ಯಳಂದೂರು: ಹೆಚ್ಚು ಚಿನ್ನದ ಆಸೆ ತೋರಿಸಿ ಮಹಿಳೆಯ ಚಿನ್ನದ ಮಾಂಗಲ್ಯ ಸರ ಬಿಚ್ಚಿಸಿಕೊಂಡು ವಂಚಿಸುತ್ತಿದ್ದ ಇಬ್ಬರನ್ನು ಪಟ್ಟಣ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಚಿಕ್ಕಬೆನ್ನೂರಿನ ಜಯಮ್ಮ (65), ತೂಮಕೂರು ತಾಲ್ಲೂಕಿನ ಬೆಳ್ಳಾವಿ ಗ್ರಾಮದ ಕಾವ್ಯ (32) ಬಂಧಿತರು. ಅವರಿಂದ ₹ 1.49 ಲಕ್ಷ ಮೌಲ್ಯದ ಚಿನ್ನದ ಸರ ವಶಕ್ಕೆ ಪಡೆದಿದ್ದಾರೆ.

ಮಾಂಗಲ್ಯ ಸರ ಕಳೆದುಕೊಂಡಿದ್ದ ಗಂಗವಾಡಿ ಗ್ರಾಮದ ಮಹದೇವಮ್ಮ ಈ ಬಗ್ಗೆ ದೂರು ದಾಖಲಿಸಿದ್ದರು.

ಘಟನೆ ವಿವರ: ಜೂ. 23ರಂದು ಗಂಗವಾಡಿ ಗ್ರಾಮದ ಮಹದೇವಮ್ಮ ಪಟ್ಟಣದ ಸಂತೆಯಲ್ಲಿ ದಿನಸಿ ಖರೀದಿ ಮಾಡುತ್ತಿದ್ದಾಗ ಆಕೆಯ ಬಳಿ ಬಂದ ಆರೋಪಿಗಳು, ತಮಗೆ ಹಣದ ಅವಶ್ಯಕತೆ ಇರುವುದಾಗಿ ತಿಳಿಸಿದ್ದಾರೆ. ನಕಲಿ ಚಿನ್ನದ ಒಡವೆಗಳನ್ನು ನೀಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ನಂತರ ಆಕೆಯ ಚಿನ್ನದ ಸರವನ್ನು ಬಿಚ್ಚಿಸಿಕೊಂಡು ಪರಾರಿಯಾಗಿದ್ದರು. ಸೆ.17 ರಂದು ತಾಲ್ಲೂಕಿನ ಹೊನ್ನೂರು ರಸ್ತೆಯಲ್ಲಿ ಮಹಿಳೆಯರು ಅನುಮಾನಸ್ಪದವಾಗಿ ತಿರುಗಾಡುತ್ತಿದ್ದು, ಮಹಿಳಾ ಪೋಲೀಸರ ಸಹಾಯದಿಂದ ಇಬ್ಬರನ್ನು ಆರೋಪಿತರನ್ನು ವಿಚಾರಣೆ ನಡೆಸಿದಾಗ ಸರ ದೋಚಿದ್ದು ಖಚಿತವಾಗಿದೆ.

ಎಸ್ಪಿ ಬಿ.ಟಿ.ಕವಿತಾ, ಹೆಚ್ಚುವರಿ ಪೋಲೀಸ್ ವರಿಷ್ಠಾಧಿಕಾರಿ ಅಧಿಕಾರಿ ಶಶಿಧರ್, ಡಿವೈಎಸ್ಪಿ ಧರ್ಮೇಂದ್ರ ಮಾರ್ಗದರ್ಶನದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಶ್ರೀಕಾಂತ್, ಎಸ್ಐ ಆಕಾಶ್, ಸಿಬ್ಬಂದಿ ಅನ್ವರ್ ಪಾಷ, ರಾಮಶೆಟ್ಟಿ, ಜಡೇಸ್ವಾಮಿ, ಪ್ರಮೋದ್, ವಾಸುದೇವಮೂರ್ತಿ, ನಾಗೇಂದ್ರ, ನಂಜುಂಡಸ್ವಾಮಿ, ಸುಮಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.