ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ಸಮುದಾಯ ದೇಶದ ರೂವಾರಿ: ನಂಜುಂಡಯ್ಯ

Last Updated 6 ಜನವರಿ 2012, 10:45 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಯುವ ಸಮುದಾಯ ದೇಶದ ಪ್ರಗತಿಗೆ ರುವಾರಿಗಳು. ಅವರಲ್ಲಿ ನಾಯಕತ್ವ ಗುಣ ಹಾಗೂ ವ್ಯಕ್ತಿತ್ವ ವಿಕಸನ ಗೊಳಿಸುವುದೇ ಇಂಟ್ರಾಕ್ಟ್ ಸಂಸ್ಥೆಯ ಧ್ಯೇಯ ಎಂದು ರೋಟರಿ ಸಂಸ್ಥೆ ಅಧ್ಯಕ್ಷ ಎಂ. ನಂಜುಂಡಯ್ಯ ತಿಳಿಸಿದರು.

ಪಟ್ಟಣದ ಎಂಜಿಎಸ್‌ವಿ ಪದವಿ ಪೂರ್ವ ಕಾಲೇಜಿನಲ್ಲಿ ನೂತನವಾಗಿ ಪ್ರಾರಂಭಿಸಿರುವ ಇಂಟ್ರಾಕ್ಟ್ ಸಂಸ್ಥೆಗೆ ಅಂತರರಾಷ್ಟ್ರೀಯ ರೋಟರಿ ಸಂಸ್ಥೆ ನೀಡಿರುವ ಸನ್ನದು ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆ, ಎನ್‌ಎಸ್‌ಎಸ್ ಹಾಗೂ ಇಂಟ್ರಾಕ್ಟ್ ಸಂಸ್ಥೆಗಳ ಮಾರ್ಗದರ್ಶನ ದಲ್ಲಿ ವ್ಯಕ್ತಿತ್ವ ರೂಪಿಸಿಕೊಳ್ಳಲು ಮುಂದಾಗಬೇಕು ಎಂದರು.

ಜನಪರ ಸೇವೆ ಗುರಿಯನ್ನಾಗಿಸಿ ಕಳೆದ 105 ವರ್ಷಗಳಿಗೂ ಹೆಚ್ಚು ಕಾಲ ವಿಶ್ವದಲ್ಲಿ ರೋಟರಿ ಸಂಸ್ಥೆ ಸೇವೆ ಸಲ್ಲಿಸುತ್ತಿದೆ. ನಮ್ಮ ಕಾಲೇಜು ಗುರುತಿಸಿ ಇಂಟ್ರಾಕ್ಟ್ ಸ್ಥಾಪಿಸಿರುವುದಕ್ಕೆ ಪ್ರಾಂಶು ಪಾಲ ಬಿ. ಮಹದೇವ ಅಭಿನಂದನೆ ಸಲ್ಲಿಸಿದರು.

ಇಂಟ್ರಾಕ್ಟ್ ಸಂಸ್ಥೆಯ ಧ್ಯೇಯೋದ್ದೇಶ ಗಳ ಬಗ್ಗೆ ರೋಟರಿ ತರಬೇತುದಾರ ಕೆ. ಪುಟ್ಟರಸಶೆಟ್ಟಿ ಮಾಹಿತಿ ನೀಡಿದರು. ಸಂಸ್ಥೆ ಸದಸ್ಯರಿಗೆ ಇಂಟ್ರಾಕ್ಟ್ ಮುಖ್ಯಸ್ಥ ಜೋಸೆಫ್ ಫೆರ್ನಾಂಡಿಸ್ ಗುರುತಿನ ಚೀಟಿ ವಿತರಿಸಿದರು.

ಮಾಜಿ ಅಧ್ಯಕ್ಷ ಟಿ.ಸಿ. ವೀರಭದ್ರಯ್ಯ, ಇಂಟ್ರಾಕ್ಟ್ ಅಧ್ಯಕ್ಷ ಅರುಣ್, ಕಾರ್ಯದರ್ಶಿ ಶ್ರೀಧರ್, ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ನರಸಿಂಹ ಮೂರ್ತಿ, ಉಪನ್ಯಾಸಕ ನೀಲಿಸಿದ್ದಯ್ಯ, ಮಾಣಿಕ್ಯಂ, ಗುರುಪಾದಪ್ಪ, ಮಹದೇವಪ್ರಸಾದ್, ಸುಂದರ್, ಚಿಕ್ಕಣ್ಣಸ್ವಾಮಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT