ಗುರುವಾರ , ಜೂನ್ 30, 2022
25 °C

ಚಾಮರಾಜನಗರ: 348 ಹೊಸ ಪ್ರಕರಣ, 331 ಮಂದಿ ಸೋಂಕು ಮುಕ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಜಿಲ್ಲೆಯಲ್ಲಿ ಗುರುವಾರ 348 ಪ್ರಕರಣಗಳು ದೃಢಪಟ್ಟಿವೆ. 331 ಮಂದಿ ಗುಣಮುಖರಾಗಿದ್ದಾರೆ.

ಬುಧವಾರ ಸಂಜೆ 6ಗಂಟೆಯಿಂದ ಗುರುವಾರ ಸಂಜೆ 6 ಗಂಟೆಯವರೆಗೆ ಎಂಟು ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಐವರು ಕೋವಿಡ್‌ನಿಂದ ಹಾಗೂ ಮೂವರು ಕೋವಿಡ್‌ಯೇತರ ಕಾರಣದಿಂದ ಕೊನೆಯುಸಿರೆಳೆದಿದ್ದಾರೆ. 

ಜಿಲ್ಲೆಯಲ್ಲಿ ಇದುವರೆಗೆ 27,412 ಪ್ರಕರಣಗಳು ವರದಿಯಾಗಿವೆ. ಗುಣಮುಖರಾದವರ ಸಂಖ್ಯೆ 24 ಸಾವಿರ ದಾಟಿದೆ. ಈವರೆಗೆ 24,119 ಮಂದಿ ಸೋಂಕುಮುಕ್ತರಾಗಿದ್ದಾರೆ. ಸದ್ಯ 2,840 ಸಕ್ರಿಯ ಪ್ರಕರಣಗಳಿವೆ. ಸೋಂಕಿತರಲ್ಲಿ 56 ಮಂದಿ ಐಸಿಯುನಲ್ಲಿದ್ದಾರೆ. 299 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದಾರೆ. ಉಳಿದವರು ಕೋವಿಡ್‌ ಕೇರ್‌ ಕೇಂದ್ರ ಹಾಗೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಗುರುವಾರ 1,468 ಮಂದಿಯ ಗಂಟಲು ದ್ರವದ ಮಾದರಿಗಳ ಪರೀಕ್ಷಾ ವರದಿ ಬಂದಿದ್ದು,  1,138 ವರದಿಗಳು ನೆಗೆಟಿವ್‌ ಬಂದು, 330 ಮಂದಿಗೆ ಸೋಂಕು ಇರುವುದು ಖಚಿತವಾಗಿದೆ. ಹಳೆಯ 18 ಪ್ರಕರಣಗಳನ್ನು ಗುರುವಾರದ ಪ್ರಕರಣಗಳೊಂದಿಗೆ ಸೇರಿಸಲಾಗಿದೆ. 

ವರದಿಯಾದ ಪ್ರಕರಣಗಳಲ್ಲಿ ಅತಿ ಹೆಚ್ಚು ಅಂದರೆ 146 ಪ್ರಕರಣಗಳು ಚಾಮರಾಜನಗರ ತಾಲ್ಲೂಕಿಗೆ ಸೇರಿವೆ. ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 65, ಕೊಳ್ಳೇಗಾಲದಲ್ಲಿ 49, ಹನೂರಿನಲ್ಲಿ 66, ಯಳಂದೂರು ತಾಲ್ಲೂಕಿನಲ್ಲಿ 20 ಮಂದಿಗೆ ಸೋಂಕು ದೃಢಪಟ್ಟಿದೆ. ಎರಡು ಪ್ರಕರಣಗಳು ಹೊರ ಜಿಲ್ಲೆಗೆ ಸೇರಿವೆ.

ಗುಣಮುಖರಾದ 331 ಜನರಲ್ಲಿ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರು. ಕೋವಿಡ್‌ ಕೇರ್‌ ಸೆಂಟರ್‌ನಲ್ಲಿದ್ದ 80 ಹಾಗೂ ಮನೆಯಲ್ಲೇ ಆರೈಕೆಯಲ್ಲಿದ್ದ 248 ಮಂದಿ ಕೋವಿಡ್‌ ಗೆದ್ದಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು