ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೆ ಮಹದೇಶ್ವರ ವನ್ಯಧಾಮದಲ್ಲಿ ಶನಿವಾರ ಬೆಳಿಗ್ಗೆ ಸಫಾರಿ ಆರಂಭ

Published 1 ಡಿಸೆಂಬರ್ 2023, 17:00 IST
Last Updated 1 ಡಿಸೆಂಬರ್ 2023, 17:00 IST
ಅಕ್ಷರ ಗಾತ್ರ

ಹನೂರು: ಮಲೆಮಹದೇಶ್ವರ ವನ್ಯಧಾಮದ ಪಿ.ಜಿ.ಪಾಳ್ಯ ವನ್ಯಜೀವಿ ವಲಯದಲ್ಲಿ ಶನಿವಾರ ಸಫಾರಿ ಆರಂಭವಾಗಲಿದ್ದು, ಶಾಸಕ ಎಂ.ಆರ್.ಮಂಜುನಾಥ್ ಚಾಲನೆ ನೀಡಲಿದ್ದಾರೆ. 

ಇದು ಜಿಲ್ಲೆಯ ನಾಲ್ಕನೇ ಸಫಾರಿ ಕೇಂದ್ರ. ಈಗಾಗಲೇ ಬಂಡೀಪುರ, ಬಿಆರ್‌ಟಿಯ ಕೆ.ಗುಡಿಯಲ್ಲಿ ಸಫಾರಿ ವ್ಯವಸ್ಥೆ ಇದೆ. ಹನೂರು ತಾಲ್ಲೂಕಿನ ಕಾವೇರಿ ವನ್ಯಧಾಮದ ಗೋಪಿನಾಥಂನಲ್ಲಿ ಪ್ರಾಯೋಗಿಕವಾಗಿ ಸಫಾರಿ ಆರಂಭವಾಗಿದೆ. 

ಇದರ ಬೆನ್ನಲ್ಲೇ ಮಲೆ ಮಹದೇಶ್ವರ ವನ್ಯಧಾಮದಲ್ಲೂ ಸಫಾರಿ ಆರಂಭವಾಗಲಿದೆ. ಬೆಳಿಗ್ಗೆ 7 ಗಂಟೆಗೆ ಶಾಸಕರು ಉದ್ಘಾಟಿಸಲಿದ್ದಾರೆ. 

ಬೆಳಿಗ್ಗೆ ಮತ್ತು ಸಂಜೆ ಸಫಾರಿಗೆ ಅವಕಾಶ ಇದ್ದು, ಬೆಳಿಗ್ಗೆ 6ರಿಂದ 9 ಗಂಟೆಯವರೆಗೆ ಮತ್ತು ಮಧ್ಯಾಹ್ನ 3ರಿಂದ 6 ಗಂಟೆಯವರೆಗೆ ಸಫಾರಿ ಸೌಲಭ್ಯವಿದೆ.

ಸಫಾರಿ ದರ ವಯಸ್ಕರಿಗೆ ₹400, ಮಕ್ಕಳಿಗೆ ₹200 ಹಾಗೂ ವಾಹನ ಪ್ರವೇಶ ಶುಲ್ಕ ₹100 ನಿಗದಿ ಪಡಿಸಲಾಗಿದೆ.

ಸಫಾರಿ ವಲಯ

ಸಫಾರಿ ವಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT