ಹನೂರು: ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿ ಹೊತ್ತಿದ್ದರೂ ಶೈಕ್ಷಣಿಕವಾಗಿ ಗಣನೀಯ ಪ್ರಗತಿ ಸಾಧಿಸುತ್ತಿರುವ ಹನೂರು ಶೈಕ್ಷಣಿಕ ವಲಯ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಈ ಬಾರಿಯೂ ಜಿಲ್ಲೆಗೆ ಮೊದಲ ಸ್ಥಾನ ಗಳಿಸಿದೆ. ತಾಲ್ಲೂಕು ಈ ಸಾಧನೆ ಮಾಡುತ್ತಿರುವುದು ಇದು ಸತತ ಐದನೇ ಬಾರಿ.

ಸರ್ಕಾರಿ, ಅನುದಾನಿತ, ಖಾಸಗಿ ಹಾಗೂ ವಸತಿ ಶಾಲೆಗಗಳು ಸೇರಿದಂತೆ 41 ಶಾಲೆಗಳ 997 ಬಾಲಕರು ಹಾಗೂ 1,003 ಬಾಲಕಿಯರು ಸೇರಿದಂತೆ 2,000 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇದರಲ್ಲಿ 1,943 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ಕೌದಳ್ಳಿ, ಗೋಪಿನಾಥಂ, ಮಾರ್ಟಳ್ಳಿ, ರಾಮಾಪುರ, ಎಲ್ಲೇಮಾಳದ ಸರ್ಕಾರಿ ಶಾಲೆಗಳು, ಹೂಗ್ಯಂನ ಮೊರಾರ್ಜಿ ದೇಸಾಯಿ ಆಂಗ್ಲ ವಸತಿ ಶಾಲೆ, ಅನುದಾನಿತ ಶಾಲೆಗಳಾದ ರಾಮಾಪುರ, ಜೆಎಸ್ಎಸ್ ಪ್ರೌಢಶಾಲೆ, ಕ್ರಿಸ್ತರಾಜ ಪ್ರೌಢಶಾಲೆ (ಕನ್ನಡ) ಹನೂರು, ಅಜ್ಜೀಪುರ ಜೆಎಸ್ಎಸ್ ಪ್ರೌಢಶಾಲೆ, ಅನುದಾನರಹಿತ ಶಾಲೆಗಳಾದ ಮಾರ್ಟಳ್ಳಿಯ ಸೇಂಟ್ ಮೇರಿಸ್, ರಾಮಾಪುರ ಜೆಎಸ್ಎಸ್ ಇಂಗ್ಲಿಷ್ ಮಾಧ್ಯಮ ಶಾಲೆ, ಕ್ರಿಸ್ತರಾಜ ಆಂಗ್ಲ, ಕೌದಳ್ಳಿಯ ಸೇಂಟ್ ಅಂಟೋನಿಸ್, ಪೊನ್ನಾಚಿಯ ಸಾಲೂರು ಸ್ವಾಮಿ ಕೃಪಾ ಶಾಲೆ, ವಡ್ಡರದೊಡ್ಡಿ ಚಾರ್ಲ್ಸ್ ಪ್ರೌಢಶಾಲೆ ಹಾಗೂ ಕೌದಳ್ಳಿ ನೊಬೆಲ್ ಶಾಲೆಗಳು ಶೇ 100ರಷ್ಟು ಫಲಿತಾಂಶ ಗಳಿಸಿವೆ.

ಶೈಕ್ಷಣಿಕ ವಲಯದ ಬಹುತೇಕ ಗ್ರಾಮಗಳು ಗುಡ್ಡಗಾಡನ್ನು ಒಳಗೊಂಡಿದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕೋವಿಡ್ -19 ಆತಂಕದ ಪರಿಸ್ಥಿತಿ ಎದುರಾದರೂ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿದ್ದಾರೆ. 41 ಪ್ರೌಢಶಾಲೆಗಳ ಶಾಲೆಗಳ ಪೈಕಿ 38 ಶಾಲೆಗಳು ಶೇ 90%ಕ್ಕೂ ಹೆಚ್ಚಿನ ಫಲಿತಾಂಶವನ್ನು ತೋರಿ ‘ಎ’ ಶ್ರೇಣಿಯನ್ನು ಪಡೆದಿವೆ. ಮೂರು ಶಾಲೆಗಳು ‘ಬಿ’ ಶ್ರೇಣಿಯನ್ನು ಪಡೆದಿವೆ.

ಶೈಕ್ಷಣಿಕ ವಲಯಗಳ ಶಾಲೆಗಳಲ್ಲಿ ಅತಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಲ್ಲಿ ಹನೂರು ವಿವೇಕಾನಂದ ಪ್ರೌಢಶಾಲೆ ವಿದ್ಯಾರ್ಥಿ ಅಪ್ಸನ್ ಖಾನ್.ಎ 98.24%, ಮಾರ್ಟಳ್ಳಿ ಸೇಂಟ್ ಮೆರಿಸ್ ಪ್ರೌಢ ಶಾಲೆ ಆಂಗ್ಲ ಜನಿಶ 96.64%, ಸರ್ಕಾರಿ ಪ್ರೌಢಶಾಲೆ ರಾಮಾಪುರ ಪಲ್ಲವಿ 96.32% ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾಗಿದ್ದಾರೆ.

ಆರು ಶಾಲೆಗಳ ಏಳು ವಿದ್ಯಾರ್ಥಿಗಳು ಕನ್ನಡ ಭಾಷಾ ಪರೀಕ್ಷೆಯಲ್ಲಿ 125 ಅಂಕಗಳಿಸಿದರೆ 12 ವಿದ್ಯಾರ್ಥಿಗಳು 124 ಅಂಕ ಗಳಿಸಿದ್ದಾರೆ

ಅಧಿಕಾರಿಗಳು, ಶಿಕ್ಷಕರನ್ನು ಅಭಿನಂದಿಸಿದ ಶಾಸಕ

ಸತತ ಐದನೆ ಬಾರಿಗೆ ಎಸ್ಸೆಸ್ಸೆಲ್ಸಿಯಲ್ಲಿ ಜಿಲ್ಲೆಗೆ ಮೊದಲ ಸ್ಥಾನ ಬಂದಿರುವುದಕ್ಕೆ ಶಾಸಕ ಆರ್. ನರೇಂದ್ರ ಅವರು ಪಟ್ಟಣದ ವಸತಿ ಗೃಹದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಶಿಕ್ಷಕರನ್ನು ಅಭಿನಂದಿಸಿದರು.

ನಂತರ ಮಾತನಾಡಿದ ಅವರು, ‘ಆಗಸ್ಟ್ 15ರಂದು ನಡೆಯುವ ಸ್ವಾತಂತ್ರ್ಯ ದಿನಾಚರಣೆಯಂದು ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಗುವುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.