ಯಳಂದೂರು: ‘ದೇಗುಲಗಳ ಪ್ರಶಾಂತ ತಾಣ ಮನಸ್ಸನ್ನು ಅರಳಿಸುತ್ತದೆ, ಸಕಾರಾತ್ಮಕ ಮನೋಭಾವ ಮೂಡಿಸುತ್ತದೆ. ಈ ದಿಸೆಯಲ್ಲಿ ಶ್ರದ್ಧಾ ಕೇಂದ್ರಗಳನ್ನು ಸ್ವಚ್ಛತೆಯಿಂದ ಕಾಪಾಡಿಕೊಳ್ಳುವ ಜವಾಬ್ದಾರಿ ಎಲ್ಲರದ್ದಾಗಿದೆ’ ಎಂದು ಶಿವ ಪಾರ್ವತಿ ದೇವಳದ ಹಿರಿಯ ಆಗಮಿಕ ರಾಮಪ್ಪ ಹೇಳಿದರು.

ತಾಲ್ಲೂಕಿನ ಗೌಡಹಳ್ಳಿ-ಮಲಾರಪಾಳ್ಯ ಗ್ರಾಮದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಮಹಿಳಾ ಸಂಘದ ಸದಸ್ಯರು ಭಾನುವಾರ ಆಯೋಜಿಸಿದ್ದ ಶಿವ ಪಾರ್ವತಿ ದೇವಾಲಯದ ಸ್ವಚ್ಛತಾ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.

‘ದೇವಾಲಯಗಳಲ್ಲಿ ಭಕ್ತರ ದಟ್ಟಣೆ ಹೆಚ್ಚಿರುತ್ತದೆ. ಹಾಗಾಗಿ, ಭಕ್ತರು ಶುದ್ಧ ಕುಡಿಯುವ ನೀರು, ಶೌಚಾಲಯಗಳ ಸ್ವಚ್ಛತೆ, ಪ್ರಾಂಗಣ ಶುದ್ಧವಾಗಿ ಇಟ್ಟುಕೊಳ್ಳುವ ಮೂಲಕ ನೈರ್ಮಲ್ಯಕ್ಕೆ ಆದ್ಯತೆ ನೀಡಬೇಕು. ಪೂಜಾ ಸಮಯದಲ್ಲಿ ಶಾಂತಿಯಿಂದ ವರ್ತಿಸಬೇಕು. ಧ್ಯಾನ ಯೋಗಗಳ ಮೂಲಕ ಮನಸ್ಸನ್ನು ಚೇತನ ಗೊಳಿಸಿಕೊಳ್ಳಬೇಕು. ಇದರಿಂದ ದೇಹಕ್ಕೆ ಬೇಕಾದ ಚೇತನ, ಲವಲವಿಕೆ ಹಾಗೂ ಪ್ರಶಾಂತತೆ ಮೂಡಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

ಸೇವಪ್ರತಿನಿಧಿ ಲಲಿತಾ ದೊರೆಸ್ವಾಮಿ, ವೀರಣ್ಣಸ್ವಾಮಿ ನಾಗರತ್ನ, ಶೋಭಾ, ಪಾರ್ವತಿ, ಪ್ರಭಾಮಣಿ ಸುಂದರಮ್ಮ, ಲತಾ, ನಾಗಮಣಿ ಗ್ರಾಮದ ಮುಖಂಡರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.