ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಪತಿ ಭೇಟಿ: ಐಜಿಪಿ ಪರಿಶೀಲನೆ

Last Updated 26 ಸೆಪ್ಟೆಂಬರ್ 2021, 3:21 IST
ಅಕ್ಷರ ಗಾತ್ರ

ಯಳಂದೂರು/ಚಾಮರಾಜನಗರ: ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಬಿಳಿಗಿರಿರಂಗನಬೆಟ್ಟ ಹಾಗೂ ಚಾಮರಾಜನಗರಕ್ಕೆ ಅ.7ರಂದು ಭೇಟಿ ನೀಡುತ್ತಿರುವುದರಿಂದ ದಕ್ಷಿಣ ವಲಯ ಐಜಿಪಿ ಪ್ರವೀಣ್‌ ಮಧುಕರ್‌ ಪವಾರ್ ಅವರು ಶನಿವಾರ ಅಧಿಕಾರಿಗಳೊಂದಿಗೆ ಎರಡೂ ಕಡೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅಕ್ಟೋಬರ್‌ 7ರಂದು ಬೆಳಿಗ್ಗೆ ಬಿಳಿಗಿರಿ ರಂಗನಬೆಟ್ಟಕ್ಕೆ ಭೇಟಿ ನೀಡಲಿರುವ ರಾಷ್ಟ್ರಪತಿ ಅವರು, ರಂಗನಾಥಸ್ವಾಮಿಯ ದರ್ಶನ ಮಾಡಲಿದ್ದಾರೆ. ಮಧ್ಯಾಹ್ನದ ಮೇಲೆ ಚಾಮರಾಜನಗರದ ಯಡಬೆಟ್ಟದಲ್ಲಿ ನಿರ್ಮಿಸಲಾಗಿರುವ 450 ಹಾಸಿಗೆಗಳ ಸೂಪರ್‌ ಸ್ಪೆಷಾಲಿಟಿ ಬೋಧನಾ ಆಸ್ಪತ್ರೆಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಲಿದ್ದಾರೆ.

ರಾಷ್ಟ್ರಪತಿ ಅವರು ಪ್ರಯಾಣಿಸುವ ಹೆಲಿಕಾಪ್ಟರ್‌ ಇಳಿಯುವುದಕ್ಕಾಗಿ ಹೆಲಿಪ್ಯಾಡ್‌ ನಿರ್ಮಿಸಲು ಸೂಕ್ತ ಸ್ಥಳವನ್ನು ಐಜಿಪಿ ಅವರು ಪರಿಶೀಲನೆ ನಡೆಸಿದರು. ಯಡಬೆಟ್ಟದ ಬಳಿ ಹಾಗೂ ಬಿಳಿಗಿರಿರಂಗನಬೆಟ್ಟದ ಹೊರವಲಯದಲ್ಲಿ ಹೆಲಿಪ್ಯಾಡ್‌ ನಿರ್ಮಿಸಬಹುದಾದ ಸ್ಥಳವನ್ನು ಪರಿಶೀಲಿಸಿದರು.

ಬಿಳಿಗಿರಿರಂಗನಬೆಟ್ಟಕ್ಕೆ ಬಂದಾಗ ವಿಶ್ರಾಂತಿ ಪಡೆಯಲು ಯರಕನಗದ್ದೆಯಲ್ಲಿರುವ ಗಣ್ಯ ವ್ಯಕ್ತಿಗಳ ಅತಿಥಿಗೃಹ ಮತ್ತು ಬಿಳಿಗಿರಿರಂಗನಬೆಟ್ಟ ದೇವಾಲಯಕ್ಕೂ ಭೇಟಿ ನೀಡಿ ಪರಿಶೀಲಿಸಿದರು.

‘ಯರಕನಗದ್ದೆಯ ಅತಿಥಿ ಗೃಹ ಜಾಗ ಸೂಕ್ತವಾಗಿದೆ. ಉತ್ತಮ ವ್ಯವಸ್ಥೆಗೆ ಸಿದ್ಧತೆ ಆರಂಭಿಸಬೇಕು. ಭದ್ರತೆ ದೃಷ್ಠಿಯಿಂದ ರಂಗನಾಥನ ಸನ್ನಿಧಿಯಲ್ಲಿ ಕೆಲವೊಂದು
ವಸ್ತುಗಳನ್ನು ತೆಗೆಯಬೇಕಿದೆ. ದರ್ಶನಕ್ಕೆ ರಾಷ್ಟ್ರಪತಿ ಆಗಮಿಸುವ ಮಾರ್ಗ ಯಾವುದುಇರಬೇಕು ಎಂಬುದರ ಬಗ್ಗೆ ಅಧಿಕಾರಿಗಳು ಚರ್ಚೆ ನಡೆಸಿದರು. ರಸ್ತೆ ಇಲ್ಲವೇ ಮೆಟ್ಟಿಲಿನ ಸ್ಥಳ ಪರಿಶೀಲನೆ, ಅರ್ಚಕರ ಮಾಹಿತಿ ಮತ್ತು ಸುತ್ತಮುತ್ತಲಪ್ರದೇಶವನ್ನು ಸ್ವಚ್ಛತೆ, ದೇವಳದ ಒಳಾಂಗಣದಲ್ಲಿ ಸ್ಯಾನಿಟೈಸರ್ ಮಾಡಿಸುವಂತೆಸೂಚಿಸಲಾಗಿದೆ’ ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ವೈ.ಎನ್.ಮೋಹನ್‌ಕುಮಾರ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಎಸ್‌ಪಿ ದಿವ್ಯಾ ಸಾರಾ ಥಾಮಸ್,ತಹಶೀಲ್ದಾರ್‌ ಆರ್.ಜಯಪ್ರಕಾಶ್, ಸರ್ಕಲ್ ಇನ್‌ಸ್ಪೆಕ್ಟರ್‌ ಎಂ.ಶಿವಮಾದಯ್ಯ, ಲೋಕೋಪಯೋಗಿ ಇಲಾಖೆಯಎಇಇ ರಾಮಸ್ವಾಮಿ ಹಾಗೂ ಇತರ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT