ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೈಕ್‌ನಿಂದ ಬಿದ್ದು ಮಹಿಳೆ ಸಾವು

Published 7 ಜುಲೈ 2024, 16:18 IST
Last Updated 7 ಜುಲೈ 2024, 16:18 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ತಾಲ್ಲೂಕಿನ ಬೆಂಡಗಹಳ್ಳಿ ಗೇಟ್ ಸಮೀಪ ಬೈಕ್ ಹಿಂಬದಿ ಚಕ್ರಕ್ಕೆ ಸೀರೆ ಸೆರಗು ಸಿಕ್ಕಿಹಾಕಿಕೊಂಡು ಬಿದ್ದು ಮಹಿಳೆ ಮೃತಪಟ್ಟರು.

ಬೇಗೂರು ನಿವಾಸಿ ಮಲ್ಲರಾಜಮ್ಮ (65) ಮೃತರು.

ಮಲ್ಲರಾಜಮ್ಮ ತನ್ನ ಮಗನೊಂದಿಗೆ ಕೆಬ್ಬೆಕಟ್ಟೆ ಶನಿದೇವರ ದೇವಸ್ಥಾನಕ್ಕೆ ಹೋಗಿ ವಾಪಸ್ ಬರುತ್ತಿದ್ದ ವೇಳೆ ಬೈಕ್ ಹಿಂಬದಿ ಚಕ್ರಕ್ಕೆ ಸೀರೆ ಸೆರಗು ಸಿಕ್ಕಿಕೊಂಡಿತು. ಇದರಿಂದ ಕೆಳಗೆ ಬಿದ್ದು ತಲೆಗೆ ತೀವ್ರ ಪೆಟ್ಟಾಯಿತು. ಕೂಡಲೇ ಬೇಗೂರು ಆಸ್ಪತ್ರೆಗೆ ರವಾನಿಸಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ರವಾನಿಸಲಾಯಿತು, ಆದರೂ ಮೃತಪಟ್ಟರು. ನಂತರ ಬೇಗೂರು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರ ಮಾಡಲಾಯಿತು.

ಈ ಸಂಬಂಧ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT