ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗುಂಡ್ಲುಪೇಟೆ: ನಾಳೆ ಚಾಮುಂಡೇಶ್ವರಿ ದೇಗುಲ ಉದ್ಘಾಟನೆ

Published 17 ಫೆಬ್ರುವರಿ 2024, 14:21 IST
Last Updated 17 ಫೆಬ್ರುವರಿ 2024, 14:21 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಪಟ್ಟಣದ ಕಿತ್ತೂರುರಾಣಿ ಚನ್ನಮ್ಮ ರಸ್ತೆ 5ನೇ ಕ್ರಾಸ್‍ನಲ್ಲಿ ನೂತನವಾಗಿ ನಿರ್ಮಿಸಿರುವ ಚಾಮುಂಡೇಶ್ವರಿ  ದೇವಸ್ಥಾನ ಹಾಗೂ ನೂತನ ವಿಗ್ರಹದ ಪ್ರತಿಷ್ಠಾಪನೆ ಮತ್ತು ಕುಂಭಾಭಿಷೇಕ ನಾಳೆ (ಭಾನುವಾರ) ಬೆಳಿಗ್ಗೆ 11.55ಕ್ಕೆ ವೃಷಭ ಲಗ್ನದಲ್ಲಿ ನೆರವೇರಲಿದೆ.

ದೇವಸ್ಥಾನದ ಪ್ರಾರಂಭೋತ್ಸವದ ಹಿನ್ನೆಲೆಯಲ್ಲಿ ಈಗಾಗಲೇ ದೇವಾಲಯವನ್ನು ತಳಿರುತೋರಣ ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.

ಈ ಕಾರ್ಯಕ್ರಮದ ಸಾನಿಧ್ಯವನ್ನು ಪಡಗೂರು ಅಡವಿ ಮಠಾಧ್ಯಕ್ಷರಾದ ಶಿವಲಿಂಗೇಂದ್ರಮಹಾಸ್ವಾಮಿಗಳು ವಹಿಸಲಿದ್ದು, ಪಟ್ಟಣದ ಭಾವಸಾರ್ ಕ್ಷತ್ರಿಯ ಸಮಾಜದ ಅಧ್ಯಕ್ಷ ವಿ.ಕೆ.ಶಂಕರ್‍ರಾವ್ ವಾದೋನೆ ನೇತೃತ್ವದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕ ಎಚ್.ಎಂ.ಗಣೇಶ್‍ಪ್ರಸಾದ್, ಮುಖಂಡ ಸಿ.ಎಸ್.ನಿರಂಜನಕುಮಾರ್, ವೀರಶೈವ ಮಹಾಸಭಾ ಅಧ್ಯಕ್ಷ ನಂಜಪ್ಪ, ಮುಖಂಡ ಪಿ.ಗಿರೀಶ್, ಮೈಸೂರು ಭಾವಸಾರ ಕ್ಷತ್ರಿಯ ಮಂಡಲಿ ಅಧ್ಯಕ್ಷ ಆರ್.ವಿ.ಶಿವಾಜಿರಾವ್ ರಂಪೂರೆ ಸೇರಿ ಭಾವಸಾರ ಕ್ಷತ್ರಿಯ ಚಾಮುಂಡೇಶ್ವರಿ ದೇವಸ್ಥಾನ ಸಮಿತಿ ಮತ್ತು ಭಾವಸಾರ ಕ್ಷತ್ರಿಯ ಸಮಾಜದವರು ಭಾಗವಹಿಸುವರು.

ವಿಗ್ರಹದ ಪ್ರತಿಷ್ಠಾಪನೆ ನಂತರ ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT