ಕೊಳ್ಳೇಗಾಲ:  ಪಟ್ಟಣದಲ್ಲಿ ವಿವಿಧ ತರಬೇತಿ ನೀಡುವ ಸಲುವಾಗಿಯೇ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಸಾಮರ್ಥ್ಯ ಸೌಧ ಉದ್ಘಾಟನೆ ಗೊಂಡರೂ ತರಬೇತಿಗೆ ದೊರೆಯುತ್ತಿಲ್ಲ. ತಾಪಂ ವತಿಯಿಂದ ಗ್ರಾ.ಪಂ. ಸದಸ್ಯರು, ಕಾರ್ಯ ದರ್ಶಿಗಳು, ಮಹಿಳಾ ಸಂಘಗಳು ಸೇರಿದಂತೆ ಒಂದಿಲ್ಲೊಂದು ತರಬೇತಿ ಕಾರ್ಯಕ್ರಮ ನಡೆಸಲಾ ಗುತ್ತದೆ. ತಾಪಂ ಕಚೇರಿಯಲ್ಲಿರುವ ಸಣ್ಣ ಸಭಾಂಗಣದಲ್ಲೇ ತರಬೇತಿ ನಡೆಸಲು ತೊಂದರೆ ಉಂಟಾಗಿತ್ತು.

ಈ ಹಿನ್ನೆಲೆಯಲ್ಲಿ ತಾ.ಪಂ. ಆವರಣದಲ್ಲಿಯೇ ಜಿಪಂ ಎಂಜಿನಿಯರಿಂಗ್ ವಿಭಾಗದ ಕಚೇರಿ ಹೊಂದಿ ಕೊಂಡಂತೆ ತರಬೇತಿಗಾಗಿಯೇ 28.36 ಲಕ್ಷ ರೂ. ಅಂದಾಜುವೆಚ್ಚದಲ್ಲಿ ಕಟ್ಟಡ ಕಾಮಗಾರಿಯನ್ನು ಗ್ರಾಮ ಸ್ವರಾಜ್ ಯೋಜನೆಯಡಿ ಕೈಗೆತ್ತಿಕೊಂಡು ಮುಗಿಸಲಾಗಿತ್ತು. ಶಾಸಕ ಆರ್. ನರೇಂದ್ರ ನೆರವೇರಿಸಿಯೂ ಆಗಿದೆ. ಆದರೆ ಸೌಧ ಮಾತ್ರ ಬೀಗ ಜಡಿತಕ್ಕೊಳಗಾಗಿ ಹಳೇ ಸಭಾಂಗಣದಲ್ಲಿಯೇ ತರಬೇತಿ ನಡೆಯುವಂತಾಗಿದೆ. ಗುತ್ತಿಗೆದಾರರಿಗೆ ಈ ಸೌಧದ ಸಂಬಂಧ ಇನ್ನೂ 10ಲಕ್ಷ ರೂ. ಬಾಕಿ ನೀಡಬೇಕಾಗಿರುವುದೇ ಈ ಸೌಧ ಬೀಗಜಡಿಯಲು ಕಾರಣ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.