ಸೋಮವಾರ, ಸೆಪ್ಟೆಂಬರ್ 26, 2022
22 °C

ಯಳಂದೂರು ಪಟ್ಟಣ ಆವರಿಸಿದ ಸುವರ್ಣಾವತಿ: 50 ವರ್ಷಗಳ ಬಳಿಕ ನೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಳಂದೂರು: ಸುವರ್ಣಾವತಿ ನದಿ ಉಕ್ಕೇರಿದ ಪರಿಣಾಮ ಪಟ್ಟಣದ ಹಲವು ಭಾಗ ಮಂಗಳವಾರ ಬೆಳಿಗ್ಗೆ  ಜಲಾವೃತವಾಗಿದೆ. 

ನಸುಕಿನಲ್ಲಿ ಮನೆಯಿಂದ ಹೊರ ಬಂದ ಜನರು ನೀರು ಹೆದ್ದಾರಿಯಲ್ಲಿ ತುಂಬಿ ಹರಿಯುತ್ತಿರುವುದನ್ನು ಕಂಡು ಅವಕ್ಕಾದರು. ರಾಜ ಕಾಲುವೆ, ಕಚೇರಿಗಳು, ಜಲಾವೃತವಾಗಿದ್ದು ಬಸ್ ಗಳು ವಾಹನಗಳು ತುಂಬಿ ಹರಿಯುತ್ತಿದ್ದ ನೀರಿನ ನಡುವೆ ಸಾಗುತ್ತಿದ್ದ ದೃಶ್ಯ ಕಂಡು ಬಂದಿತು.

 'ನೆರೆ 50 ವರ್ಷಗಳ ನಂತರ ಪಟ್ಟಣವನ್ನು ಆವರಿಸಿದೆ. ಬಹುತೇಕ ಬಳೆಪೇಟೆ ಮತ್ತು ಪಟ್ಟಣದ ಗೌತಮ್ ಬಡಾವಣೆಯ ಮನೆಗಳ ಸುತ್ತ ನೀರು ತುಂಬಿ ಹರಿಯುತ್ತಿದೆ' ಎಂದು ಪಟ್ಟಣ ಪಂಚಾಯಿತಿ ಸದಸ್ಯ ಮಹೇಶ್ ಹೇಳಿದರು.
 
'ಕಂದಹಳ್ಳಿ ಸಮೀಪ ಸುವರ್ಣಾವತಿ ನದಿ ಸಮೀಪ ಹೆಚ್ಚಿನ ನೀರು ರಭಸವಾಗಿ ಹರಿಯುತ್ತಿದೆ. ನೀರು ಪಟ್ಟಣದ ಹಲವು ಬಡಾವಣೆಗೆ ನುಗ್ಗಲು ಕಾರಣವಾಗಿದೆ' ಎಂದು ಪಟ್ಟಣದ ಸುರೇಶ್ ಮಾಹಿತಿ ನೀಡಿದರು.

'ತಾಲ್ಲೂಕು ಆಡಳಿತದ ವತಿಯಿಂದ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ನೆರೆ ಪೀಡಿತ ಗ್ರಾಮಗಳ ಬಳಿ ಸಿಬ್ಬಂದಿ ನಿಯೋಜಿಸಲಾಗಿದೆ. ಯಾವುದೇ ಆತಂಕ ಬೇಡ' ಎಂದು ತಹಶೀಲ್ದಾರ್ ಕೆ. ಬಿ. ಆನಂದಪ್ಪ ನಾಯಕ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು