ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿ: ಹೆಬ್ಬರಿ ದೇಗುಲದ ಹುಂಡಿಯಲ್ಲಿ ₹1 ಲಕ್ಷ ಕಳುವು

Published 22 ಮೇ 2024, 14:29 IST
Last Updated 22 ಮೇ 2024, 14:29 IST
ಅಕ್ಷರ ಗಾತ್ರ

ಚಿಂತಾಮಣಿ: ತಾಲ್ಲೂಕಿನ ಹೆಬ್ಬರಿ ಗ್ರಾಮದಲ್ಲಿ ದೊಡ್ಡಕೆರೆ ಬಳಿಯಲ್ಲಿರುವ ವೀರಭದ್ರಸ್ವಾಮಿ ದೇವಾಲಯದ ಬೀಗ ಹೊಡೆದು ಒಳನುಗ್ಗಿರುವ ಕಳ್ಳರು ಹುಂಡಿಯ ಬೀಗ ಮುರಿದು ₹1ಲಕ್ಷ ನಗದು ಕಳ್ಳತನ ಮಾಡಿದ್ದಾರೆ.

ಈ ಸಂಬಂದ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ.

‘ವರ್ಷದ ಹಿಂದೆ ದೇವಾಲಯದ ಟ್ರಸ್ಟ್‌‌ನಿಂದ ನೂತನವಾಗಿ ದೇವಾಲಯ ಪ್ರತಿಷ್ಠಾಪಿಸಲಾಗಿತ್ತು. ಪ್ರತಿದಿನ ಬೆಳಿಗ್ಗೆ 7-30 ರಿಂದ 10 ಗಂಟೆಯವರೆಗೆ ಬಾಗಿಲು ತೆರೆದು ಪೂಜೆ ಸಲ್ಲಿಸಲಾಗುತ್ತಿತು. ನನ್ನ ಬಳಿ ಒಂದು ಬೀಗದ ಕೀ ಮತ್ತು ಅರ್ಚಕ ಮಂಜುನಾಥ ದೀಕ್ಷಿತ್ ಬಳಿ ಮತ್ತೊಂದು ಕೀ ಇತ್ತು’.

‘ಮೇ 18 ರಂದು ರಾತ್ರಿ 7 ಗಂಟೆಯಲ್ಲಿ ನಾನು ಮತ್ತು ಗ್ರಾಮದ ರಾಮಚಂದ್ರಪ್ಪ ಬಾಗಿಲು ಬೀಗಹಾಕಿಕೊಂಡು ಹೋಗಿದ್ದೆವೆ. ಮರುದಿನ ಬೆಳಿಗ್ಗೆ 6 ಗಂಟೆಗೆ ದೇವಸ್ಥಾನದ ಬಾಗಿಲು ತೆರೆಯಲು ಹೋದಾಗ ಕಳ್ಳತನ ಆಗಿರುವುದು ಗೊತ್ತಾಗಿದೆ’ ಎಂದು ದೇವಸ್ಥಾನದ ಧರ್ಮದರ್ಶಿ ಎನ್.ವೀರಭದ್ರಾರೆಡ್ಡಿ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT