಲನ್ನೂ ಲೆಕ್ಕಿಸದೆ, ಕುಟುಂಬ ಸಮೇತರಾಗಿ ದೇವಾಲಯಗಳಿಗೆ ಭೇಟಿ ವಿಶೇಷ ಪೂಜೆ ಸಲ್ಲಿಸಿದರು. ಶಿವನಿಗೆ ಬಿಲ್ವಪತ್ರೆಗಳನ್ನು ಅರ್ಪಿಸಿದರು. ಮೂಲಮಂತ್ರ ಜಪಿಸಿದರು.

ವಿಶೇಷ ಅಲಂಕಾರ: ಶಿವರಾತ್ರಿ ಅಂಗವಾಗಿ ದೇವಸ್ಥಾನಗಳನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಬಿಲ್ವಪ್ರಿಯ ಶಿವನಿಗೆ ಮುಂಜಾನೆಯಿಂದಲೇ ಅಭಿಷೇಕಗಳನ್ನು ಅರ್ಚಕರು ನೆರವೇರಿಸಿದರು. ರುದ್ರಾಭಿಷೇಕ, ಹೋಮ ಹವನ, ರುದ್ರ ಪಠಣ ನಡೆದವು. ಶಿವಲಿಂಗಗಳಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಚಾಮರಾಜೇಶ್ವರಸ್ವಾಮಿ ದೇವಾಲಯದಲ್ಲಿರುವ ಸಹಸ್ರಲಿಂಗೇಶ್ವರಿಗೆ ಬೆಣ್ಣೆಯ ಅಲಂಕಾರ ಮಾಡಿದ್ದು, ಗಮನಸೆಳೆಯಿತು.

ಸಂಜೆಯ ಹೊತ್ತು ದೇವಾಲಯಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಿತ್ತು. ದೇವಸ್ಥಾನ, ಮಠಗಳಲ್ಲಿ ಶನಿವಾರ ರಾತ್ರಿ ಜಾಗರಣೆ ಆಯೋಜಿಸಲಾಗಿತ್ತು. ಭಕ್ತರು ಜಾಗರಣೆಯಲ್ಲಿ ಭಾಗವಹಿಸಿದರು. ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT