ಚಾಮರಾಜನಗರ: ಸುತ್ತಮುತ್ತಲೂ ಹಸಿರು ಕಾನನ. ಪಕ್ಕದಲ್ಲಿಯೇ ಹರಿಯುವ `ಭಾರ್ಗವಿ~ ತೊರೆ. ದೂರದ ಬೇಡಗುಳಿ, ಮೊಣಕೈಪೋಡು, ನೆಲ್ಲಿಕತ್ರಿ ಸೇರಿದಂತೆ 30ಕ್ಕೂ ಹೆಚ್ಚು ಪೋಡುಗಳಿಂದ ಬಂದಿದ್ದ ಸೋಲಿಗರು ಮನದಲ್ಲಿಯೇ ಮಾದೇಶ್ವರನ ಜಪ ಮಾಡುತ್ತಿದ್ದರು. ದೇವರಿಗೆ ಪೂಜೆ ಸಲ್ಲಿಸಿದ ಬಳಿಕ `ಗೋರುಕಾನ~ ಹಾಡು ಕಾಡಿನಲ್ಲಿ ಅನುರಣಿಸಿತು. ಹಾಡಿನೊಂದಿಗೆ ಸೋಲಿಗರ ನೃತ್ಯವೂ ಆರಂಭಗೊಂಡಿತು.

ಜಿಲ್ಲೆಯ ಬಿಳಿಗಿರಿರಂಗನಾಥಸ್ವಾಮಿ ಹುಲಿ ರಕ್ಷಿತಾರಣ್ಯದಲ್ಲಿರುವ ಕೆರೆದಿಂಬ ಪೋಡಿಗೆ ಅಂಟಿಕೊಂಡಿರುವ ದೊಡ್ಡಸಂಪಿಗೆಯಲ್ಲಿ ಸೋಮವಾರ ರಾತ್ರಿ ಸೋಲಿಗರ `ರೊಟ್ಟಿ ಹಬ್ಬ~ದ ಸಂಭ್ರಮ ಮೇಳೈಸಿತ್ತು. ವಿವಿಧ ಪೋಡುಗಳಿಂದ ಬಂದಿದ್ದ ಸೋಲಿಗರು ಮಾದೇಶ್ವರಸ್ವಾಮಿ, ಜಡೆಸ್ವಾಮಿ, ಕಡವಿನ ಬಸಪ್ಪ, ಕುಂಭೇಶ್ವರ, ಕೇತಪ್ಪ, ಕಾಡಯ್ಯ ಸ್ವಾಮಿಗೆ ಪೂಜೆ ಸಲ್ಲಿಸಿದರು.

ರಾಗಿ ರೊಟ್ಟಿ, ತಾಜಾ ಕಾಯಿಪಲ್ಲೆ, ಕುಂಬಳಕಾಯಿ ಗೊಜ್ಜು, ಅನ್ನ-ಸಾಂಬಾರು, ಹಲಸಿನ ಪಲ್ಯ, ಪಾಯಸ ಸೇರಿದಂತೆ ಸಾಂಪ್ರದಾಯಿಕ ಅಡಿಗೆಯ ಸಂಭ್ರಮವಿತ್ತು. ಗೋರುಕಾನ ಹಾಡಿನೊಂದಿಗೆ ಸೋಲಿಗರು ಕಾಡು, ಪ್ರಾಣಿಗಳ ವರ್ಣನೆ ಮಾಡಿದರು. ಮಹಿಳೆಯರು, ಮಕ್ಕಳು ಸೇರಿದಂತೆ ಯುವಕರು ನೃತ್ಯ ಪ್ರದರ್ಶಿಸಿದರು. ಮಂಗಳವಾರ ಮುಂಜಾನೆವರೆಗೂ ನೃತ್ಯ ಮುಂದುವರಿಯಿತು.

ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಮಳೆಯಾಗಿಲ್ಲ. ದೊಡ್ಡಸಂಪಿಗೆ ಪಕ್ಕದಲ್ಲಿ ಹರಿಯುವ `ಭಾರ್ಗವಿ~ ತೊರೆಯಲ್ಲೂ ನೀರಿನ ಹರಿವು ಕಡಿಮೆ ಇತ್ತು. ಇದರ ಪರಿಣಾಮ ಸೋಲಿಗರು ಕುಡಿಯುವ ನೀರಿಗಾಗಿ ಪಕ್ಕದ ಕೆರೆದಿಂಬ ಪೋಡಿನ ಬಳಿಯ ತೆರೆದ ಗುಂಡಿಗಳನ್ನೇ ಆಶ್ರಯಿಸಬೇಕಾಯಿತು.

ಕೆರೆದಿಂಬದ ಬಳಿ ಸಂಪಿಗೆ ಮರವಿದೆ. ಇದು ಸೋಲಿಗರ ಪವಿತ್ರ ವೃಕ್ಷ. ಹೀಗಾಗಿ, ಈ ಪ್ರದೇಶಕ್ಕೆ `ದೊಡ್ಡಸಂಪಿಗೆ~ ಎಂದು ಕರೆಯಲಾಗುತ್ತಿದ್ದು, 101 ಕಲ್ಲಿನ ಲಿಂಗಗಳನ್ನು ಪ್ರತಿಷ್ಠಾಪಿಸಲಾಗಿದೆ.

ಹಬ್ಬದಲ್ಲೇ ವಿವಾಹ
ರೊಟ್ಟಿ ಹಬ್ಬದಲ್ಲಿಯೇ ಸೋಲಿಗರ ವಿವಾಹ ನಡೆಯುವುದು ವಿಶೇಷ. ದೊಡ್ಡಸಂಪಿಗೆಗೆ ವಿವಿಧ ಪೋಡುಗಳಿಂದ ಹೆಣ್ಣುಮಕ್ಕಳು ಕುಟುಂಬದ ಸದಸ್ಯರೊಟ್ಟಿಗೆ ಬರುತ್ತಾರೆ. ಸೋಲಿಗ ಯುವಕರು ತಮಗೆ ಇಷ್ಟವಾದ ಯುವತಿಯನ್ನು ವಿವಾಹಕ್ಕೆ ಆಯ್ಕೆ ಮಾಡಿಕೊಳ್ಳುವ ಸಂಪ್ರದಾಯ ಈಗಲೂ ಇದೆ.

ಪರಸ್ಪರ ಒಪ್ಪಿಗೆಯಾದ ಬಳಿಕ ಒಟ್ಟಾಗಿ ನೃತ್ಯದಲ್ಲಿ ಪಾಲ್ಗೊಳ್ಳುತ್ತಾರೆ. ಬಳಿಕ ಪೋಷಕರ ಅರಿವಿಗೆ ಬಾರದಂತೆ ಕಾಡಿನೊಳಕ್ಕೆ ಹೋಗುತ್ತಾರೆ. ಹಬ್ಬದ ರಾತ್ರಿಯಂದು ಅಲ್ಲಿಯೇ ವಾಸ್ತವ್ಯ ಹೂಡುತ್ತಾರೆ. ಬಳಿಕ ಪೋಡುಗಳಿಗೆ ಮರಳುತ್ತಾರೆ. ಆಗ ಅವರಿಬ್ಬರು ಸತಿ-ಪತಿಯೆಂದು ಪೋಡಿನ ಯಜಮಾನರಿಂದ ಅಧಿಕೃತ ತೀರ್ಮಾನ ಹೊರಬೀಳುತ್ತದೆ.

`ಪ್ರಸ್ತುತ ಆಧುನಿಕತೆಯ ಪ್ರಭಾವ ಗಿರಿಜನರ ಮೇಲೂ ಬೀರಿದೆ. ಇದರಿಂದ ಬುಡಕಟ್ಟು ಸಂಸ್ಕೃತಿಗೆ ತೊಡಕಾಗುತ್ತಿದೆ. ರೊಟ್ಟಿ ಹಬ್ಬದಲ್ಲಿ ಪರಸ್ಪರ ಒಪ್ಪಿಕೊಂಡ ಹೆಣ್ಣು-ಗಂಡು ಹತ್ತಿರದ ಪೋಡುಗಳು ಹಾಗೂ ಕಾಡಿನೊಳಕ್ಕೆ ಹೋಗುತ್ತಾರೆ.

ಅವರು ಪುನಃ ಸ್ವಂತ ಪೋಡುಗಳಿಗೆ ಮರಳುವಾಗ ಕೆಲವೊಮ್ಮೆ ಒಂದು ವಾರ ಕಳೆದಿರುತ್ತದೆ. ಅವರು ಪೋಡಿಗೆ ಬಂದಾಗಲಷ್ಟೇ ವಿವಾಹವಾಗಿರುವುದು ಬೆಳಕಿಗೆ ಬರುತ್ತದೆ~ ಎಂದು ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘ ಕಾರ್ಯದರ್ಶಿ ಸಿ. ಮಾದೇಗೌಡ `ಪ್ರಜಾವಾಣಿ~ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.